ETV Bharat / bharat

ವೈದ್ಯಕೀಯ ಕಾಲೇಜುಗಳಿಗೆ ಮೃತದೇಹಗಳ ಕೊರತೆ ನೀಗಿಸಿದ ಅಪ್ನಾ ಘರ್ ಆಶ್ರಮ

Apna Ghar Ashram: ''ರಾಜ್ಯದ ಎಲ್ಲಾ ವೈದ್ಯಕೀಯ ಕಾಲೇಜುಗಳಲ್ಲಿನ ಪ್ರಯೋಗಕ್ಕೆ ಶವದ ಕೊರತೆಯನ್ನು ಅಪ್ನಾ ಘರ್ ಆಶ್ರಮವು ನೀಗಿಸುತ್ತಿದೆ. ಇದರಿಂದ ಈ ಕಾಲೇಜುಗಳಲ್ಲಿ ಅಧ್ಯಯನ ನಡೆಸುವ ಭವಿಷ್ಯದ ವೈದ್ಯರು ಸುಲಭವಾಗಿ ಶಿಕ್ಷಣ ಪಡೆಯಬಹುದು'' ಎಂದು ಅಪ್ನಾ ಘರ್ ಆಶ್ರಮದ ಸಂಸ್ಥಾಪಕ ಡಾ. ಬಿ.ಎಂ. ಭಾರದ್ವಾಜ್ ತಿಳಿಸಿದರು.

Apna Ghar Ashram
ರಾಜಸ್ಥಾನದ ವೈದ್ಯಕೀಯ ಕಾಲೇಜುಗಳಿಗೆ ಶವಗಳ ಕೊರತೆ ನೀಗಿಸಿದ ಅಪ್ನಾ ಘರ್ ಆಶ್ರಮ
author img

By ETV Bharat Karnataka Team

Published : Dec 19, 2023, 1:56 PM IST

ಭಾರತಪುರ (ರಾಜಸ್ಥಾನ): ವಿಶ್ವದಾದ್ಯಂತ ಮಾನವ ಸೇವೆಗೆ ಹೆಸರಾಗಿರುವ ಅಪ್ನಾ ಘರ್ ಆಶ್ರಮ ಈಗ ವೈದ್ಯಕೀಯ ಶಿಕ್ಷಣದಲ್ಲೂ ಪ್ರಮುಖ ಪಾತ್ರ ವಹಿಸುತ್ತಿದೆ. ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿ ಪ್ರಾಯೋಗಿಕ ಅಧ್ಯಯನಕ್ಕಾಗಿ ಶವಗಳ ಕೊರತೆಯಿದೆ. ರಾಜ್ಯದ 24 ವೈದ್ಯಕೀಯ ಕಾಲೇಜುಗಳಿಗೆ ಒಂದು ವರ್ಷದಲ್ಲಿ ಸುಮಾರು 400 ಶವಗಳ ಅವಶ್ಯಕತೆಯಿದೆ.

ಆದರೆ, ಅಪ್ನಾ ಘರ್ ಆಶ್ರಮವು 700ಕ್ಕೂ ಹೆಚ್ಚು ಶವಗಳನ್ನು ಒದಗಿಸಲು ಮುಂದಾಗಿದೆ. ಸದ್ಯ, ಈ ಬಗ್ಗೆ ರಾಜ್ಯ ಆರೋಗ್ಯ ಕಾರ್ಯದರ್ಶಿಯಿಂದ ಸ್ಪಷ್ಟ ಆದೇಶಕ್ಕಾಗಿ ಆಶ್ರಮ ಕಾಯಲಾಗುತ್ತಿದೆ. ಶವಗಳ ಕುರಿತು ಆರೋಗ್ಯ ಕಾರ್ಯದರ್ಶಿ ಆದೇಶ ಹೊರಡಿಸಿದರೆ, ಇಡೀ ರಾಜಸ್ಥಾನದಲ್ಲಿ ವೈದ್ಯಕೀಯ ಕಾಲೇಜುಗಳಿಗಿರುವ ಶವಗಳ ಕೊರತೆಯನ್ನು ಅಪ್ನಾ ಘರ್ ಆಶ್ರಮ ನೀಗಿಸಲಿದೆ. ಈ ಮಧ್ಯೆಯೂ ಅಪ್ನಾ ಘರ್ ಆಶ್ರಮವು ಹಲವು ಬಾರಿ ಭರತ್‌ಪುರದ ವೈದ್ಯಕೀಯ ಕಾಲೇಜು ಮತ್ತು ಉತ್ತರ ಪ್ರದೇಶದ ಮಥುರಾದ ವೈದ್ಯಕೀಯ ಕಾಲೇಜಿಗೆ ಶವಗಳನ್ನು ಒದಗಿಸಿದೆ.

