ETV Bharat / bharat

ಶಾಲೆಯ ಮಕ್ಕಳು ಹೋಮ್​ವರ್ಕ್ ಮಾಡದಿದ್ರೆ ಬೇವಿನ ರಸ ಕುಡಿಯುವ ಶಿಕ್ಷೆ: ಸೂರತ್​​ನಲ್ಲಿ ವಿಶಿಷ್ಟ ಶಾಲೆ

author img

By

Published : Apr 14, 2022, 1:47 PM IST

ಗುಜರಾತ್​ನ ಸೂರತ್​ನಲ್ಲಿ ವಿಶಿಷ್ಟವಾದ ಶಾಲೆಯೊಂದಿದೆ. ಈ ಶಾಲೆಯಲ್ಲಿ ಮಕ್ಕಳು ತಪ್ಪು ಮಾಡಿದರೆ ಅವರಿಗೆ ಬೇವಿನ ರಸ ಕುಡಿಯುವ ಶಿಕ್ಷೆ ನೀಡಲಾಗುತ್ತದೆ. ಇದರ ಜೊತೆಗೆ ರಾಷ್ಟ್ರಾಭಿಮಾನವನ್ನು ಸಹ ಹೆಚ್ಚಿಸುವ ಕೆಲಸ ಮಾಡಲಾಗುತ್ತದೆ.

surat-students-who-make-mistakes-in-this-school-in-surat-are-given-severe-punishment
ಶಾಲೆಯ ಮಕ್ಕಳು ಹೋಮ್​ವರ್ಕ್ ಮಾಡದಿದ್ರೆ ಬೇವಿನ ರಸ ಕುಡಿಯುವ ಶಿಕ್ಷೆ: ಸೂರತ್​​ನಲ್ಲಿ ವಿಶಿಷ್ಟ ಶಾಲೆ

ಸೂರತ್(ಗುಜರಾತ್): ಶಾಲೆಯಲ್ಲಿ ಮಕ್ಕಳು ತಪ್ಪು ಮಾಡುವುದು ಸಹಜ. ಮಕ್ಕಳು ತಪ್ಪು ಮಾಡಿದರೆ, ಅವರ ತಪ್ಪನ್ನು ಶಿಕ್ಷಕರು ತಿದ್ದುತ್ತಾರೆ. ಒಂದು ವೇಳೆ ಹೋಮ್​ ವರ್ಕ್​​ನಲ್ಲಿ ತಪ್ಪು ಮಾಡಿದರೆ, ಅದನ್ನು ಕೂಡಾ ಸರಿಪಡಿಸಿ ಕಳಿಸಲಾಗುತ್ತದೆ. ಒಮ್ಮೊಮ್ಮೆ 'ಶಿಕ್ಷೆ'ಯನ್ನೂ ನೀಡಲಾಗುತ್ತದೆ. ಆದರೆ ಗುಜರಾತ್​ನ ಸೂರತ್​ನಲ್ಲಿ ಇರುವ ಶಾಲೆಯೊಂದಲ್ಲಿ ಮಕ್ಕಳು ತಪ್ಪು ಮಾಡಿದರೆ, ಅವರಿಗೆ ಬೇವಿನ ರಸ ನೀಡುತ್ತಂತೆ. ಹೌದು, ಹೋಮ್ ವರ್ಕ್​ ಮಾಡದ ಅಥವಾ ಇನ್ಯಾವುದೇ ತಪ್ಪುಗಳನ್ನು ಮಾಡುವ ವಿದ್ಯಾರ್ಥಿಗಳಿಗೆ ಬೇವಿನ ರಸವನ್ನು ನೀಡಲಾಗುತ್ತದೆ.

ಸೂರತ್​ನ ಅಡಾಜನ್ ಪ್ರದೇಶದ ವಿದ್ಯಾಕುಂಜ್ ಶಾಲೆಯ ವಿದ್ಯಾರ್ಥಿಗಳು ಸಮವಸ್ತ್ರವನ್ನು ಧರಿಸದೆ ಶಾಲೆಗೆ ಬಂದರೆ ಅಥವಾ ತಮ್ಮ ಮನೆಕೆಲಸವನ್ನು ಮುಗಿಸದೆ ಶಾಲೆಗೆ ಬಂದರೆ ಅವರಿಗೆ ಬೇವಿನ ರಸ ನೀಡಲಾಗುತ್ತದೆ. ಇದಷ್ಟು ಮಾತ್ರವಲ್ಲದೇ ಅಲ್ಲಿನ ಪ್ರಾಂಶುಪಾಲರಾದ ಮಹೇಶ್ ಪಾಟೀಲ್​ ಗಾಂಧಿ ತತ್ವಗಳನ್ನು ಅನುಸರಿಸುತ್ತಿರುವ ಕಾರಣದಿಂದ ಮಕ್ಕಳಲ್ಲಿ ಗಾಂಧಿ ತತ್ವವನ್ನು ಬೆಳೆಸಲು ಮತ್ತು ರಾಷ್ಟ್ರಾಭಿಮಾನ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದರಿಂದ ಅವರಿಗೆ ಶಿಕ್ಷೆಯನ್ನೂ ನೀಡಿದಂತಾಗುತ್ತದೆ ಮತ್ತು ಆರೋಗ್ಯವನ್ನೂ ಕಾಪಾಡಿದಂತಾಗುತ್ತದೆ. ಗಾಂಧಿವಾದಿ ತತ್ವಗಳ ಬೋಧಕರಾದ ಮಹೇಶ್ ಪಟೇಲ್ ಅವರು ತಪ್ಪು ಮಾಡಿದ ಮಕ್ಕಳಿಗೆ ಬೇವಿನ ರಸ ಕುಡಿಸುತ್ತಾರೆ.

