ETV Bharat / bharat

ಅಧಿಕಾರಿಗಳ ಕಿರುಕುಳದಿಂದ ಬೇಸತ್ತು ಸಬ್ ಇನ್ಸ್‌ಪೆಕ್ಟರ್ ಆತ್ಮಹತ್ಯೆ? - Amaravati district in Maharashtra

ಆಗಸ್ಟ್ 13 ರಂದು ಆತ್ಮಹತ್ಯೆ ಮಾಡಿಕೊಂಡಿದ್ದ ಸಬ್ ಇನ್ಸ್‌ಪೆಕ್ಟರ್ ಅನಿಲ್ ಬಂಡಪ್ಪ ಮುಳೆ ಅವರಿಗೆ ಹಿರಿಯ ಅಧಿಕಾರಿ ಕಿರುಕುಳ ನೀಡಿದ್ದರು ಎಂದು ಹೇಳಲಾಗುತ್ತಿದೆ.

sub inspector commits suicide in Maharashtra
ಅಧಿಕಾರಿಗಳ ಕಿರುಕುಳದಿಂದ ಬೇಸತ್ತು ಮಹಾರಾಷ್ಟ್ರದಲ್ಲಿ ಸಬ್ ಇನ್ಸ್‌ಪೆಕ್ಟರ್ ಆತ್ಮಹತ್ಯೆ
author img

By

Published : Aug 16, 2021, 8:21 PM IST

ಅಮರಾವತಿ (ಮಹಾರಾಷ್ಟ್ರ): ಅಮರಾವತಿಯ ಸಬ್ ಇನ್ಸ್‌ಪೆಕ್ಟರ್ ಆತ್ಮಹತ್ಯೆ ಪ್ರಕರಣ ಸಂಬಂಧ ಆಡಿಯೋ ಕ್ಲಿಪ್​ವೊಂದು ವೈರಲ್​ ಆಗಿದ್ದು, ಅಧಿಕಾರಿಗಳ ಕಿರುಕುಳದಿಂದ ಬೇಸತ್ತು ಅವರು ಪ್ರಾಣ ತೆಗೆದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದರೇ ಎಂಬ ಪ್ರಶ್ನೆ ಮೂಡಿದೆ.

ಆಗಸ್ಟ್ 13 ರಂದು ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ರಾಜಪೇತ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅನಿಲ್ ಬಂಡಪ್ಪ ಮುಳೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾವಿಗೂ ಮುನ್ನ ಅನಿಲ್ ಮುಳೆ ಹಾಗೂ ನಾಂದೇಡ್ ಜಿಲ್ಲಾ ಆಡಳಿತಾಧಿಕಾರಿ ರಾಮದಾಸ್ ಪಾಟೀಲ್ ನಡುವಿನ ಸಂಭಾಷಣೆ (ಮರಾಠಿ ಭಾಷೆಯಲ್ಲಿ) ಎಂದು ಹೇಳಲಾದ ಆಡಿಯೋ ಕ್ಲಿಪ್ ಈಗ ವೈರಲ್ ಆಗುತ್ತಿದೆ.

ಇದನ್ನೂ ಓದಿ: ನಿಗೂಢ ಕೊಲೆ ರಹಸ್ಯ ಭೇದಿಸಿದ ವಿಜಯಪುರ ಪೊಲೀಸರು: ಮೂವರ ಬಂಧನ

ವಿಚಾರ ಏನು?

ನಾಂದೇಡ್​ನಲ್ಲಿ ಸೇವೆ ಸಲ್ಲಿಸುತ್ತಿದ್ದ ಅನಿಲ್ ಮುಳೆಯನ್ನು 2018ರಲ್ಲಿ ರಾಜಪೇತ್ ಪೊಲೀಸ್​ ಠಾಣೆಗೆ ವರ್ಗಾಯಿಸಲಾಗಿತ್ತು. 2014 ರಿಂದ ಬಾಕಿಯಿದ್ದ ಪ್ರಕರಣವೊಂದರವ ತನಿಖೆಯನ್ನು ಅನಿಲ್​ ಮುಳೆ ಹೆಗಲಿಗೆ ಹೇರಲಾಗಿತ್ತು. 2014 ರಿಂದ 2018 ರವರೆಗೆ 9 ಅಧಿಕಾರಿಗಳು ಈ ಪ್ರಕರಣದ ತನಿಖೆ ನಡೆಸಿದ್ದರೂ ಕೂಡ ಆರೋಪಿಯ ಬಂಧನವಾಗಿರಲಿಲ್ಲ. ಅನಿಲ್​ ಮುಳೆಗೂ ಕೂಡ ಪ್ರಕರಣ ಭೇದಿಸಲು ಸಾಧ್ಯವಾಗಿರಲಿಲ್ಲ. ಇದಕ್ಕಾಗಿ ಇವರ ಸಂಬಳ ಕಡಿತಗೊಳಿಸುವ ಶಿಕ್ಷೆಯನ್ನು ಉಪ ಪೊಲೀಸ್ ಆಯುಕ್ತ ನೀಡಿದ್ದರು. ಈ ವಿಚಾರವನ್ನು ರಾಮದಾಸ್ ಪಾಟೀಲ್ ಜೊತೆ ಅನಿಲ್ ಮುಳೆ ಹಂಚಿಕೊಂಡಿರುವ ಹಾಗೂ ಅನಿಲ್​ಗೆ ರಾಮದಾಸ್​ ಸಮಾಧಾನ ಮಾಡುತ್ತಿರುವ ಸಂಭಾಷಣೆ ಈ ಆಡಿಯೋ ಕ್ಲಿಪ್​ನಲ್ಲಿ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.