ಕರ್ನಾಟಕದಲ್ಲಿ ಕಬ್ಬಿಣ ಅದಿರು ಗಣಿಗಾರಿಕೆ ಮಿತಿ ಹೆಚ್ಚಿಸಿದ ಸುಪ್ರೀಂಕೋರ್ಟ್ - ಗಣಿಗಾರಿಕೆಯ ಮಿತಿ ಸುಪ್ರೀಂ ಕೋರ್ಟ್ ಹೆಚ್ಚಿಸಿದೆ
ಗಣಿಗಾರಿಕೆಯ ಮಿತಿ ಹೆಚ್ಚಳ.. ಬಳ್ಳಾರಿ ಜಿಲ್ಲೆಯಲ್ಲಿ 28 ಎಂಎಂಟಿ ಯಿಂದ 35 ಎಂಎಂಟಿ ಗೆ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ 7 ಎಂಎಂಟಿ ಯಿಂದ 15 ಎಂಎಂಟಿಗೆ ಹೆಚ್ಚಿಸಿ ಸುಪ್ರೀಂಕೋರ್ಟ್ ಆದೇಶಿಸಿದೆ.
![ಕರ್ನಾಟಕದಲ್ಲಿ ಕಬ್ಬಿಣ ಅದಿರು ಗಣಿಗಾರಿಕೆ ಮಿತಿ ಹೆಚ್ಚಿಸಿದ ಸುಪ್ರೀಂಕೋರ್ಟ್ ಕರ್ನಾಟಕದಲ್ಲಿ ಕಬ್ಬಿಣ ಅದಿರು ಗಣಿಗಾರಿಕೆ ಮಿತಿ ಹೆಚ್ಚಿಸಿದ ಸುಪ್ರೀಂ ಕೋರ್ಟ್](https://etvbharatimages.akamaized.net/etvbharat/prod-images/768-512-16202050-320-16202050-1661493748368.jpg?imwidth=3840)
ಬೆಂಗಳೂರು: ಕರ್ನಾಟಕದಲ್ಲಿ ಕಬ್ಬಿಣ ಅದಿರು ಗಣಿಗಾರಿಕೆಯ ಮಿತಿ ಸುಪ್ರೀಂ ಕೋರ್ಟ್ ಹೆಚ್ಚಿಸಿದೆ. ಆದರೆ ಗಣಿಗಾರಿಕೆ ಮತ್ತು ಪರಿಸರ ಸಂರಕ್ಷಣೆ ಎರಡೂ ಜೊತೆಯಾಗಿಯೇ ನಡೆಯಬೇಕೆಂದು ಅದು ಸೂಚಿಸಿದೆ.
ಬಳ್ಳಾರಿ ಗಣಿಗಳಲ್ಲಿ ಅನುಮತಿಸಲಾದ 28 ಮಿಲಿಯನ್ ಮೆಟ್ರಿಕ್ ಟನ್‌ಗಳ ಮಿತಿಯನ್ನು ಈಗ 35 ಮಿಲಿಯನ್ ಮೆಟ್ರಿಕ್ ಟನ್‌ಗಳಿಗೆ ಹೆಚ್ಚಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ. ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿನ ಗಣಿಗಳ ಮಿತಿಯನ್ನು ಈಗ ಏಳು ಮಿಲಿಯನ್ ಮೆಟ್ರಿಕ್ ಟನ್‌ಗಳಿಂದ 15 ಮಿಲಿಯನ್ ಮೆಟ್ರಿಕ್ ಟನ್‌ಗಳಿಗೆ ಏರಿಸಲಾಗಿದೆ.
ಈ ವರ್ಷದ ಮೇ ತಿಂಗಳಿನಲ್ಲಿ ಕರ್ನಾಟಕದ ಮೂರು ಜಿಲ್ಲೆಗಳಲ್ಲಿನ ಗಣಿಗಳಿಂದ ಕಬ್ಬಿಣದ ಅದಿರು ರಫ್ತು ಮೇಲಿನ ನಿಷೇಧವನ್ನು ಸುಪ್ರೀಂ ಕೋರ್ಟ್ ತೆಗೆದುಹಾಕಿತ್ತು. ಈ ಹಿಂದೆ ಇ-ಹರಾಜಿನ ಮೂಲಕ ಕಟ್ಟುನಿಟ್ಟಾಗಿ ಮಾರಾಟ ಮಾಡುತ್ತಿದ್ದುದಕ್ಕೆ ವಿರುದ್ಧವಾಗಿ ಗಣಿಗಾರರಿಗೆ ನ್ಯಾಯಾಲಯವು ಅಗೆದ ಗಣಿಗಳನ್ನು ನೇರ ಮಾರಾಟದ ಮೂಲಕ ಮಾರಾಟ ಮಾಡಲು ಅವಕಾಶ ನೀಡಿತು. ಪರಿಸರ ನಾಶದ ಕಾರಣದಿಂದ 2011ರಲ್ಲಿ ಸುಪ್ರೀಂ ಕೋರ್ಟ್ ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಗಣಿಗಾರಿಕೆಗೆ ನಿಷೇಧ ವಿಧಿಸಿತ್ತು. ಇದಲ್ಲದೆ, ಗಣಿಗಳ ರಫ್ತಿನ ಮೇಲೆ ಕೂಡ ನಿಷೇಧ ಹೇರಲಾಗಿತ್ತು.
ಇದನ್ನು ಓದಿ:ಕಾರು ಹೊಂದಿರುವವರ ಬಿಪಿಎಲ್ ಕಾರ್ಡ್ ರದ್ದು ಆದೇಶಕ್ಕೆ ಸರ್ಕಾರ ಬ್ರೇಕ್