ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಲೋಕ ಸಭಾ ಮತ್ತು ವಿಧಾನಸಭಾ ಕ್ಷೇತ್ರಗಳ ಪುನರ್ವಿಂಗಡನೆಗಾಗಿ ಕೇಂದ್ರ ಸರ್ಕಾರ ಮರುವಿನ್ಯಾಸ ಆಯೋಗ ರಚನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ, ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಇಬ್ಬರು ಕಾಶ್ಮೀರಿ ನಿವಾಸಿಗಳು ಸಲ್ಲಿಸಿದ್ದ ಅರ್ಜಿಯ ಪೀಠವನ್ನು ಎಸ್ಕೆ ಕೌಲ್ ಮತ್ತು ಎ ಎಸ್ ಒಕಾ ಅವರ ಪೀಠ ಕೈಗೆತ್ತಿಕೊಂಡಿತು. ಪ್ರಕರಣ ವಿಚಾರಣೆ ನಡೆಸಿದ ಪೀಠ, ಸಂವಿಧಾನದ 370 ನೇ ವಿಧಿಯ ಒಂದು ಮತ್ತು ಮೂರು ವಿಧಿಗಳ ಅಡಿ ಅಧಿಕಾರವನ್ನು ಚಲಾಯಿಸಲು ಅಸಮರ್ಥತೆ ನೀಡುವುದಿಲ್ಲ ಎಂದು ಹೇಳಿದರು.
370 ನೇ ವಿಧಿಗೆ ಸಂಬಂಧಿಸಿದ ಅಧಿಕಾರದ ಸಿಂಧುತ್ವದ ವಿಷಯವು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿರುವ ಅರ್ಜಿಗಳ ವಿಷಯವಾಗಿದೆ ಎಂದು ಪೀಠ ಗಮನಿಸಿದೆ. 2019 ಆಗಸ್ಟ್ 5ರಂದು ವಿಶೇಷ ಮಾನ್ಯತೆಯ ವಿಧಿ 370 ರ ನಿಬಂಧನೆಗಳನ್ನು ರದ್ದುಗೊಳಿಸುವ ಕೇಂದ್ರದ ನಿರ್ಧಾರದ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಅನೇಕ ಅರ್ಜಿಗಳನ್ನು ಸುಪ್ರೀಂಕೋರ್ಟ್ನಲ್ಲಿ ದಾಖಲಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರಕ್ಕಿಂತ ವಿಶೇಷ ಮಾನ್ಯತೆ ಹಕ್ಕನ್ನು ತೆಗೆದು ಹಾಕಿದ ಸರ್ಕಾರ ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿತು
ಇದೀಗ ಜಮ್ಮು ಮತ್ತು ಕಾಶ್ಮೀರವನ್ನು ಸಬಲೀಕರಣಗೊಳಿಸುವ ಹಿನ್ನಲೆ ವಿಧಾನಭೆ ಮತ್ತು ಲೋಕಸಭಾ ಕ್ಷೇತ್ರಗಳನ್ನು ಪುನರ್ ವಿಂಗಡಿಸಲು ಮರು ವಿನ್ಯಾಸ ಆಯೋಗವನ್ನು ರಚಿಸಲಾಗಿದೆ. ಈ ಡಿಲಿಮಿಟೆಶನ್ ಸಿಂಧುತ್ವ ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿದೆ. ಈ ಅರ್ಜಿ ವಜಾಗೊಳಿಸುವಂತೆ ಕೋರಿ ಕೇಂದ್ರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮನವಿ ಮಾಡಿದ್ದು, ಜಮ್ಮು ಮತ್ತು ಕಾಶ್ಮೀರ ಮರು ಸಂಘಟನೆ ಕಾಯಿದೆ, 2019 ಕೇಂದ್ರ ಸರ್ಕಾರದಿಂದ ಡಿಲಿಮಿಟೇಶನ್ ಆಯೋಗ ಸ್ಥಾಪಿಸುವುದನ್ನು ತಡೆಯುವುದಿಲ್ಲ ಎಂದು ವಾದ ಮಂಡಿಸಿದರು.
