ಭುವನೇಶ್ವರ: ಬೇಸಿಗೆ ಕಾಲ ಪ್ರಾರಂಭವಾಗುತ್ತಿದ್ದಂತೆ ಬಿಸಿಲ ಧಗೆ ಏರತೊಡಗಿದೆ. ಮಾರ್ಚ್‌ನಿಂದ ಮೇ ತಿಂಗಳವರೆಗೆ ಬೇಸಿಗೆ ಋತು ಇರಲಿದ್ದು, ಆರಂಭದಲ್ಲೇ ತಾಪಮಾನ ನಿರೀಕ್ಷೆಗೂ ಮೀರಿ ಹೆಚ್ಚಿದೆ. ಸುಡುವ ಬಿಸಿಲು ಜನರಿಗೆ ಮಾತ್ರವಲ್ಲದೇ ಪ್ರಾಣಿ ಪಕ್ಷಿಗಳಿಗೂ ಕಾಡತೊಡಗಿದೆ. ಈ ಹಿನ್ನೆಲೆ ಭುವನೇಶ್ವರದ ನಂದನ್‌ಕನನ್ ಝೂಲಾಜಿಕಲ್ ಮೃಗಾಲಯದಲ್ಲಿ ಬೇಸಿಗೆ ನಿರ್ವಹಣೆ ಆರಂಭವಾಗಿದೆ.
ಮೃಗಾಲಯದ ಪ್ರಾಣಿಗಳ ಆರೋಗ್ಯ ಮತ್ತು ಕಲ್ಯಾಣಕ್ಕಾಗಿ ಅಧಿಕಾರಿಗಳು ಬೇಸಿಗೆ ನಿರ್ವಹಣೆಯನ್ನು ಪ್ರಾರಂಭಿಸಿದ್ದಾರೆ. ಪ್ರಾಣಿಗಳ ಸುರಕ್ಷತೆಗೆ ವ್ಯಾಪಕ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಸುಡು ಬಿಸಿಲು, ಬಿಸಿಗಾಳಿಯಿಂದ ಪ್ರಾಣಿಗಳನ್ನು ರಕ್ಷಿಸಲು ವಿಶೇಷ ಬೇಸಿಗೆ ನಿರ್ವಹಣೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಪೊಲೀಸ್ ಬ್ಯಾಂಡ್ನಲ್ಲಿ ಸಖತ್ ಆಗಿ ಮೂಡಿ ಬಂದ ಪುಷ್ಪ ಚಿತ್ರದ ‘ಶ್ರೀವಲ್ಲಿ’ ಹಾಡು!
ಪ್ರಾಣಿಗಳ ಆವರಣಕ್ಕೆ (ಗೋಡೆ, ಮೇಲ್ಛಾವಣಿ) ಬಿದಿರಿನ ಹೊದಿಕೆಗಳನ್ನು ಜೋಡಿಸಲಾಗಿದೆ. ತಂಪು ವಾತಾವರಣ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಜಾನುವಾರುಗಳಿಗೆ ಹೆಚ್ಚಿನ ನೀರು ಸಂಗ್ರಹಿಸಿಡಲಾಗುತ್ತಿದೆ. ಹೀಗೆ ನಂದನ್‌ಕನನ್ ಮೃಗಾಲಯದ ಅಧಿಕಾರಿಗಳು ಪ್ರಾಣಿಗಳ ರಕ್ಷಣೆ ಕಾರ್ಯವನ್ನು ಪ್ರಾರಂಭಿಸಿದ್ದೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.