ETV Bharat / bharat

'ಉಲೈಮಾ ಫತ್ವಾ' ಬಂದ ನಂತರವೇ ಕೊರೊನಾ ವ್ಯಾಕ್ಸಿನ್​ ಪಡೆಯುತ್ತೇವೆ: ಸುನ್ನಿ ಮುಸ್ಲಿಂ ಮುಖಂಡರು - ಕೊರೊನಾ ವ್ಯಾಕ್ಸಿನ್​ ಬಗ್ಗೆ ಸುನ್ನಿ ಮುಸ್ಲಿಂ ಸಮಾಜ ಹೇಳಿಕೆ

ಮಹಾಮಾರಿ ಕೊರೊನಾಗೆ ಲಸಿಕೆ ಬಂದು ಜನರು ಲಸಿಕೆ ಹಾಕಿಸಿಕೊಳ್ಳಲು ಮುಂದಾಗಿರುವ ಈ ಹೊತ್ತಿನಲ್ಲಿ ಉಜ್ಜೈನಿಯ ಸುನ್ನಿ ಮುಸ್ಲಿಂ ಮುಖಂಡರು, ತಮ್ಮ ಸಮಾಜದ ವೈದ್ಯರು ಹೇಳುವವರೆಗೆ ಕೊರೊನಾ ಲಸಿಕೆ ಪಡೆಯುವುದಿಲ್ಲ ಎಂದಿದ್ದಾರೆ.

Sunni Muslim Community will take corona vaccine after their Ulema's Fatwa
ಉಜ್ಜಿಯಿನಿ
author img

By

Published : Jan 18, 2021, 12:38 PM IST

ಉಜ್ಜೈನಿ/ಮಧ್ಯಪ್ರದೇಶ: ಇಡೀ ಪ್ರಪಂಚವೇ ಕೊರೊನಾ ವ್ಯಾಕ್ಸಿನ್​ ಪಡೆಯಲು ಕಾದು ಕುಳಿತಿದೆ. ಮಾಹಾಮಾರಿ ಕೋವಿಡ್​ ವೈರಸ್​ಗೆ ಲಸಿಕೆ ಬಂದಿದ್ದೇ ತಡ, ಜನರು ಲಸಿಕೆ ಹಾಕಿಸಿಕೊಳ್ಳಲು ಹಾತೊರೆಯುತ್ತಿದ್ದಾರೆ. ಆದರೆ ಮಧ್ಯಪ್ರದೇಶದ ಉಜ್ಜೈನಿಯಲ್ಲಿ ಸುನ್ನಿ ಮುಸ್ಲಿಂ ಸೊಸೈಟಿಯು ಸುನ್ನಿ ಉಲೇಮಾ ಕಲಾಂ ಮತ್ತು ಅವರ ವೈದ್ಯರ ತಂಡದ ನಿರ್ಧಾರಕ್ಕಾಗಿ ಕಾಯುತ್ತಿದ್ದಾರೆ.

ಉಜ್ಜೈನಿಯ ಸುನ್ನಿ ಮುಸ್ಲಿಂ ಮುಖಂಡರ ಪ್ರತಿಕ್ರಿಯೆ

ತಮ್ಮ ವೈದ್ಯರು ಹೇಳುವ ತನಕ ವ್ಯಾಕ್ಸಿನೇಷನ್​ಗೆ ಒಳಗಾಗಲು ಯಾರಿಗೂ ಅವಕಾಶವಿಲ್ಲ ಎಂದು ಸುನ್ನಿ ಮುಸ್ಲಿಂ ಸೊಸೈಟಿ ಹೇಳಿದೆ. ಈ ಕುರಿತು ಪ್ರತಿಕ್ರಿಯಿಸಿದ ಸುನ್ನಿ ಸೊಸೈಟಿಯ ಧರ್ಮಗುರು ಮಹಬೂಬ್​ ಆಲಮ್, ಕೊರೊನಾ ಲಸಿಕಾ ಸಂಶೋಧನಾ ಕೇಂದ್ರದಲ್ಲಿ ಕೆಲಸ ಮಾಡುವವರಿಗಿಂತ ನಮ್ಮ ವೈದ್ಯರು ಹೆಚ್ಚು ತಿಳಿದುಕೊಂಡಿದ್ದಾರೆ. ಹೀಗಾಗಿ ಅವರು ಹೇಳಿದ ಬಳಿಕವೇ, ಅವರಿಂದ ಫತ್ವಾ ಬಂದ ಬಳಿಕವೇ ಕೊರೊನಾ ಲಸಿಕೆ ಪಡೆಯುವುದಾಗಿ ಅವರು ಹೇಳಿದ್ರು.

ಅತೀ ಶೀಘ್ರದಲ್ಲೇ ಫತ್ವಾ ಬರಲಿದ್ದು, ಅದು ನಾವು ಕೊರೊನಾ ರೋಗ ತಡೆಯಲು ಕೋವಿಡ್​ ವ್ಯಾಕ್ಸಿನ್​ ಬಳಸಬೇಕೇ ಬೇಡವೇ ಎಂಬುದನ್ನು ಹೇಳುತ್ತದೆ ಎಂದು ಸುನ್ನಿ ಮುಸ್ಲಿಂ ಸೊಸೈಟಿ ಮುಖಂಡರು ತಿಳಿಸಿದರು.

ಇದನ್ನೂ ಓದಿ:ಟ್ರ್ಯಾಕ್ಟರ್​ ಪರೇಡ್ ತಡೆಗೆ ಯಾವುದೇ ಆದೇಶ ನೀಡಲು ಸುಪ್ರೀಂ ನಕಾರ: ಅರ್ಜಿ ವಿಚಾರಣೆ ಮುಂದೂಡಿಕೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.