ಒಂದು ವರ್ಷದಲ್ಲಿ 700ಕ್ಕೂ ಹೆಚ್ಚು ಜನರು ಸಾವು: ಅಪ್ನಾ ಘರ್ ಆಶ್ರಮದ ಸಂಸ್ಥಾಪಕ ಡಾ. ಬಿ.ಎಂ. ಭಾರದ್ವಾಜ್ ಮಾತನಾಡಿ, ''ರಾಜಸ್ಥಾನದಲ್ಲಿ 24 ವೈದ್ಯಕೀಯ ಕಾಲೇಜುಗಳಿವೆ. ಎಲ್ಲಾ ವೈದ್ಯಕೀಯ ಕಾಲೇಜುಗಳಿಗೆ ವರ್ಷದಲ್ಲಿ ಸುಮಾರು 400 ಶವಗಳ ಅಗತ್ಯವಿದೆ. ಆದರೆ, ರಾಜಸ್ಥಾನದಲ್ಲಿ 19 ಜಿಲ್ಲೆಗಳಲ್ಲಿ 22 ಅಪ್ನಾ ಘರ್ ಆಶ್ರಮಗಳಿವೆ. ಒಟ್ಟಾರೆಯಾಗಿ, ಅಪ್ನಾ ಘರ್ ಆಶ್ರಮದಲ್ಲಿ ಪ್ರತಿ ತಿಂಗಳು ಸುಮಾರು 60 ರೋಗಿಗಳು ಮತ್ತು ವಯಸ್ಸಾದವರು (ನಿರ್ಗತಿಕರು) ಮೃತಪಡುತ್ತಾರೆ ಎಂದಿದ್ದಾರೆ.

ಇನ್ನು ರಾಜ್ಯದ 22 ಅಪ್ನಾ ಘರ್ ಆಶ್ರಮಗಳ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿ ಒಂದು ವರ್ಷದಲ್ಲಿ 700ಕ್ಕೂ ಹೆಚ್ಚು ಜನರು ಮೃತಪಡುತ್ತಾರೆ. ಅವರನ್ನು ಆಯಾ ಧರ್ಮದ ಪ್ರಕಾರ ಸಂಸ್ಕಾರ ಮಾಡಲಾಗುತ್ತದೆ. ಶವದ ಕೊರತೆ ಕುರಿತು ವೈದ್ಯಕೀಯ ಕಾಲೇಜುಗಳ ಪ್ರಸ್ತಾವವನ್ನು ರಾಜ್ಯ ಸರ್ಕಾರ ಪರಿಗಣಿಸಿ ಅನುಮತಿ ನೀಡಿದರೆ, ಅಪ್ನಾ ಘರ್ ಆಶ್ರಮ ಈ ಸಮಸ್ಯೆಯನ್ನು ಪರಿಹರಿಸಬಹುದು'' ಎಂದು ತಿಳಿಸಿದ್ದಾರೆ.

ಇಲ್ಲಿಯವರೆಗೆ ಆಶ್ರಮದಿಂದ 7 ಶವಗಳ ಪೂರೈಕೆ: ''ಭರತ್‌ಪುರದ ವೈದ್ಯಕೀಯ ಕಾಲೇಜಿಗೆ ಅಪ್ನಾ ಘರ್ ಆಶ್ರಮದಿಂದ ಇಲ್ಲಿಯವರೆಗೆ ಸುಮಾರು 7 ಶವಗಳನ್ನು ಒದಗಿಸಲಾಗಿದೆ. ಉತ್ತರ ಪ್ರದೇಶದ ಮಥುರಾ ಜಿಲ್ಲೆಯಲ್ಲಿರುವ ಮತ್ತೊಂದು ವೈದ್ಯಕೀಯ ಕಾಲೇಜಿಗೆ ಮೂರು ಶವಗಳನ್ನು ಒದಗಿಸಲಾಗಿದೆ. ವೈದ್ಯಕೀಯ ಕಾಲೇಜಿನಿಂದ ಬೇಡಿಕೆ ಬಂದಾಗಲೆಲ್ಲಾ, ಅಪ್ನಾ ಘರ್ ಆಶ್ರಮದಿಂದ ಶವಗಳನ್ನು ಒದಗಿಸುತ್ತೇವೆ'' ಎಂದು ಭಾರದ್ವಾಜ್ ಹೇಳಿದ್ದಾರೆ.

