ETV Bharat / bharat

27 ವರ್ಷಗಳಿಂದ ಆಹಾರ ಸೇವಿಸದೆ ಬದುಕಿದ್ದ ರತನ್ ಮಾಣೆಕ್ ಇನ್ನಿಲ್ಲ: ಈ ವಿಶಿಷ್ಟ ವ್ಯಕ್ತಿ ಬಗ್ಗೆ ಕುತೂಹಲದ ಮಾಹಿತಿ

ಬರೋಬ್ಬರಿ 27 ವರ್ಷಗಳಿಂದ ಅನ್ನಾಹಾರವಿಲ್ಲದೆ ಬದುಕಿದ್ದ ಅಪರೂಪದ ವ್ಯಕ್ತಿ ಇಂದು ಮರೆಯಾಗಿದ್ದಾರೆ. ಆರಂಭದಲ್ಲಿ ಸೂರ್ಯನನ್ನು ನೋಡುವುದು ಕೆಲವು ಸೆಕೆಂಡುಗಳ ಕಾಲ ತೆಗೆದುಕೊಳ್ಳುತ್ತದೆ. ಆದರೆ ಏಳು ತಿಂಗಳೊಳಗೆ ಅದನ್ನು ಅರ್ಧ ಘಂಟೆಯವರೆಗೆ ಹೆಚ್ಚಿಸಬಹುದು. ಒಂಬತ್ತು ತಿಂಗಳೊಳಗೆ ದೇಹವು ಶಕ್ತಿಯ ಉಗ್ರಾಣವಾಗುತ್ತದೆ. ಇದರಿಂದ ಹಸಿವು ಕಳೆದು ಆಹಾರ ತ್ಯಜಿಸಬಹುದು ಎಂದು ಇಹಲೋಕ ತ್ಯಜಿಸಿರುವ ಕೇರಳದ ರತನ್ ಮಾಣೆಕ್ ಹೇಳಿದ್ದರು.

http://10.10.50.85//kerala/13-March-2022/heera-rathan-manek_1303newsroom_1647172776_1069.JPG

author img

By

Published : Mar 13, 2022, 7:27 PM IST

ಕೋಝಿಕ್ಕೋಡ್ (ಕೇರಳ) : ಕಳೆ ಹಲವು ವರ್ಷಗಳಿಂದ ಆಹಾರ ಸೇವನೆಯಿಲ್ಲದೆ ಬದುಕಿದ್ದ ಹೀರಾ ರತನ್ ಮಾಣೆಕ್ ಅವರು 84 ನೇ ವಯಸ್ಸಿನಲ್ಲಿ ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಸೂರ್ಯನ ಬೆಳಕಿನ ಶಕ್ತಿಯ ಪ್ರಚಾರಕ ಹಾಗೂ ಗುಜರಾತಿ ಉದ್ಯಮಿಯಾಗಿರುವ ಅವರು ಕೋಝಿಕೋಡ್‌ನ ಚಕೋರತುಕುಲಂನಲ್ಲಿರುವ ತಮ್ಮ ಫ್ಲಾಟ್‌ನಲ್ಲಿ ನಿಧನರಾಗಿದ್ದಾರೆ.

ಮಾಣೆಕ್ ಅವರು 1995 ರಲ್ಲಿ ಈ ವಿಶಿಷ್ಟ ಉಪವಾಸದ ಪ್ರಯೋಗಕ್ಕೆ ಮುನ್ನುಡಿ ಬರೆದಿದ್ದರು. ಅಂದಿನಿಂದ ಸೌರ ಶಕ್ತಿ ಮತ್ತು ನೀರನ್ನು ಮಾತ್ರ ಬಳಸಿಕೊಂಡು ತಮ್ಮ ಬದುಕನ್ನು ಸಾಗಿಸುತ್ತಿದ್ದರು.

ಬಾಹ್ಯಾಕಾಶ ಪರಿಶೋಧನೆ ಇವರ ಪ್ರಯೋಗಕ್ಕೆ ಸಹಕಾರಿ: ಜುಲೈನಿಂದ ನವೆಂಬರ್ 2002 ರವರೆಗೆ, ಅಮೆರಿಕನ್ ಬಾಹ್ಯಾಕಾಶ ಕೇಂದ್ರ NASA ಅವರನ್ನು ಆಹ್ವಾನಿಸಿತ್ತು. ಅವರ ಮೇಲೆ ಸಂಶೋಧನೆ ಕೂಡ ನಡೆಸಿತು. ಮಾನವರು ಬಾಹ್ಯಾಕಾಶ ಪರಿಶೋಧನೆಗೆ ಹೋದಾಗ ಹೀರಾ ರತನ್ ಅವರ ಜೀವನ ಪರಿಸ್ಥಿತಿಗಳನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದರ ಕುರಿತು ಅಧ್ಯಯನವನ್ನು ಆ ವೇಳೆ ಮಾಡಲಾಗಿತ್ತು.

