ETV Bharat / bharat

ಆಶ್ಚರ್ಯವಾದ್ರೂ ಇದು ನಿಜ.. ಈ ಶಾಲೆಯ ಪ್ರತಿ ವಿದ್ಯಾರ್ಥಿ 'ಕೈ ಬರಹ' ಒಂದೇ ರೀತಿ!

ಬಿಹಾರದಲ್ಲಿರುವ ಶಾಲೆಯೊಂದರಲ್ಲಿ100 ವಿದ್ಯಾರ್ಥಿಗಳು ವ್ಯಾಸಂಗ ಮಾಡ್ತಿದ್ದು, ಎಲ್ಲ ಸ್ಟೂಡೆಂಟ್ಸ್​​ಗಳ ಕೈ ಬರಹ ಮಾತ್ರ ಒಂದೇ ರೀತಿಯಾಗಿದೆ...

Students of a school have same handwriting

author img

By

Published : May 4, 2022, 10:17 PM IST

ಗಯಾ(ಬಿಹಾರ): ಶಾಲೆಗಳಲ್ಲಿ ವ್ಯಾಸಂಗ ಮಾಡುವ ಪ್ರತಿ ವಿದ್ಯಾರ್ಥಿಯ ಕೈ ಬರಹ ವಿಭಿನ್ನವಾಗಿರುವುದು ಸರ್ವೆ ಸಾಮಾನ್ಯ. ಆದರೆ, ಇಲ್ಲೊಂದು ಶಾಲೆಯಲ್ಲಿ ಎಲ್ಲ ಸ್ಟೂಡೆಂಟ್ಸ್​ಗಳ ಕೈ ಬರಹ ಒಂದೇ ರೀತಿಯಾಗಿದೆ. ನಂಬಲೂ ಸ್ವಲ್ಪ ಕಷ್ಟವಾದ್ರೂ ಇದು ಮಾತ್ರ ಸತ್ಯ. ಇಂತಹದೊಂದು ವಿಭಿನ್ನ ಶಾಲೆ ಎಲ್ಲಿದೆ ಎಂಬ ಕುತೂಹಲ ನಿಮಗಿದ್ರೆ ಈ ಸ್ಟೋರಿ ನೋಡಿ...

ಪ್ರತಿ ವಿದ್ಯಾರ್ಥಿಯ ಕೈಬರಹ ಒಂದೇ ರೀತಿ ಹೊಂದಿರುವ ಶಾಲೆ

ಬಿಹಾರದ ಗಯಾದಲ್ಲಿರುವ ಗೌತಮ ಬುದ್ಧ ಶಿಕ್ಷಣ ಸಂಸ್ಥಾನದ ಶಾಲೆವೊಂದು ಸರೆನ್​ ಗ್ರಾಮದಲ್ಲಿದೆ. ಇಲ್ಲಿ ಓದುತ್ತಿರುವ ಮಕ್ಕಳ ಕೈ ಬರಹ ಒಂದೇ ರೀತಿಯಾಗಿದೆ. ಹಿಂದಿ, ಇಂಗ್ಲಿಷ್​ ಅಥವಾ ಗಣಿತ ಯಾವುದೇ ವಿಷಯವಾದ್ರೂ ಈ ವಿದ್ಯಾರ್ಥಿಗಳು ಒಂದೇ ರೀತಿಯಾಗಿ ಬರೆಯುತ್ತಾರೆ. ಇದರ ಬಗ್ಗೆ ಮಾತನಾಡಿರುವ ಶಾಲೆಯ ಪ್ರಾಂಶುಪಾಲ ಚಂದ್ರಮೌಳಿ ಪ್ರಸಾದ್​, ಏಕರೂಪದ ಕೈ ಬರಹ ಹೊಂದುವುದು ಅಸಾಧ್ಯ ಏನಿಲ್ಲ. ಇದಕ್ಕಾಗಿ ಚಿಕ್ಕ ವಯಸ್ಸಿನಲ್ಲೇ ಮಕ್ಕಳ ಮೇಲೆ ಸಾಕಷ್ಟು ಶ್ರಮ ವಹಿಸಬೇಕು. ಇದರಿಂದ ಮಾತ್ರ ಸುಂದರವಾದ ಕೈಬರಹ ಹೊಂದಲು ಸಾಧ್ಯ ಎನ್ನುತ್ತಾರೆ.