''ಡಾ.ಭಿಲ್ವಾರ ವೈದ್ಯಕೀಯ ಕಾಲೇಜಿನ ಅಂಗರಚನಾಶಾಸ್ತ್ರ ವಿಭಾಗದ ಮುಖ್ಯಸ್ಥರು ವೈದ್ಯಕೀಯ ಕಾಲೇಜಿನಲ್ಲಿ ಶವಗಳ ಕೊರತೆಯ ಬಗ್ಗೆ ಆರೋಗ್ಯ ಕಾರ್ಯದರ್ಶಿಗೆ ಪ್ರಸ್ತಾವನೆ ಕಳುಹಿಸಿದ್ದಾರೆ. ಜೊತೆಗೆ ಆರು ತಿಂಗಳ ಹಿಂದೆ ಆರೋಗ್ಯ ಕಾರ್ಯದರ್ಶಿಯವರು ಎಲ್ಲಾ ವೈದ್ಯಕೀಯ ಕಾಲೇಜುಗಳಿಗೆ ಪತ್ರವನ್ನು ಕಳುಹಿಸಿದ್ದಾರೆ. ವೈದ್ಯಕೀಯ ಕಾಲೇಜುಗಳ ಅಗತ್ಯಕ್ಕೆ ಅನುಗುಣವಾಗಿ ಶವಗಳನ್ನು ಆಶ್ರಮದಿಂದ ತೆಗೆದುಕೊಂಡು ಹೋಗಬಹುದು ಎಂದು ಪತ್ರದಲ್ಲಿ ಹೇಳಲಾಗಿದೆ. ಆದರೆ ಆ ಆದೇಶದಲ್ಲಿ ಕೆಲವು ಅಂಶಗಳು ಸ್ಪಷ್ಟವಾಗಿಲ್ಲದ ಕಾರಣ ರಾಜ್ಯ ಸರ್ಕಾರಕ್ಕೆ ಮತ್ತೊಮ್ಮೆ ಪ್ರಸ್ತಾವನೆ ಕಳುಹಿಸಲಾಗಿದೆ. ಶವದ ಬಗ್ಗೆ ಆರೋಗ್ಯ ಕಾರ್ಯದರ್ಶಿ ಸ್ಪಷ್ಟ ಸೂಚನೆ ನೀಡಿದರೆ, ಎಲ್ಲಾ ವೈದ್ಯಕೀಯ ಕಾಲೇಜಿಗೆ ಶವಗಳನ್ನು ತಲುಪಿಸುತ್ತೇವೆ'' ಎಂದು ಭಾರದ್ವಾಜ್ ತಿಳಿಸಿದರು.

ಅಪ್ನಾ ಘರ್ ಆಶ್ರಮದ ಉದ್ದೇಶ: ಅಪ್ನಾ ಘರ್ ಆಶ್ರಮಕ್ಕೆ ಬರುವ ನಿರ್ಗತಿಕರಿಗೆ ಮತ್ತು ನಿರಾಶ್ರಿತರಿಗೆ ಸೇವೆ ಮತ್ತು ಚಿಕಿತ್ಸೆ ನೀಡಲಾಗುತ್ತದೆ. ಒಂದು ವೇಳೆ ಅವರು ಮೃತಪಟ್ಟರೆ, ಅವರ ಬಗ್ಗೆ ಪೊಲೀಸ್ ಠಾಣೆಗೆ ಮಾಹಿತಿ ನೀಡುತ್ತೇವೆ. ಯಾರಾದರೂ ಮನೆಯವರು ಸಿಕ್ಕರೆ ಅವರಿಗೆ ಮಾಹಿತಿ ನೀಡಿ, ಅವರ ಆಗಮನಕ್ಕಾಗಿ 24 ಗಂಟೆಗಳ ಕಾಲ ಕಾಯಲಾಗುತ್ತದೆ. ಯಾರೂ ಬರದಿದ್ದಲ್ಲಿ ಮೃತರ ಧರ್ಮದ ಪ್ರಕಾರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸುತ್ತೇವೆ. ಅವರ ಮೃತದೇಹವನ್ನು ವೈದ್ಯಕೀಯ ಶಿಕ್ಷಣದಲ್ಲಿ ಬಳಸಿದರೆ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗಲಿದೆ ಎಂಬುದು ನಮ್ಮ ಉದ್ದೇಶ ಎಂದು ಡಾ.ಭಾರದ್ವಾಜ್ ವಿವರಿಸಿದರು.

ಇದನ್ನೂ ಓದಿ: ಚೀನಾದಲ್ಲಿ ಪ್ರಬಲ ಭೂಕಂಪ: ನೆಲಕ್ಕುರುಳಿದ ಕಟ್ಟಡಗಳು, ಕನಿಷ್ಠ 118 ಸಾವು, ನೂರಾರು ಮಂದಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.