ಬೂಟುಗಳನ್ನು ಧರಿಸದೇ 15 ದಿನ ಕಳೆದ ಪ್ರಿನ್ಸಿಪಾಲ್: ಒಮ್ಮೆ ಶೌಚಾಲಯದ ಪೈಪ್​ ಅನ್ನು ವಿದ್ಯಾರ್ಥಿಗಳು ಒಡೆದು ಹಾಕಿದ್ದರು. ಆದರೆ ಯಾವ ವಿದ್ಯಾರ್ಥಿಯೂ ತಾನು ತಪ್ಪು ಮಾಡಿದ್ದೇನೆಂದು ಒಪ್ಪಿಕೊಂಡಿರಲಿಲ್ಲ. ಆಗ ಮಹೇಶ್ ಪಾಟೀಲ್ ಅವರು ತಮ್ಮನ್ನು ತಾವೇ ಶಿಕ್ಷಿಸಿಕೊಳ್ಳಲು ಮುಂದಾಗಿದ್ದಾರೆ. ಸುಮಾರು 15 ದಿನ ಚಪ್ಪಲಿಯಿಲ್ಲದೇ ಬರಿಗಾಲಿನಲ್ಲಿ ನಡೆಯುವ ಶಪಥ ಮಾಡಿದ್ದಾರೆ. ಕೆಲವು ದಿನಗಳ ನಂತರ ವಿದ್ಯಾರ್ಥಿಗಳೇ ತಮ್ಮ ತಪ್ಪನ್ನು ಒಪ್ಪಿಕೊಂಡು ಪ್ರಾಂಶುಪಾಲರಲ್ಲಿ ಕ್ಷಮೆ ಯಾಚಿಸಿದ್ದಾರೆ. ಈ ಮೂಲಕ ಗಾಂಧಿ ತತ್ವಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಲು ಮಾರ್ಗದರ್ಶನ ನೀಡಲಾಗುತ್ತಿದೆ.

ಶಾಲೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿನಿ ಪ್ರಿಶಾ ರಾಥೋಡ್ ಒಂದು ಬಾರಿ ಹೋಮ್ ವರ್ಕ್ ಮಾಡದ ಕಾರಣಕ್ಕೆ ಬೇವಿನ ರಸ ಕುಡಿದಿದ್ದು, ಇದು ನಮ್ಮ ಭವಿಷ್ಯಕ್ಕೆ ಒಳ್ಳೆಯ ಪಾಠಗಳನ್ನು ಹೇಳಿಕೊಡುತ್ತದೆ. ಅಷ್ಟೇ ಅಲ್ಲ, ಬೇವು ಒಬ್ಬರ ಆರೋಗ್ಯಕ್ಕೂ ಪ್ರಯೋಜನಕಾರಿ ಎಂದಿದ್ದಾಳೆ. ಮತ್ತೊಬ್ಬ ವಿದ್ಯಾರ್ಥಿನಿ ಶಾಲೆಯಲ್ಲಿ ಶಿಕ್ಷಕರು ವಹಿಸುವ ಕಾಳಜಿ ಮತ್ತು ಮನೆಯಲ್ಲಿ ಪೋಷಕರು ವಹಿಸುವ ಕಾಳಜಿಗಿಂತ ಭಿನ್ನವಾಗಿಲ್ಲ ಎಂದಿದ್ದಾರೆ.

ಇದನ್ನೂ ಓದಿ:ಪ್ರಧಾನಮಂತ್ರಿ ಸಂಗ್ರಹಾಲಯ ಉದ್ಘಾಟಿಸಿ, ಮೊದಲ ಟಿಕೆಟ್ ಖರೀದಿಸಿದ ಪಿಎಂ ಮೋದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.