ETV Bharat / bharat

ಸವರಿನ್ ಚಿನ್ನದ ಬಾಂಡ್‌ ಚಂದಾದಾರಿಕೆ ಅ. 25ಕ್ಕೆ ಪ್ರಾರಂಭ - ಹಣಕಾಸು ಸಚಿವಾಲಯ

2021-22 ಸರಣಿ-VII ಗೆ ಚಂದಾದಾರಿಕೆಯ ಅವಧಿ ಅಕ್ಟೋಬರ್ 25-29 ಆಗಿದೆ. ಬಾಂಡ್‌ಗಳನ್ನು ನವೆಂಬರ್ 2 ರಂದು ನೀಡಲಾಗುತ್ತದೆ ಎಂದು ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.

ಸಾರ್ವಭೌಮ ಚಿನ್ನದ ಬಾಂಡ್‌ ಚಂದಾದಾರಿಕೆ ಅ. 25 ರಂದು ಪ್ರಾರಂಭ

author img

By

Published : Oct 21, 2021, 9:35 PM IST

Updated : Oct 22, 2021, 7:02 AM IST

ನವದೆಹಲಿ: ಸವರಿನ್ ಚಿನ್ನದ ಬಾಂಡ್‌ಗಳ (Sovereign Gold Bond Scheme) 2021-22 ಮುಂದಿನ ಕಂತು ಅಕ್ಟೋಬರ್ 25 ರಿಂದ ಐದು ದಿನಗಳವರೆಗೆ ಚಂದಾದಾರಿಕೆಗಾಗಿ ತೆರೆದಿರುತ್ತದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

2021-22 ಸರಣಿಯ ಅಡಿ ಬಾಂಡ್‌ಗಳನ್ನು ಅಕ್ಟೋಬರ್ 2021-ಮಾರ್ಚ್ 2022 ರ ಅವಧಿಯಲ್ಲಿ ನಾಲ್ಕು ಹಂತಗಳಲ್ಲಿ ನೀಡಲಾಗುವುದು. ಈಗಾಗಲೇ ಮೇ 2021 ರಿಂದ ಸೆಪ್ಟೆಂಬರ್ 2021 ರವರೆಗೆ ಬಾಂಡ್‌ಗಳನ್ನು ಆರು ಹಂತಗಳಲ್ಲಿ ನೀಡಲಾಗಿದೆ.

2021-22 ಸರಣಿ-VII ಗೆ ಚಂದಾದಾರಿಕೆಯ ಅವಧಿ ಅಕ್ಟೋಬರ್ 25-29 ಆಗಿದೆ. ಬಾಂಡ್‌ಗಳನ್ನು ನವೆಂಬರ್ 2 ರಂದು ನೀಡಲಾಗುತ್ತದೆ ಎಂದು ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.

ಬಾಂಡ್​ಗಳನ್ನು ಎಲ್ಲಿ ಖರೀದಿಸಬಹುದು? :

ಬಾಂಡ್‌ಗಳನ್ನು ಬ್ಯಾಂಕುಗಳ ಮೂಲಕ (ಸಣ್ಣ ಹಣಕಾಸು ಬ್ಯಾಂಕುಗಳು ಮತ್ತು ಪಾವತಿ ಬ್ಯಾಂಕುಗಳು ಹೊರತುಪಡಿಸಿ), ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಶನ್ ಆಫ್ ಇಂಡಿಯಾ ಲಿಮಿಟೆಡ್ (SHCIL), ಕ್ಲಿಯರಿಂಗ್ ಕಾರ್ಪೊರೇಶನ್ ಆಫ್ ಇಂಡಿಯಾ ಲಿಮಿಟೆಡ್ (CCIL), ಗೊತ್ತುಪಡಿಸಿದ ಅಂಚೆ ಕಚೇರಿಗಳು ಮತ್ತು ಮಾನ್ಯತೆ ಪಡೆದ ಸ್ಟಾಕ್ ಎಕ್ಸ್‌ಚೇಂಜ್‌ಗಳ ಮೂಲಕ ಮಾರಾಟ ಮಾಡಲಾಗುತ್ತದೆ.

ಇನ್ನು ಭಾರತೀಯ ರಿಸರ್ವ್ ಬ್ಯಾಂಕ್ ಭಾರತ ಸರ್ಕಾರ ಪರವಾಗಿ ಬಾಂಡ್‌ಗಳನ್ನು ಬಿಡುಗಡೆ ಮಾಡುತ್ತದೆ. ಬಾಂಡ್‌ಗಳ ಬೆಲೆಯನ್ನು ಭಾರತೀಯ ರೂಪಾಯಿಗಳಲ್ಲಿ ನಿಗದಿಪಡಿಸಲಾಗಿದೆ. ಆನ್‌ಲೈನ್‌ನಲ್ಲಿ ಚಂದಾದಾರರಾಗಿ ಮತ್ತು ಡಿಜಿಟಲ್ ಮೋಡ್ ಮೂಲಕ ಪಾವತಿಸುವವರಿಗೆ ಪ್ರತಿ ಗ್ರಾಂಗೆ 50 ರೂ ಕಡಿಮೆ ಇರುತ್ತದೆ.

ಬಾಂಡ್‌ನ ಅವಧಿಯು ಎಂಟು ವರ್ಷಗಳದ್ದಾಗಿದ್ದು, ಹಾಗೆ ಐದನೇ ವರ್ಷದ ನಂತರ ಮಾರಾಟ ಮಾಡಿ ಹಣ ಪಡೆಯುವ ಆಯ್ಕೆಯನ್ನೂ ನೀಡಲಾಗಿದೆ.

ಏನಿದು ಸಾರ್ವಭೌಮ ಗೋಲ್ಡ್ ಬಾಂಡ್:

2015ರಲ್ಲಿ ಸರ್ಕಾರ ಸವರಿನ್ ಗೋಲ್ಡ್ ಬಾಂಡ್ ಯೋಜನೆ ಆರಂಭಿಸಿತ್ತು. ಸವರಿನ್ ಗೋಲ್ಡ್ ಬಾಂಡ್ ಒಂದು ಸರ್ಕಾರಿ ಬಾಂಡ್ ಆಗಿದೆ. ಇದನ್ನು ಡಿಮ್ಯಾಟ್ ರೂಪದಲ್ಲಿ ಬದಲಾಯಿಸಬಹುದು. ಇದರ ಬೆಲೆ ರೂಪಾಯಿ ಅಥವಾ ಡಾಲರ್​ಗಳಲ್ಲಿ ಇರುವುದಿಲ್ಲ. ಇದರ ಬೆಲೆ ಚಿನ್ನದ ತೂಕವನ್ನು ಆಧರಿಸಿದೆ. ಕೇಂದ್ರದ ಮೋದಿ ನೇತೃತ್ವದ ಸರ್ಕಾರ ಈ ಯೋಜನೆಯನ್ನು 2015ರಲ್ಲಿ ಪ್ರಾರಂಭಿಸಿತ್ತು.

Last Updated : Oct 22, 2021, 7:02 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.