ETV Bharat / bharat

ಸುಲ್ಲಿ ಡೀಲ್ಸ್ ಆ್ಯಪ್ ಪ್ರಕರಣ: ಆರೋಪಿ ವಿಚಾರಣೆಗೆ ಲೆಫ್ಟಿನೆಂಟ್ ಗವರ್ನರ್ ಅನುಮತಿ

author img

By

Published : Dec 12, 2022, 12:50 PM IST

ಆರೋಪಿ ಓಂಕಾರೇಶ್ವರ್ ಮಧ್ಯಪ್ರದೇಶದ ಇಂದೋರ್‌ನಲ್ಲಿ ಕಂಪ್ಯೂಟರ್ ಅಪ್ಲಿಕೇಶನ್‌ನಲ್ಲಿ ಪದವಿ ಪಡೆದಿದ್ದಾನೆ. ಮಹಿಳೆಯರನ್ನು ಅವಮಾನಿಸಲು ಈ ಆ್ಯಪ್ ಕ್ರಿಯೇಟ್ ಮಾಡಿದ್ದು, ಅನುಮತಿ ಇಲ್ಲದೇ ಹಲವು ಚಿತ್ರಗಳನ್ನು ಅಪ್ಲೋಡ್ ಮಾಡಿದ್ದಾನೆ. ಈ ವರ್ಷದ ಜನವರಿಯಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದರು.

ಸುಲ್ಲಿ ಡೀಲ್ಸ್ ಆ್ಯಪ್ ಪ್ರಕರಣ: ಆರೋಪಿ ವಿಚಾರಣೆಗೆ ಲೆಫ್ಟಿನೆಂಟ್ ಗವರ್ನರ್ ಅನುಮತಿ
Sully Deals app case Lt Governor gives permission to interrogate the accused

ನವದೆಹಲಿ: ಸುಲ್ಲಿ ಡೀಲ್ಸ್ ಆ್ಯಪ್ ಪ್ರಕರಣದ ಪ್ರಮುಖ ಆರೋಪಿ ಓಂಕಾರೇಶ್ವರ್ ಠಾಕೂರ್​ನನ್ನು ವಿಚಾರಣೆಗೆ ಒಳಪಡಿಸಲು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅನುಮತಿ ನೀಡಿದ್ದಾರೆ. ಆರೋಪಿ ಓಂಕಾರೇಶ್ವರ್ ಸುಲ್ಲಿ ಡೀಲ್ಸ್​ ಹೆಸರಿನ ಆ್ಯಪ್‌ನಲ್ಲಿ ಹಲವು ಮಹಿಳೆಯರ ಛಾಯಾಚಿತ್ರಗಳನ್ನು ಅಪ್ಲೋಡ್​​ ಮಾಡಿ, ಆ ಮಹಿಳೆಯರು ಮಾರಾಟಕ್ಕಿದ್ದಾರೆ ಎಂದು ಹರಾಜು ಆರಂಭಿಸಿದ್ದ ಎಂದು ಆರೋಪಿಸಲಾಗಿದೆ.

ಇದಕ್ಕೂ ಮೊದಲು ದೆಹಲಿ ಪೊಲೀಸರು ಸಿಆರ್‌ಪಿಸಿಯ ಸೆಕ್ಷನ್ 196 ರ ಅಡಿ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲು ಅನುಮತಿ ಕೋರಿದ್ದರು. ಈ ಸೆಕ್ಷನ್ ಸರ್ಕಾರದ ವಿರುದ್ಧ ಅಪರಾಧ ಎಸಗುವ ಪಿತೂರಿಗೆ ಸಂಬಂಧಿಸಿದೆ. ಇದರ ಅಡಿ ವಿಚಾರಣೆ ನಡೆಸಲು ಪೊಲೀಸರಿಗೆ ಲೆಫ್ಟಿನೆಂಟ್ ಗವರ್ನರ್ ಅನುಮೋದನೆ ಬೇಕಾಗುತ್ತದೆ.

ಈಗ ಕೊನೆಗೂ ಭಾನುವಾರದಂದು ಅನುಮೋದನೆ ಸಿಕ್ಕಿದೆ. ಓಂಕಾರೇಶ್ವರ್ ಎಂಬಾತ ಸುಲ್ಲಿ ಡೀಲ್ಸ್ ಆ್ಯಪ್ ಮತ್ತು ಸುಲ್ಲಿ ಡೀಲ್ಸ್ ಟ್ವಿಟರ್ ಹ್ಯಾಂಡಲ್ ಆರಂಭಿಸಿದ್ದ. ಈ ಸಂಬಂಧ ಪೊಲೀಸರು 7 ಜುಲೈ 2021 ರಂದು ಪ್ರಕರಣ ದಾಖಲಿಸಿದ್ದರು.

ಆರೋಪಿ ಓಂಕಾರೇಶ್ವರ್ ಮಧ್ಯಪ್ರದೇಶದ ಇಂದೋರ್‌ನಲ್ಲಿ ಕಂಪ್ಯೂಟರ್ ಅಪ್ಲಿಕೇಶನ್‌ನಲ್ಲಿ ಪದವಿ ಪಡೆದಿದ್ದಾನೆ. ಮಹಿಳೆಯರನ್ನು ಅವಮಾನಿಸಲು ಈ ಆ್ಯಪ್ ಕ್ರಿಯೇಟ್ ಮಾಡಿದ್ದು, ಅನುಮತಿ ಇಲ್ಲದೇ ಹಲವು ಚಿತ್ರಗಳನ್ನು ಅಪ್ಲೋಡ್ ಮಾಡಿದ್ದಾನೆ. ಈ ವರ್ಷದ ಜನವರಿಯಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದರು.