ಸೂರ್ಯನ ಬೆಳಕನ್ನು ಆಹಾರವಾಗಿ ಪರಿವರ್ತಿಸಿಕೊಂಡಿದ್ದರು: ದೇಹವು ಸೂರ್ಯನಿಂದ ಶಕ್ತಿಯನ್ನು ಪಡೆದುಕೊಂಡಾಗ ಅದು ಅದು ಚಿಪ್ ಆಗಿ ಕಾರ್ಯನಿರ್ವಹಿಸುತ್ತದೆ. ಸೂರ್ಯನಿಂದ ನೀವು ಪಡೆಯುವ ಶಕ್ತಿಯೊಂದಿಗೆ ಆಹಾರವಿಲ್ಲದೆ ಕೇವಲ ನೀರನ್ನು ಮಾತ್ರ ಕುಡಿಯುವುದರಿಂದ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ ಎಂದು ಮಾಣೆಕ್ ಹೇಳಿದ್ದರು. ಹಾಗೆ ಅದನ್ನು ಸಾಬೀತುಪಡಿಸಿದ್ದರು.

ಮಾಣೆಕ್ ಹುಟ್ಟಿ ಬೆಳೆದದ್ದು ಕೋಯಿಕ್ಕೋಡ್​​ನಲ್ಲಿ. ಇವರ ಕುಟುಂಬವು ಮೂಲತಃ ಗುಜರಾತ್‌ನ ಕಚ್‌ನಿಂದ ಇಲ್ಲಿಗೆ ವಲಸೆ ಬಂದಿತ್ತು. ಹಡಗು ಉದ್ಯಮಿಯಾಗಿದ್ದ ಅವರು, 1962 ರಲ್ಲಿ ಪಾಂಡಿಚೇರಿಯ ಅರಬಿಂದೋ ಆಶ್ರಮಕ್ಕೆ ಭೇಟಿ ನೀಡಿದಾಗ ಸೌರ ಚಿಕಿತ್ಸೆ ಬಗ್ಗೆ ತಿಳಿದುಕೊಂಡಿದ್ದರು. ನಂತರ, ಸ್ವ ಆಸಕ್ತಿಯಿಂದ ಸೂರ್ಯನ ಧ್ಯಾನ ಮಾಡಲು ಪ್ರಾರಂಭಿಸಿದ್ದರು.

ಇದನ್ನೂ ಓದಿ: ಉಕ್ರೇನ್​ನಿಂದ ತಾತ್ಕಾಲಿಕವಾಗಿ ಭಾರತೀಯ ರಾಯಭಾರ ಕಚೇರಿ ಸ್ಥಳಾಂತರ

ಸೂರ್ಯನನ್ನು ಬರಿಗಣ್ಣಿನಿಂದ ನೋಡುವುದು: ಮಾಣೆಕ್ ಅವರು 1992 ರಿಂದ ಪೂರ್ಣ ಪ್ರಮಾಣದ ಸೂರ್ಯನ ಆರಾಧಕರಾಗಿದ್ದರು. ಸೂರ್ಯೋದಯದ ಒಂದು ಗಂಟೆಯ ನಂತರ ಮತ್ತು ಸೂರ್ಯಾಸ್ತದ ಒಂದು ಗಂಟೆಯ ಮೊದಲು ಸೂರ್ಯನನ್ನು ಬರಿಗಣ್ಣಿನಿಂದ ನೋಡುವುದು ಅವರ ಆರಾಧನಾ ಕ್ರಮವಾಗಿತ್ತು.

ಆರಂಭದಲ್ಲಿ ಸೂರ್ಯನನ್ನು ನೋಡುವುದು ಕೆಲವು ಸೆಕೆಂಡುಗಳ ಕಾಲ ತೆಗೆದುಕೊಳ್ಳುತ್ತದೆ. ಆದರೆ ಏಳು ತಿಂಗಳೊಳಗೆ ಅದನ್ನು ಅರ್ಧ ಘಂಟೆಯವರೆಗೆ ಹೆಚ್ಚಿಸಬಹುದು. ಒಂಬತ್ತು ತಿಂಗಳೊಳಗೆ ದೇಹವು ಶಕ್ತಿಯ ಉಗ್ರಾಣವಾಗುತ್ತದೆ. ಇದರಿಂದ ಹಸಿವು ಕಳೆದು ಆಹಾರ ತ್ಯಜಿಸಬಹುದು ಎಂದು ಅವರು ಹೇಳಿದ್ದರು.