Students of a school have same handwriting
ಈ ಶಾಲೆಯ ಪ್ರತಿ ವಿದ್ಯಾರ್ಥಿ 'ಕೈ ಬರಹ' ಒಂದೇ ರೀತಿ!

ಇದನ್ನೂ ಓದಿ: IAS ಅಧಿಕಾರಿ ಮಗಳೊಂದಿಗೆ ಲವ್​ ಜಿಹಾದ್​.. ಗಾಜಿಯಾಬಾದ್​ನಲ್ಲಿ ಪ್ರಕರಣ ದಾಖಲು

ಇಂದಿನ ದಿನಗಳಲ್ಲಿ ಬಹುತೇಕ ಎಲ್ಲ ಶಾಲೆಗಳು ನೇರವಾಗಿ ಪುಸ್ತಕದ ಮೇಲೆ ಬರೆಸುತ್ತಾರೆ. ಆದರೆ, ಅವರಿಗೆ ಮೊದಲು ಸ್ಲೇಟಿನಲ್ಲಿ ಬರೆಸುವ ಅಭ್ಯಾಸ ಮಾಡಿಸಬೇಕು. ಅವಾಗ ಮಾತ್ರ ಉತ್ತಮವಾಗಿ ಕೈಬರಹ ಬರಲು ಸಾಧ್ಯ ಎನ್ನುತ್ತಾರೆ. ಶಾಲೆಯ ಮಕ್ಕಳ ಕೈಬರಹ ಏಕರೂಪ ಹಾಗೂ ಉತ್ತಮವಾಗಿಸಲು ಶಾಲೆಯ ಶಿಕ್ಷಕರು ವಿಶೇಷ ತರಬೇತಿ ನೀಡುತ್ತಾರೆ. ಹೀಗಾಗಿ, ಮಕ್ಕಳ ಕೈಬರಹ ಒಂದೇ ರೀತಿ ಕಾಣುತ್ತದೆ.

ಗೌತಮ ಬುದ್ಧ ಶಿಕ್ಷಣ ಸಂಸ್ಥಾನದ ಶಾಲೆ

ವಿದ್ಯಾರ್ಥಿಗಳ ಹ್ಯಾಂಡ್​ ರೈಟಿಂಗ್ ನೋಡಿ ಎಲ್ಲರೂ ಅಚ್ಚರಿ: ಶಾಲೆಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಒಂದೇ ರೀತಿಯ ಕೈಬರಹ ಹೊಂದಿರುವ ವಿಷಯವನ್ನ ಯಾರೂ ಸಹ ನಂಬಲ್ಲ. ಆದರೆ, ಖುದ್ದಾಗಿ ನೋಡಿದಾಗ ಮಾತ್ರ ಎಲ್ಲರೂ ಅಚ್ಚರಿಗೊಳಗಾಗುತ್ತಾರೆ.

ಬಿಹಾರದ ಗಯಾದಲ್ಲಿರುವ ಶಾಲೆಯ ಮಕ್ಕಳು

ಪ್ರತಿ ವರ್ಷ 100 ಮಕ್ಕಳಿಗೆ ಮಾತ್ರ ಪ್ರವೇಶ: ಗೌತಮ ಬುದ್ಧ ಶಿಕ್ಷಣ ಸಂಸ್ಥೆಯ ಶಾಲೆಯಲ್ಲಿ ವರ್ಷಕ್ಕೆ 100 ಮಕ್ಕಳಿಗೆ ಮಾತ್ರ ಪ್ರವೇಶ ನೀಡಲಾಗ್ತದೆ. 1ರಿಂದ 5ನೇ ತರಗತಿವರೆಗೆ ಮಕ್ಕಳಿಗೆ ಮೂಲ ಶಿಕ್ಷಣ ನೀಡಲಾಗ್ತದೆ. ಹಿಂದಿ, ಇಂಗ್ಲಿಷ್​, ಗಣಿತ ಮತ್ತು ವಿಜ್ಞಾನ ವಿಷಯಗಳನ್ನ ತದನಂತರ ಕಲಿಸಲಾಗ್ತಿದೆ. ಈ ಶಾಲೆಯಲ್ಲಿ ಪ್ರಾಂಶುಪಾಲರು ಸೇರಿದಂತೆ ನಾಲ್ವರು ಶಿಕ್ಷಕರು ಮಕ್ಕಳಿಗೆ ಪಾಠ ಮಾಡ್ತಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.