ETV Bharat / bharat

ಅಂಗವೈಕಲ್ಯ ಮರೆತು MPPSC ಪೂರ್ವ ಪರೀಕ್ಷೆಗೆ ಅರ್ಹತೆ.. ಇದು ದಿವ್ಯಾಂಗ ಯುವಕನ ಯಶೋಗಾಥೆ

ಅಪಘಾತದಲ್ಲಿ ತಮ್ಮ ಎರಡೂ ಕೈಗಳನ್ನು ಕಳೆದುಕೊಂಡ ಬ್ರಿಜೇಶ್ ಅಟಲ್ ಅವರು ಮಧ್ಯಪ್ರದೇಶ ಲೋಕಸೇವಾ ಆಯೋಗದ ಪೂರ್ವ ಪರೀಕ್ಷೆಯಲ್ಲಿ ಅರ್ಹತೆ ಪಡೆದಿದ್ದಾರೆ. ವಿಕಲಚೇತನ ಯುವಕನ ಯಶೋಗಾಥೆ ಎಲ್ಲರಿಗೂ ಸ್ಫೂರ್ತಿದಾಯಕ.

Success story of Gwalior youth
ಬ್ರಿಜೇಶ್ ಅಟಲ್
author img

By

Published : Apr 9, 2023, 1:09 PM IST

ಗ್ವಾಲಿಯರ್ (ಮಧ್ಯಪ್ರದೇಶ): ನಮ್ಮಲ್ಲಿರುವ ಕೊರತೆಗಳನ್ನು ಮರೆತು ಸಮಸ್ಯೆಗಳೊಂದಿಗೆ ಬದುಕಿ ಸಾಧಿಸಿ ತೋರಿಸುವುದು ಜೀವನದ ಸಾರ್ಥಕತೆ. ಇದಕ್ಕೆ ಉದಾಹರಣೆ ಎಂಬಂತೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ವಿಕಲಚೇತನ ಯುವಕ ತಮ್ಮ ಅಂಗಾಂಗ ವೈಕಲ್ಯವನ್ನು ಮೆಟ್ಟಿ ನಿಂತು ಇತರರಿಗೆ ಮಾದರಿ ಆಗಿದ್ದಾರೆ.

ಹೌದು, ಇದು ಗ್ವಾಲಿಯರ್‌ ವಿಕಲಚೇತನ ಯುವಕನ ಯಶೋಗಾಥೆ. ಇಲ್ಲಿನ ನಿವಾಸಿ ಬ್ರಿಜೇಶ್ ಅಟಲ್ ಎಂಬುವವರು ಅಪಘಾತದಲ್ಲಿ ತಮ್ಮ ಎರಡೂ ಕೈಗಳನ್ನು ಮತ್ತು ಒಂದು ಕಣ್ಣನ್ನು ಕಳೆದುಕೊಂಡರು. ಅಪಘಾತದ ನಂತರ ಕೆಲವರು ಜೀವನದಲ್ಲಿ ಸಂಪೂರ್ಣವಾಗಿ ನಿರಾಶೆಗೊಳ್ಳುತ್ತಾರೆ. ಆದರೆ ಈ ಯುವಕ ತನ್ನ ಆಲೋಚನೆ, ಉತ್ಸಾಹ ಮತ್ತು ಧೈರ್ಯದಿಂದ ತಮ್ಮ ಇಡೀ ಜೀವನವನ್ನು ಬದಲಾಯಿಸಿಕೊಂಡಿದ್ದಾರೆ.

ಎಂಪಿಪಿಎಸ್‌ಸಿ ಪೂರ್ವ ಪರೀಕ್ಷೆಗೆ ಅರ್ಹತೆ: ತಮ್ಮ ಅಂಗವೈಕಲ್ಯದ ಹೊರತಾಗಿಯೂ, ಬ್ರಿಜೇಶ್ ಅಟಲ್ ಸಾಮಾನ್ಯ ವ್ಯಕ್ತಿ ಮಾಡುವ ಎಲ್ಲಾ ಕೆಲಸಗಳನ್ನು ಮಾಡುತ್ತಾರೆ. ಅವರು ಮಕ್ಕಳಿಗೆ ತರಬೇತಿಯನ್ನು ಸಹ ನೀಡುತ್ತಾರೆ. ಜತೆಗೆ ಅವರ ಕುಟುಂಬವನ್ನು ನೋಡಿಕೊಳ್ಳುತ್ತಾರೆ. ಸದ್ಯ ಅವರು ಅವರು ಮಧ್ಯಪ್ರದೇಶ ಲೋಕಸೇವಾ ಆಯೋಗ(ಎಂಪಿಪಿಎಸ್‌ಸಿ) ಪೂರ್ವ ಪರೀಕ್ಷೆಯಲ್ಲಿ ಅರ್ಹತೆ ಪಡೆದಿದ್ದಾರೆ. ಇದಲ್ಲದೇ ಬ್ರಿಜೇಶ್ ಸೈಕಲ್ ಮತ್ತು ಮೋಟಾರ್ ಸೈಕಲ್ ಓಡಿಸುತ್ತಾರೆ. ಜತೆಗೆ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಅನ್ನು ಸಾಮಾನ್ಯ ವ್ಯಕ್ತಿಯಂತೆಯೇ ಸುಲಭವಾಗಿ ಬಳಸಬಲ್ಲರು. ಮನೆಯ ಎಲ್ಲಾ ಕೆಲಸಗಳನ್ನೂ ಮಾಡುತ್ತಾರೆ. ತನ್ನ ತಾಯಿಗೆ ಹೊಲದಲ್ಲಿ ಸಹಾಯ ಮಾಡುತ್ತಾರೆ. ಬ್ರಿಜೇಶ್‌ಗೆ ಒಬ್ಬ ಸಹೋದರ ಮತ್ತು ಸಹೋದರಿ ಕೂಡ ಇದ್ದಾರೆ. ಕೆಲ ವರ್ಷಗಳ ಹಿಂದೆ ತಂದೆ ತೀರಿಕೊಂಡಿದ್ದರಿಂದ ಕುಟುಂಬದ ಜವಾಬ್ದಾರಿ ಸಹ ಇವರ ಕೈಯಲ್ಲಿದೆ.