ಮಹಿಳೆಯರನ್ನು ಟ್ರೋಲ್ ಮಾಡುವ ಉದ್ದೇಶದಿಂದ ಈ ಕೃತ್ಯ ಎಸಗಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಓಂಕಾರೇಶ್ವರ್ ಜನವರಿ 2020 ರಲ್ಲಿ ಟ್ವಿಟರ್ ಹ್ಯಾಂಡಲ್‌ನೊಂದಿಗೆ ಟ್ರೇಡ್ ಮಹಾಸಭಾ ಎಂಬ ಟ್ವಿಟರ್ ಗುಂಪಿಗೆ ಸೇರಿಕೊಂಡಿದ್ದ. ಮಹಿಳೆಯರನ್ನು ಟ್ರೋಲ್ ಮಾಡಬೇಕು ಎಂಬ ಚರ್ಚೆ ಗ್ರೂಪ್ ನಲ್ಲಿ ನಡೆದಿದ್ದು, ಬಳಿಕ ಗಿಟ್ ಹಬ್ ನಲ್ಲಿ ಈ ಆ್ಯಪ್ ಕ್ರಿಯೇಟ್ ಮಾಡಿದ್ದ.

ಸೃಷ್ಟಿಯಾಗಿದ್ದ ಭಾರಿ ವಿವಾದ: ಆದರೆ, ಸುಲ್ಲಿ ಡೀಲ್ಸ್​ ಆ್ಯಪ್ ಕುರಿತಾಗಿ ಭಾರಿ ವಿವಾದ ಸೃಷ್ಟಿಯಾದ ನಂತರ ಆತ ತನ್ನ ಎಲ್ಲ ಸಾಮಾಜಿಕ ಮಾಧ್ಯಮದ ಪ್ರೊಫೈಲ್​ಗಳನ್ನು ಅಳಿಸಿಹಾಕಿದ್ದ. ಆದಾಗ್ಯೂ, ಪೊಲೀಸರು ತಾಂತ್ರಿಕ ಮತ್ತು ಫೋರೆನ್ಸಿಕ್ ತನಿಖೆಯ ಮೂಲಕ ಇದಕ್ಕೆ ಸಂಬಂಧಿಸಿದ ಪುರಾವೆಗಳನ್ನು ಸಂಗ್ರಹಿಸಿದ್ದರು. ಆತನ ವಿರುದ್ಧ ಕಿಶನ್‌ಗಢ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಿಂದ ಇದು ದೃಢಪಟ್ಟಿದೆ.

ಬಾಲಕಿಯನ್ನ ಬಿಡ್​ ಮಾಡಿದ್ದ ಆರೋಪಿ: ಆರೋಪಿಯು ಬಾಲಕಿಯೊಬ್ಬಳ ಚಿತ್ರವನ್ನು ಪೋಸ್ಟ್ ಮಾಡಿ ಅವಳನ್ನು ಬಿಡ್ ಮಾಡಲು ಟ್ವೀಟ್ ಮಾಡಿದ್ದ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸಿದಾಗ ಆತ ಸುಲ್ಲಿ ಡೀಲ್ ಆ್ಯಪ್ ತಯಾರಕನ ಸಂಪರ್ಕದಲ್ಲಿದ್ದದು ಪತ್ತೆಯಾಗಿತ್ತು. ಈ ಮಾಹಿತಿ ಮೇರೆಗೆ ದೆಹಲಿ ಪೊಲೀಸರ ತಂಡ ಮಧ್ಯಪ್ರದೇಶದಲ್ಲಿ ದಾಳಿ ನಡೆಸಿ ಅಲ್ಲಿಂದ ಓಂಕಾರೇಶ್ವರನನ್ನು ಬಂಧಿಸಿದೆ. 25 ವರ್ಷದ ಓಂಕಾರೇಶ್ವರ್ ಇಂದೋರ್‌ನ ಐಪಿಎಸ್ ಅಕಾಡೆಮಿಯಿಂದ ಬಿಸಿಎ ಮಾಡಿದ್ದಾನೆ.

ಪ್ರಾಥಮಿಕ ತನಿಖೆ ವೇಳೆ ತಪ್ಪೊಪ್ಪಿಗೆ: ತಾನು ಟ್ವಿಟರ್‌ನಲ್ಲಿ ಟ್ರೇಡ್ ಗ್ರೂಪ್‌ನ ಸದಸ್ಯನಾಗಿದ್ದು, ಮಹಿಳೆಯರನ್ನು ಟ್ರೋಲ್ ಮಾಡುವ ಮತ್ತು ಮಾನಹಾನಿ ಮಾಡುವ ಉದ್ದೇಶದಿಂದ ಆ್ಯಪ್ ರಚಿಸಿದ್ದಾಗಿ ಆತ ಪ್ರಾಥಮಿಕ ವಿಚಾರಣೆಯ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಆತ ಈ ಕೋಡ್ ಅನ್ನು ಗಿಟ್​ ಹಬ್​ನಲ್ಲಿ ರಚಿಸಿದ್ದ. ನಂತರ ಗುಂಪಿನ ಎಲ್ಲ ಸದಸ್ಯರಿಗೆ ಈ ಕೋಡ್​ಗೆ ಪ್ರವೇಶ ನೀಡಲಾಗಿತ್ತು.

ಇದನ್ನೂ ಓದಿ: ಸುಲ್ಲಿ ಡೀಲ್ಸ್‌ 'ಹರಾಜು' ಆ್ಯಪ್‌ ಸೃಷ್ಟಿಕರ್ತನ ಬಂಧಿಸಿದ ದೆಹಲಿ ವಿಶೇಷ ಪೊಲೀಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.