ಜೂನ್ 1995 ರಲ್ಲಿ ಮಾಣೆಕ್ ಕೋಝಿಕೋಡ್‌ನಲ್ಲಿ ಡಾ. ಸಿ.ಕೆ ರಾಮಚಂದ್ರನ್ ಅವರ ಮೇಲ್ವಿಚಾರಣೆಯಲ್ಲಿ 213 ದಿನಗಳ ಕಾಲ ಉಪವಾಸ ಮಾಡಿದ್ದರು. ಈ ಪ್ರಯೋಗವು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವ0 ಮತ್ತು ಬಾಯಾರಿಕೆಯಾದಾಗ ನೀರು ಕುಡಿಯುವುದನ್ನು ಒಳಗೊಂಡಿತ್ತು. ಇದೇ ರೀತಿ ಅಹಮದಾಬಾದ್‌ನಲ್ಲಿ ಜನವರಿ 1, 2000 ರಿಂದ ಫೆಬ್ರವರಿ 15, 2001 ರವರೆಗೆ ಸತತ 411 ದಿನಗಳ ಕಾಲ ಉಪವಾಸ ಮಾಡಿದ್ದರು.

ಈ ದೀರ್ಘ ಉಪವಾಸ ದೊಡ್ಡ ಸುದ್ದಿಯಾಗಿ ಮಾಣೆಕ್ ಜಾಗತಿಕವಾಗಿ ಗಮನ ಸೆಳೆದಿದ್ದರು. ಇದಾದ ನಂತರ ಅವರ ಮೇಲಿನ ಎರಡನೇ ಪ್ರಯೋಗವನ್ನು ಅಂದಿನ ಐಎಂಎ ಮುಖ್ಯಸ್ಥರ ನೇತೃತ್ವದಲ್ಲಿ 21 ವೈದ್ಯರ ಮೇಲ್ವಿಚಾರಣೆಯಲ್ಲಿ ನಡೆಸಲಾಗಿತ್ತು.

ಪೆನ್ಸಿಲ್ವೇನಿಯಾ ಮತ್ತು ಥಾಮಸ್ ಜೆಫರ್ಸನ್ ವಿಶ್ವವಿದ್ಯಾನಿಲಯಗಳ ಆಹ್ವಾನದ ಮೇರೆಗೆ ಮಾಣೆಕ್ ಅವರು ಉಪನ್ಯಾಸಗಳನ್ನು ನೀಡಲು ಯುಎಸ್​ಗೂ ಹೋಗಿ ಬಂದಿದ್ದರು ಮತ್ತು ಫ್ಲೋರಿಡಾದಲ್ಲಿರುವ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರಕ್ಕೆ ಭೇಟಿ ನೀಡಿದ್ದರು.

ಈ ರೀತಿಯ ಸೂರ್ಯನ ಆರಾಧನೆಯನ್ನು ಅಭ್ಯಾಸ ಮಾಡುವ ಗಗನಯಾತ್ರಿಗಳು ಆಹಾರವಿಲ್ಲದೆ ಬಾಹ್ಯಾಕಾಶದಲ್ಲಿ ಹೆಚ್ಚು ಕಾಲ ಉಳಿಯಲು ಸಹಾಯ ಮಾಡುತ್ತದೆ ಎಂದು ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದರು.

ಹಲವಾರು ಕಡೆಗಳಲ್ಲಿ ಹಲವಾರು ಉಪನ್ಯಾಸಗಳನ್ನು ನೀಡಿದರಲ್ಲದೆ, ಪುಸ್ತಕಗಳನ್ನೂ ಪ್ರಕಟಿಸಿದ್ದಾರೆ. ಯುರೋಪ್ ಮತ್ತು ಅಮೆರಿಕದಲ್ಲಿ ನಡೆದ ಹಲವಾರು ಕಾರ್ಯಾಗಾರಗಳಲ್ಲಿ ಇವರು ಭಾಗವಹಿಸಿದ್ದರು. ಈ ವಿಷಯದ ಸಂಬಂಧ ಅವರು ಐವತ್ತಕ್ಕೂ ಹೆಚ್ಚು ದೇಶಗಳಿಗೆ ಭೇಟಿ ನೀಡಿದ್ದರು.

ಈ ಪ್ರಯೋಗಕ್ಕೆ ಭಾರತದಲ್ಲಿ ಸೂಕ್ತ ಪರಿಗಣನೆ ಸಿಗುತ್ತಿಲ್ಲ ಎಂಬ ಬೇಸರವನ್ನು ಈ ಹಿಂದೆ ಅವರು ವ್ಯಕ್ತಪಡಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.