2005ರಲ್ಲಿ ಗ್ರಾಮದಲ್ಲಿ ಮೆರವಣಿಗೆಯಲ್ಲಿ ಪಟಾಕಿ ಸಿಡಿಸಲು ಮುಂದಾದಾಗ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬ್ರಿಜೇಶ್ ಅವರು ತಮ್ಮ ಒಂದು ಕಣ್ಣನ್ನೂ ಕಳೆದುಕೊಂಡರು. ಬಳಿಕ ಬ್ರಿಜೇಶ್ ಬೇಗ ಚೇತರಿಸಿಕೊಂಡರು. ಅಂಗ ವೈಕಲ್ಯ ದೌರ್ಬಲ್ಯವಲ್ಲ ಅದನ್ನು ಶಕ್ತಿಯನ್ನಾಗಿ ಮಾಡಿದರು. ಕಷ್ಟಪಟ್ಟು ಓದಿ 10ನೇ ತರಗತಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾದರು.

ಓದಿನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಬ್ರಿಜೇಶ್ ಹೆಚ್ಚಿನ ಸಮಯವನ್ನು ಅಧ್ಯಯನದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಇತ್ತೀಚೆಗೆ ಅವರು ಎಂಪಿಪಿಎಸ್‌ಸಿ ಪರೀಕ್ಷೆಗೆ ಅರ್ಹತೆ ಪಡೆಯಲು ಇದೇ ಕಾರಣ. "ನಾಗರಿಕ ಸೇವೆಯಲ್ಲಿ ಉತ್ತಮ ಅಧಿಕಾರಿಯಾಗಬೇಕೆಂಬುದು ನನ್ನ ಕನಸು. ಇದಕ್ಕಾಗಿ ತನ್ನ ಅಂಗವೈಕಲ್ಯದ ಅನನುಕೂಲಗಳನ್ನು ಮೆಟ್ಟಿ ನಿಂತು ಶ್ರಮಿಸುತ್ತಿದ್ದೇನೆ" ಎನ್ನುತ್ತಾರೆ ಬ್ರಿಜೇಶ್ ಅಟಲ್.

ಪ್ರಧಾನಿ ಮೋದಿ 'ವಿಶೇಷ' ಸೆಲ್ಫಿ: ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಚೆನ್ನೈಗೆ ಭೇಟಿ ನೀಡಿದ್ದರು. ಶನಿವಾರ ತಮ್ಮ ಚೆನ್ನೈ ಭೇಟಿಯ ಕೊನೆಯಲ್ಲಿ ಅವರು ವಿಕಲಚೇತನನಾಗಿರುವ ಭಾರತೀಯ ಜನತಾ ಪಕ್ಷದ ಕಾರ್ಯಕರ್ತ ತಿರು ಎಸ್. ಮಣಿಕಂದನ್ ಅವರನ್ನು ಭೇಟಿ ಮಾಡಿ ಅವರೊಂದಿಗೆ 'ಸೆಲ್ಫಿ' ತೆಗೆದುಕೊಂಡರು. ಅದನ್ನು ತಮ್ಮ ಟ್ವಿಟರ್​​ನಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೋದಿ, "ಒಂದು ವಿಶೇಷ ಸೆಲ್ಫಿ. ಚೆನ್ನೈನಲ್ಲಿ ನಾನು ತಿರು ಎಸ್. ಮಣಿಕಂದನ್ ಅವರನ್ನು ಭೇಟಿ ಮಾಡಿದ್ದೇನೆ. ಅವರು ಈರೋಡ್‌ನ ಹೆಮ್ಮೆಯ ಕಾರ್ಯಕರ್ತರಾಗಿದ್ದು, ಬೂತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೊಗಳಿದ್ದಾರೆ.

ಇದನ್ನೂ ಓದಿ: ವಿಕಲಚೇತನ ಬಿಜೆಪಿ ಕಾರ್ಯಕರ್ತನೊಂದಿಗೆ ಪ್ರಧಾನಿ ಮೋದಿ 'ವಿಶೇಷ' ಸೆಲ್ಫಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.