ETV Bharat / bharat

ಬೆನ್ನಟ್ಟಿ ಹೋಗಿ ಪ್ರಾಂಶುಪಾಲರ ಮೇಲೆ ವಿದ್ಯಾರ್ಥಿ ಫೈರಿಂಗ್​.. ಬುದ್ಧಿ ಹೇಳಿದ್ದೇ ತಪ್ಪಾಯ್ತಾ?

author img

By

Published : Sep 24, 2022, 7:09 PM IST

ಈಗಿನ ವಿದ್ಯಾರ್ಥಿಗಳಿಗೆ ಶಿಕ್ಷಕರು ತಿಳಿ ಹೇಳಿದರೂ ಕಷ್ಟ. ಹೊಡೆದಾಡಿಕೊಂಡ ವಿದ್ಯಾರ್ಥಿಗಳನ್ನು ಟೀಕಿಸಿದ್ದಕ್ಕೆ ವಿದ್ಯಾರ್ಥಿಯೋರ್ವ ಪ್ರಾಂಶುಪಾಲರ ಮೇಲೆಯೇ ಗುಂಡಿನ ದಾಳಿ ಮಾಡಿ ಹತ್ಯೆ ಪ್ರಯತ್ನ ನಡೆಸಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

student-firing-on-principal-in-uttara-pradesh
ಬೆನ್ನಟ್ಟಿ ಹೋಗಿ ಪ್ರಾಂಶುಪಾಲರ ಮೇಲೆ ವಿದ್ಯಾರ್ಥಿ ಫೈರಿಂಗ್​

ಲಖನೌ, ಉತ್ತರಪ್ರದೇಶ: ಶಾಲಾ- ಕಾಲೇಜಿನಲ್ಲಿ ಮಕ್ಕಳು ತಪ್ಪು ಮಾಡಿದರೆ ಈ ಹಿಂದೆ ದಂಡಿಸಲಾಗುತ್ತಿತ್ತು. ಈಗ ದಂಡಿಸುವುದು ಬಿಡಿ, ಬೈದರೂ ಕಷ್ಟ ಎಂಬಂತಾಗಿದೆ. ಉತ್ತರಪ್ರದೇಶದಲ್ಲಿ ವಿದ್ಯಾರ್ಥಿಗಳಿಬ್ಬರು ಕಿತ್ತಾಡಿಕೊಂಡಿದ್ದನ್ನು ತಪ್ಪು ಎಂದು ಹೇಳಿ ಓರ್ವ ವಿದ್ಯಾರ್ಥಿಯನ್ನು ಬೈದಿದ್ದಕ್ಕೆ ಕೋಪಗೊಂಡ ಆತ ಪ್ರಾಂಶುಪಾಲರ ಮೇಲೆಯೇ ಪಿಸ್ತೂಲಿನಿಂದ ಗುಂಡಿನ ದಾಳಿ ಮಾಡಿದ್ದಾನೆ. ಪ್ರಾಂಶುಪಾಲರ ಸ್ಥಿತಿ ಗಂಭೀರವಾಗಿದೆ.

ಏನಾಯ್ತು?: ಇಲ್ಲಿನ ಕಾಲೇಜೊಂದರಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿಗಳಿಬ್ಬರು ಯಾವುದೋ ಕಾರಣಕ್ಕಾಗಿ ಕಿತ್ತಾಡಿಕೊಂಡಿದ್ದಾರೆ. ಓರ್ವ ಇನ್ನೊಬ್ಬನನ್ನು ಥಳಿಸಿದ್ದ. ಇದು ಪ್ರಾಂಶುಪಾಲರ ಗಮನಕ್ಕೆ ಬಂದು ಅವರು ಹಲ್ಲೆ ಮಾಡಿದ ವಿದ್ಯಾರ್ಥಿಯನ್ನು ಬೈದಿದ್ದಾರೆ. ಅಲ್ಲಿಂದ ಆತನನ್ನು ತೆರಳುವಂತೆ ಹೇಳಿದ್ದಾರೆ.

ಇದರಿಂದ ಅವಮಾನಗೊಡ ಆತ, ಮರುದಿನ 315 ಬೋರ್​ ಪಿಸ್ತೂಲ್​ ಸಮೇತ ಕಾಲೇಜಿಗೆ ಆಗಮಿಸಿದ್ದಾನೆ. ಈ ವೇಳೆ, ಕಾಲೇಜಿನಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡವನ್ನು ಪ್ರಾಂಶುಪಾಲರು ವೀಕ್ಷಿಸುತ್ತಿದ್ದರು. ಅಲ್ಲಿಗೆ ಬಂದ ಆ ವಿದ್ಯಾರ್ಥಿ ರಿವಾಲ್ವರ್​ನಿಂದ ಏಕಾಏಕಿ ಪ್ರಾಂಶುಪಾಲರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

ಪ್ರಾಂಶುಪಾಲರು ತಪ್ಪಿಸಿಕೊಂಡು ಕಚೇರಿಯತ್ತ ಓಡಿದ್ದಾರೆ. ಬಿಡದ ವಿದ್ಯಾರ್ಥಿ ಬೆನ್ನಟ್ಟಿ ಬಂದು ಪ್ರಾಂಶುಪಾಲರ ತಲೆಗೆ ಗುರಿಯಿಟ್ಟು ಗುಂಡು ಹಾರಿಸಿದ್ದಾರೆ. ತೀವ್ರ ಗಾಯಗೊಂಡ ಪ್ರಾಂಶುಪಾಲರು ಅಲ್ಲಿಯೇ ಬಿದ್ದಿದ್ದಾರೆ. ಬಳಿಕ ಹೊಟ್ಟೆಗೂ ಗುಂಡು ಹಾರಿಸಿದ ವಿದ್ಯಾರ್ಥಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ತಲೆಗೆ ಗುಂಡು ಬಿದ್ದ ಕಾರಣ ಪ್ರಾಂಶುಪಾಲರು ಗಂಭೀರವಾಗಿ ಗಾಯಗೊಂಡಿದ್ದಾರೆ. ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಪ್ರಾಂಶುಪಾಲರನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈಗಲೂ ಪ್ರಾಂಶುಪಾಲರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಮಕ್ಕಳ ತಪ್ಪನ್ನು ತಿದ್ದುವುದು ಶಿಕ್ಷಕನ ಕೆಲಸ ಎಂದು ಹೇಳಿ ಜಗಳವನ್ನು ಬಿಡಿಸಲು ಹೋದ ಪ್ರಾಂಶುಪಾಲ ವಿದ್ಯಾರ್ಥಿಯ ಕೋಪಕ್ಕೆ ತುತ್ತಾಗಿ ಗುಂಡೇಟು ತಿಂದು ಸಾವು ಬದುಕಿನ ಮಧ್ಯೆ ಹೋರಾಡುವಂತಾಗಿದೆ.

ಓದಿ: ಹೆಂಡ್ತೀರ ಜಗಳ ನಿಲ್ಲಿಸಲು ಗಂಡ ಆಯ್ದುಕೊಂಡಿದ್ದು ಕೊಲೆ.. 2ನೇ ಹಂಡತಿಗೆ ಇಂಜೆಕ್ಷನ್​ ನೀಡಿ ಕೊಂದ ಪತಿ ರಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.