ಪುರಿ (ಒಡಿಶಾ): ಮರಳು ಕಲಾಕೃತಿಕಾರ ಸುದರ್ಶನ ಪಟ್ನಾಯಕ್ ಪುರಿ ಸಮುದ್ರದ ಕಡಲತೀರದಲ್ಲಿ ವಿಶೇಷ ಆಕೃತಿಯನ್ನು ರಚಿಸಿದ್ದಾರೆ. ಈ ಮೂಲಕ ಕೊರೊನಾ ಮಹಾಮಾರಿ ಸಮಯದಲ್ಲಿ ಭೀತಿಗೊಂಡ ಜನರು ಸುರಕ್ಷಿತವಾಗಿರಲು ಮತ್ತು ಭಯಭೀತರಾಗಲು ಮನವಿ ಮಾಡಿದ್ದಾರೆ.
ಇದೇ ವೇಳೆ ಪಶ್ಚಿಮ ಕರಾವಳಿಯಲ್ಲಿ ತೌಕ್ತೆ ಚಂಡಮಾರುತ ಅಪ್ಪಳಿಸಿದ ಕೆಲವೇ ದಿನಗಳಲ್ಲಿ ಪೂರ್ವ ಕರಾವಳಿಗೆ ಯಾಸ್ ಚಂಡಮಾರುತದ ಭೀತಿ ಎದುರಾಗಿದೆ. ಈ ಹಿನ್ನೆಲೆ ಜನರು ಆತಂಕಕ್ಕೊಳಗಾಗಬಾರದು ಎಂಬ ಸಂದೇಶ ನೀಡಿದ್ದಾರೆ. ಮರಳಿನಲ್ಲಿ ಭಾರತದ ಭೂಪಟ, ಚಂಡಮಾರುತದ ಚಿತ್ರ ರಚಿಸಿರುವ ಸುದರ್ಶನ, ‘ಡೋಂಟ್ ಪ್ಯಾನಿಕ್! ಸ್ಟೇ ಸೇಫ್’ ಎಂದು ಬರೆದಿದ್ದಾರೆ.