ETV Bharat / bharat

Positive : ಲಸಿಕೆ ಹಾಕಿಸಿಕೊಂಡವರು ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಶೇ.75-80% ಕಡಿಮೆ - ಡಾ.ವಿ ಕೆ ಪಾಲ್‌ - ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ

ಗ್ರಾಮೀಣ ಪ್ರದೇಶಗಳಲ್ಲಿ ಸೆರೊಪೊಸಿಟಿವಿಟಿ ದರವು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಶೇ.56ರಷ್ಟು ಮತ್ತು 18 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಶೇ.63ರಷ್ಟಾಗಿದೆ. ಮಕ್ಕಳಿಗೆ ಸೋಂಕು ತಗುಲಿರುವುದು ಕಂಡು ಬರುತ್ತಿದೆ. ಆದ್ರೆ, ಅತಿ ಕಡಿಮೆ ಪ್ರಕರಣಗಳಿದ್ದು, 3ನೇ ಅಲೆಯಲ್ಲಿ ಐಸೋಲೇಷನ್‌ನಲ್ಲಿರುವವರಿಂದ ಮಕ್ಕಳಿಗೆ ಸೋಂಕು ತಗಲುವ ಸಾಧ್ಯತೆ ಇದೆ ಎಂದಿದ್ದಾರೆ..

Studies show that chances of hospitalization are 75-80% less in vaccinated individuals: Dr VK Paul
Positive: ಲಸಿಕೆ ಹಾಕಿದ ವ್ಯಕ್ತಿಗಳು ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಶೇಕಡಾ 75-80% ಕಡಿಮೆ
author img

By

Published : Jun 18, 2021, 5:44 PM IST

ನವದೆಹಲಿ : ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವ್ಯಾಕ್ಸಿನ್‌ ಲಭ್ಯವಾದ ಬೆನ್ನಲ್ಲೇ ಸಿಹಿ ಸುದ್ದಿಯೊಂದು ಹೊರ ಬಿದ್ದಿದೆ. ಲಸಿಕೆ ಪಡೆದ ವ್ಯಕ್ತಿಗಳು ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಶೇ.75-80ರಷ್ಟು ಕಡಿಮೆ ಎಂದು ಅಧ್ಯಯನಗಳು ತೋರಿಸುತ್ತಿವೆ. ಅಂತಹ ವ್ಯಕ್ತಿಗಳಿಗೆ ಆಮ್ಲಜನಕದ ಅಗತ್ಯವಿರುವ ಸಾಧ್ಯತೆ ಸುಮಾರು ಶೇ.8ರಷ್ಟು, ಲಸಿಕೆ ಹಾಕಿದ ವ್ಯಕ್ತಿಗಳಲ್ಲಿ ಐಸಿಯು ಅವಶ್ಯಕತೆ ಕೇವಲ ಶೇ.6ರಷ್ಟು ಮಾತ್ರ ಇದೆ ಎಂದು ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ಡಾ.ವಿ ಕೆ ಪಾಲ್‌ ತಿಳಿಸಿದ್ದಾರೆ.

ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, WHO-AIIMS ಸಮೀಕ್ಷೆಯಂತೆ 18 ವರ್ಷಕ್ಕಿಂತ ಕಡಿಮೆ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ ಸೆರೊಪೊಸಿಟಿವಿಟಿ ಬಹುತೇಕ ಸಮಾನವಾಗಿದೆ ಎಂದು ತೋರಿಸುತ್ತದೆ. 18 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಶೇ.67ರಷ್ಟು, 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಸಿರೊಪೊಸಿಟಿವಿಟಿ ದರ ಶೇ.59ರಷ್ಟಾಗಿದೆ. ನಗರ ಪ್ರದೇಶಗಳಲ್ಲಿ, ಇದು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಶೇ.78ರಷ್ಟು ಮತ್ತು 18 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಶೇ. 79ರಷ್ಟು ಸಿರೊಪೊಸಿಟಿವಿಟಿ ದರ ಇದೆ ಎಂದ ಹೇಳಿದರು.

ಇದನ್ನೂ ಓದಿ: ಕೊರೊನಾ ಸಂಬಂಧ ಪ್ರತಿಪಕ್ಷ ಹಳಿ ತಪ್ಪಿಸುವ ಕೆಲಸ ಮಾಡುತ್ತಿವೆ : ನಡ್ಡಾ ಕಿಡಿ

ಗ್ರಾಮೀಣ ಪ್ರದೇಶಗಳಲ್ಲಿ ಸೆರೊಪೊಸಿಟಿವಿಟಿ ದರವು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಶೇ.56ರಷ್ಟು ಮತ್ತು 18 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಶೇ.63ರಷ್ಟಾಗಿದೆ. ಮಕ್ಕಳಿಗೆ ಸೋಂಕು ತಗುಲಿರುವುದು ಕಂಡು ಬರುತ್ತಿದೆ. ಆದ್ರೆ, ಅತಿ ಕಡಿಮೆ ಪ್ರಕರಣಗಳಿದ್ದು, 3ನೇ ಅಲೆಯಲ್ಲಿ ಐಸೋಲೇಷನ್‌ನಲ್ಲಿರುವವರಿಂದ ಮಕ್ಕಳಿಗೆ ಸೋಂಕು ತಗಲುವ ಸಾಧ್ಯತೆ ಇದೆ ಎಂದಿದ್ದಾರೆ.

ಎಲ್ಲ ವಯೋಮಾನದವರಲ್ಲಿ ಸಿರೊಪೊಸಿಟಿವಿಟಿ ಬಹುತೇಕ ಸಮಾನವಾಗಿದೆ ಎಂದು ಸಿರೊ ಸರ್ವೆ ಹೇಳಿರುವುದರಿಂದ ಕೋವಿಡ್‌ 3ನೇ ಅಲೆಯಲ್ಲಿ ಮಕ್ಕಳ ಮೇಲೆ ಸಮಾನ ಪ್ರಮಾಣದಲ್ಲಿ ಪರಿಣಾಮ ಬೀರುತ್ತದೆ ಎಂಬುದು ನಿಜವಲ್ಲ. ಆದರೂ ಸರ್ಕಾರ ಎಲ್ಲಾ ರೀತಿಯ ಅಗತ್ಯವಾದ ಕ್ರಮಗಳನ್ನು ಕೈಗೊಂಡಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಲಾವ್‌ ಅಗರ್‌ವಾಲ್‌ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.