ETV Bharat / bharat

ಇವರ ಗೋಳು ಕೇಳೋರು ಯಾರು? Online Class​​ಗೋಸ್ಕರ ಮರವೇರುವ ವಿದ್ಯಾರ್ಥಿಗಳು!

ತಮಿಳುನಾಡಿನ ನಮಕ್ಕಲ್ ಜಿಲ್ಲೆಯ ಎರಡು ಗ್ರಾಮದ ವಿದ್ಯಾರ್ಥಿಗಳು ಆನ್​ಲೈನ್​ ತರಗತಿಗೋಸ್ಕರ ಸರ್ಕಸ್​ ಮಾಡ್ತಿದ್ದಾರೆ. ಅವರು ಊರ ಹೊರಗಿನ ಬೃಹತ್​​ ಆಲದ ಮರವೇರಿ ಕುಳಿತುಕೊಳ್ಳಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ.

Students climb tree
Students climb tree
author img

By

Published : Jul 5, 2021, 3:38 PM IST

ನಮಕ್ಕಲ್​(ತಮಿಳುನಾಡು): ದೇಶಾದ್ಯಂತ ಕೊರೊನಾ ವೈರಸ್ ಹಾವಳಿಯಿಂದ ಶಾಲಾ-ಕಾಲೇಜು​ ಬಂದ್​ ಆಗಿವೆ. ಆನ್​ಲೈನ್​ ಮೂಲಕ ತರಗತಿಗಳು ನಡೆಯಲು ಶುರುವಾಗಿವೆ.

ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳಿಗೆ ಮೊಬೈಲ್​ ಇಲ್ಲದೇ​ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಕೆಲವು ಗ್ರಾಮಗಳಲ್ಲಿ ನೆಟ್​ವರ್ಕ್​ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳು ಮತ್ತಷ್ಟು ಸಮಸ್ಯೆ ಎದುರಿಸುವಂತಾಗಿದೆ.

ಬೃಹತ್​ ಮರವೇರಿ ಪಾಠ ಕೇಳುವ ವಿದ್ಯಾರ್ಥಿಗಳು

ತಮಿಳುನಾಡಿನ ನಮಕ್ಕಲ್ ಜಿಲ್ಲೆಯ ಎರಡು ಗ್ರಾಮದ ವಿದ್ಯಾರ್ಥಿಗಳು ಆನ್​ಲೈನ್​ ತರಗತಿಗೋಸ್ಕರ ಸರ್ಕಸ್​ ಮಾಡ್ತಿದ್ದು, ಊರ ಹೊರಗಿನ ಬೃಹತ್​​ ಆಲದ ಮರವೇರಿ ಕುಳಿತುಕೊಳ್ಳಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ. ಊರಿನಲ್ಲಿ ನೆಟ್​ವರ್ಕ್​ ಇಲ್ಲದ ಕಾರಣ ಪುರುಷ ಹಾಗೂ ಮಹಿಳಾ ವಿದ್ಯಾರ್ಥಿಗಳು ಕ್ಲಾಸ್​ ಕೇಳಲು ಮರವೇರಬೇಕಾಗಿದ್ದು, ಈ ವೇಳೆ ಸ್ವಲ್ಪ ಯಾಮಾರಿದ್ರೂ ಪ್ರಾಣಕ್ಕೆ ಆಪತ್ತು ಬರುವುದು ಗ್ಯಾರಂಟಿ.

Students climb tree
ಆನ್​ಲೈನ್​ ಕ್ಲಾಸ್​ಗೋಸ್ಕರ ಈ ಕಸರತ್ತು!

ಇದನ್ನೂ ಓದಿರಿ: ಮದುವೆ ಮಂಟಪದಲ್ಲೇ ವರನಿಗೆ ಚಪ್ಪಲಿಯಿಂದ ಹೊಡೆದ ತಾಯಿ! Viral Video

ಆನ್​ಲೈನ್​ ತರಗತಿಗಳು ಆರಂಭಗೊಂಡಾಗಿನಿಂದಲೂ ವಿದ್ಯಾರ್ಥಿಗಳು ಪ್ರತಿ ದಿನ ಮರವೇರಿ ಪಾಠ ಕೇಳುತ್ತಿದ್ದಾರೆ. ವಿದ್ಯಾರ್ಥಿನಿಯರು ಸಹ ಈ ರೀತಿ ಸರ್ಕಸ್​ ಮಾಡ್ತಿದ್ದಾರೆ. ಪೆರಪಂಚೋಲೈ ಮತ್ತು ಪೆರಿಯಾ ಗೊಂಬೈ ಎಂಬ ಗ್ರಾಮದಲ್ಲಿ ನೆಟ್​ವರ್ಕ್‌​ ಸಮಸ್ಯೆ ಇದ್ದು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿ ಸಹ ಸಲ್ಲಿಕೆ ಮಾಡಿದ್ದಾರೆ. ಆದರೆ ಇಲ್ಲಿಯವರೆಗೆ ಅವರಿಗೆ ಯಾವುದೇ ರೀತಿಯ ಸಹಾಯ ಸಿಕ್ಕಿಲ್ಲ.

Students climb tree
ಮರವೇರಿ ಕ್ಲಾಸ್​ ಕೇಳುತ್ತಿರುವ ವಿದ್ಯಾರ್ಥಿಗಳು

ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಶ್ರೇಯಾ ಸಿಂಗ್​, ಆದಷ್ಟು ಬೇಗ ಗ್ರಾಮಗಳಲ್ಲಿ ಅನುಕೂಲವಾಗುವ ರೀತಿಯಲ್ಲಿ ನೆಟ್​ವರ್ಕ್​ ಟವರ್​ ನಿರ್ಮಾಣ ಮಾಡಲಾಗುವುದು ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.