ಸೂರತ್ (ಗುಜರಾತ್): ಗುಜರಾತ್ ಚುನಾವಣೆಯಲ್ಲಿ ಬಿಜೆಪಿಗೆ ಟಕ್ಕರ್ ನೀಡಲು ಆಮ್ ಆದ್ಮಿ ಪಕ್ಷ ಯೋಜಿಸುತ್ತಿದ್ದರೆ, ಸೂರತ್ ಮುನ್ಸಿಪಲ್ ಕಾರ್ಪೋರೇಷನ್ನ ಆಪ್ ಸದಸ್ಯೆ ಸೆಜಲ್ ಮಾಳವೀಯ ಭದ್ರತಾ ಸಿಬ್ಬಂದಿಯ ಕೈಗೆ ಕಚ್ಚಿ ಗಾಯಗೊಳಿಸಿ ಟೀಕೆಗೆ ಗುರಿಯಾಗಿದ್ದಾರೆ.
ಇಂದು ನಡೆದ ಸೂರತ್ ಮುನ್ಸಿಪಲ್ ಕಾರ್ಪೊರೇಷನ್ನ ಸಾಮಾನ್ಯ ಸಭೆಯ ಶೂನ್ಯ ವೇಳೆಯಲ್ಲಿ ಆಪ್ ಸದಸ್ಯರು ಗದ್ದಲವೆಬ್ಬಿಸಿದರು. ಈ ವೇಳೆ ಮೇಯರ್ ಆಪ್ ಸದಸ್ಯರನ್ನು ಸಭೆಯಿಂದ ಹೊರಹಾಕಲು ಆದೇಶಿಸಿದರು. ಇದನ್ನು ವಿರೋಧಿಸಿ ಮತ್ತಷ್ಟು ಗದ್ದಲ ಉಂಟು ಮಾಡಿ ಆಪ್ ಸದಸ್ಯರನ್ನು ಭದ್ರತಾ ಸಿಬ್ಬಂದಿ ಹೊರಗೆ ಕರೆದೊಯ್ದರು. ಈ ವೇಳೆ ಕಾರ್ಪೋರೇಟರ್ ಸೆಜಲ್ ಮಾಳವೀಯ ಅವರು ಮಹಿಳಾ ಭದ್ರತಾ ಸಿಬ್ಬಂದಿ ಕೈಯನ್ನು ಬಲವಾಗಿ ಕಚ್ಚಿ ಗಾಯಗೊಳಿಸಿದ್ದಾರೆ.
ಸೆಜಲ್ ಮಾಳವೀಯಾ ಅವರ ಈ ಕೃತ್ಯವನ್ನು ಎಲ್ಲ ಪಕ್ಷಗಳು ಖಂಡಿಸಿವೆ. ಭದ್ರತಾ ಸಿಬ್ಬಂದಿಯ ಮೇಲೆ ಆಪ್ ಸದಸ್ಯರ ದೌರ್ಜನ್ಯದ ವಿರುದ್ಧ ಕ್ರಮ ಕೈಗೊಳ್ಳಲು ಮೇಯರ್ರನ್ನು ಆಗ್ರಹಿಸಿದರು.
ಸಾಮಾನ್ಯ ಸಭೆಯ ಶೂನ್ಯ ವೇಳೆಯಲ್ಲಿ ಬಿಜೆಪಿ ನಾಯಕ ಅಮಿತ್ ರಜಪೂತ್ ಅವರು ದೆಹಲಿಯ ಮಾಜಿ ಸಚಿವ ರಾಜೇಂದ್ರ ಪಾಲ್ ಗೌತಮ್ ಅವರ ಪ್ರಮಾಣವಚನ ವಿಷಯವನ್ನು ಸಭೆಯಲ್ಲಿ ಪ್ರಸ್ತಾಪಿಸಿದ್ದು, ಗದ್ದಲಕ್ಕೆ ಕಾರಣವಾಯಿತು.
ಓದಿ: ಸರ್ಕಾರಿ ಶಾಲೆಯಲ್ಲಿ ಹಣ ಸಂಗ್ರಹಕ್ಕೆ ಸುತ್ತೋಲೆ.. ಅದಕ್ಕೂ ನಮಗೂ ಸಂಬಂಧವೇ ಇಲ್ಲ- ಸಚಿವ ನಾಗೇಶ್