ಮುಂಬೈ: ತೌಕ್ತೆ ಆರ್ಭಟಕ್ಕೆ ಸಿಲುಕಿದ್ದ ಟಗ್ ಬೋಟ್ ವರಪ್ರದದ ಭಗ್ನಾವಶೇಷವನ್ನು ಭಾರತೀಯ ನೌಕಾಪಡೆಯ ವಿಶೇಷ ಹಡಗು ಐಎನ್‌ಎಸ್ ಮಕರ್, ಅರೇಬಿಯನ್ ಸಮುದ್ರದಲ್ಲಿ ಪತ್ತೆ ಮಾಡಿದೆ.
ಕಳೆದ ವಾರ ತೌಕ್ತೆ ಸೈಕ್ಲೋನ್ ವೇಳೆ ಟಗ್ ಬೋಟ್ ವರಪ್ರದ ಮುಳುಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೇ 17 ರಂದು ಅರಬ್ಬೀ ಸಮುದ್ರದಲ್ಲಿ ಪಿ305 ಬಾರ್ಜ್ ಮತ್ತು ವರಪ್ರದದ 274 ಸಿಬ್ಬಂದಿ ನಾಪತ್ತೆಯಾಗಿದ್ದರು. ಈ ಪೈಕಿ ಬಾರ್ಜ್ನಿಂದ 186 ಮಂದಿ ಮತ್ತು ವರಪ್ರದದಿಂದ ಇಬ್ಬರನ್ನು ರಕ್ಷಣೆ ಮಾಡಲಾಗಿತ್ತು. 70 ಮಂದಿಯ ಶವಗಳು ಸಮುದ್ರದಲ್ಲಿ ಪತ್ತೆಯಾಗಿದ್ದವು. ಸೋಮವಾರ 274 ಸಿಬ್ಬಂದಿ ಪೈಕಿ ಬಾಕಿ ಉಳಿದಿದ್ದ 16 ಮಂದಿಯ ಶವಗಳು ಮಹಾರಾಷ್ಟ್ರ ಮತ್ತು ಗುಜರಾತ್ ಕರಾವಳಿಯಲ್ಲಿ ಸಿಕ್ಕಿವೆ ಎಂದು ನೌಕಾಪಡೆ ಮಾಹಿತಿ ನೀಡಿದೆ.
ಇನ್ನೂ ಕೆಲವರ ಶವಗಳು ಕಾಣೆಯಾಗಿವೆ ಎನ್ನಲಾಗಿದ್ದು, ಅವುಗಳ ಪತ್ತೆಗೆ ಶೋಧ ಕಾರ್ಯಾಚರಣೆ ಮುಂದುವರಿದಿದೆ.