ಮಾರ್ಚ್ 6, 2020 ಕೇಂದ್ರ ಕಾನೂನು ಮತ್ತು ನ್ಯಾಯಾಲಯ ಸಚಿವಾಲಯ, ಡಿಲಿಮಿಟೇಶನ್ ಆಕ್ಟ್, 2002 ರ ಪರಿಚ್ಛೇದ 3 ರ ಅಡಿ ಅಧಿಕಾರವನ್ನು ಚಲಾಯಿಸುವ ಅಧಿಸೂಚನೆಯನ್ನು ಹೊರಡಿಸಿದೆ. ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶ ರಂಜನಾ ಪ್ರಕಾಶ್ ದೇಸಾಯಿ ಅವರ ಅಧ್ಯಕ್ಷತೆಯಲ್ಲಿ ಡಿಲಿಮಿಟೇಶನ್ ಆಯೋಗವನ್ನು ರಚಿಸಿತು.
ಈ ಡಿಲಿಮಿಟೇಶನ್ ಅನ್ನು ರದ್ದುಗೊಳಿಸುವಂತೆ ಹಾಜಿ ಅಬ್ದುಲ್ ಗಾನಿ ಖಾನ್ ಮತ್ತು ಮೊಹಮ್ಮದ್ ಆಯುಬ್ ಮಟ್ಟೊ ಅರ್ಜಿ ಸಲ್ಲಿಸಿದರು. ಸಂವಿಧಾನದ ಯೋಜನೆಗೆ ವಿರುದ್ಧವಾಗಿ ಡಿಲಿಮಿಟೇಶನ್ ಕಾರ್ಯ ನಡೆಸಲಾಗಿದೆ. ಗಡಿಗಳ ಬದಲಾವಣೆ ಮತ್ತು ವಿಸ್ತೃತ ಪ್ರದೇಶಗಳ ಸೇರ್ಪಡೆಯನ್ನು ಮಾಡಬಾರದು ಎಂದು ಇವರು ವಾದಿಸಿದ್ದರು
ಜಮ್ಮು ಮತ್ತು ಕಾಶ್ಮೀರದಲ್ಲಿ ಸೀಟುಗಳ ಸಂಖ್ಯೆಯನ್ನು 107 ರಿಂದ 114 ಕ್ಕೆ ಹೆಚ್ಚಿಸುವುದು. ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯಿದೆಯ ಸೆಕ್ಷನ್ 63 ರ ಅಡಿ ಸಾಂವಿಧಾನಿಕ ನಿಬಂಧನೆಗಳು ಮತ್ತು ಶಾಸನಬದ್ಧ ನಿಬಂಧನೆಗಳಿಗೆ ವಿರುದ್ಧವಾಗಿದೆ ಎಂದು ಘೋಷಿಸಲು ಮನವಿ ಮಾಡಿತ್ತು.
ಡಿಲಿಮಿಟೇಶನ್ ಆಕ್ಟ್, 2002 ರ ಸೆಕ್ಷನ್ 3 ರ ಮೂಲಕ ನೀಡಲಾದ ಅಧಿಕಾರವನ್ನು ಬಳಸಿಕೊಂಡು ಜುಲೈ 12, 2002 ರಂದು ಕೊನೆಯ ಡಿಲಿಮಿಟೇಶನ್ ಆಯೋಗವನ್ನು ಸ್ಥಾಪಿಸಲಾಯಿತು ಎಂದು ಅದು ಹೇಳಿದೆ.
ಇದನ್ನೂ ಓದಿ: ಬದುಕಿದ್ದ ವ್ಯಕ್ತಿಯ ಡೆತ್ ರಿಪೋರ್ಟ್ ಕೊಟ್ಟ ವೈದ್ಯರು.. ಆಘಾತಕ್ಕೊಳಗಾಗಿ ಪ್ರತಿಭಟನೆಗೆ ಕುಳಿತ ರೋಗಿ!