ETV Bharat / bharat

ಅಮೆರಿಕಕ್ಕೆ ಹೋಗುವ ಖುಷಿ ತಡೆಯಲಾಗದೇ ಹೃದಯಾಘಾತದಿಂದ ಮೃತಪಟ್ಟ ವಿದ್ಯಾರ್ಥಿ!

ಅಮೆರಿಕಕ್ಕೆ ಹೋಗುತ್ತೇನೆ ಎನ್ನುವ ಅತಿಯಾದ ಸಂತೋಷ ಸಹಿಸಿಕೊಳ್ಳಲಾಗದೇ ಹೃದಯಾಘಾತದಿಂದ ವಿದ್ಯಾರ್ಥಿಯೋರ್ವ ಮೃತಪಟ್ಟಿದ್ದಾನೆ. ಈ ಘಟನೆ ಪಂಜಾಬ್​ನಲ್ಲಿ ನಡೆದಿದೆ. ​

cardiac arrest
ಹೃದಯಾಘಾತ
author img

By

Published : Dec 18, 2022, 12:43 PM IST

ಪಂಜಾಬ್​: ಅತೀ ಹೆಚ್ಚು ಸಂತೋಷವನ್ನು ಸಹಿಸಿಕೊಳ್ಳಲಾಗದೇ ಯುವಕನೋರ್ವ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ರಾಜ್ಯದ ಲೆಹ್ರಾಗಾಗಾ ಪಟ್ಟಣದ ಪಟಿಯನ್‌ವಾಲಿ ಗ್ರಾಮದಲ್ಲಿ ನಡೆದಿದೆ. ರಂಜೋಧ್ ಸಿಂಗ್ (20) ಮೃತ ಯುವಕ.

ಮೂಲಗಳಿಂದ ದೊರೆತ ಮಾಹಿತಿ ಪ್ರಕಾರ, ಕಳೆದ ಹಲವು ದಿನಗಳ ಹಿಂದೆ ರಂಜೋಧ್ ಸಿಂಗ್ ಅವರು ಅಮೆರಿಕದ ಸಂಸ್ಥೆಯೊಂದಕ್ಕೆ ವಿದ್ಯಾಭ್ಯಾಸ ವೀಸಾಗೆ ಸಂದರ್ಶನ ನೀಡಿ ಅದರಲ್ಲಿ ತೇರ್ಗಡೆ ಹೊಂದಿದ್ದರು. ವೀಸಾ ಬಂದ ಬಳಿಕ ಇಡೀ ಮನೆಯಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿತ್ತು. ಡಿಸೆಂಬರ್ 24 ರಂದು ವಿಮಾನದ ಟಿಕೆಟ್​ ಕೂಡ ಬುಕ್​ ಆಗಿತ್ತು.

ಅಮೆರಿಕಕ್ಕೆ ತೆರಳುತ್ತಿರುವುದಕ್ಕೆಂದು ರಂಜೋಧ್ ಅವರು ಪಟಿಯಾಲಾದಲ್ಲಿ ಶಾಪಿಂಗ್‌ಗೆ ಹೋಗಿದ್ದರು. ಸ್ನೇಹಿತರನ್ನು ಭೇಟಿ ಮಾಡಿ ಪಾರ್ಟಿ ಕೊಡುತ್ತಿದ್ದರು. ಈ ಸಂದರ್ಭದಲ್ಲಿ ಯುವಕನಿಗೆ ಹೃದಯಾಘಾತವಾಗಿದೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಪ್ರಯೋಜನವಾಗಲಿಲ್ಲ. ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ವೈದ್ಯರು, 'ರಂಜೋದ್ ಸಿಂಗ್ ಅವರಿಗೆ ಹೆಚ್ಚು ಸಂತೋಷವನ್ನು ಸಹಿಸಿಕೊಳ್ಳಲಾಗಲಿಲ್ಲ. ಇದರಿಂದಾಗಿ ಹೃದಯಾಘಾತ ಸಂಭವಿಸಿದೆ. ಸಾವಿರಕ್ಕೆ ಶೇಕಡಾ ಒಂದರಷ್ಟು ಇಂತಹ ಪ್ರಕರಣ​ ಕಂಡುಬರುತ್ತದೆ' ಎಂದು ತಿಳಿಸಿದರು.

ಇದನ್ನೂ ಓದಿ: ಫಿಟ್ & ಯಂಗ್ ಆಗಿದ್ರೂ ಏಕೆ ಜನ ಹೃದಯಾಘಾತಕ್ಕೆ ಒಳಗಾಗುತ್ತಾರೆ?

ವಿದೇಶಕ್ಕೆ ಹೋಗುವ ಕನಸು ಕಂಡ ರಂಜೋಧ್ ಸಿಂಗ್ ಅವರಿಗೆ ಸಂತೋಷವೇ ದುಃಖವಾಗಿ ಮಾರ್ಪಟ್ಟಿದ್ದು, ಇಡೀ ಕುಟುಂಬ ಮತ್ತು ಸಂಬಂಧಿಕರಲ್ಲಿ ಶೋಕ ಮಡುಗಟ್ಟಿದೆ. ಪಟಿಯನ್‌ವಾಲಿ ಗ್ರಾಮದಲ್ಲಿ ಯುವಕನ ಮೃತದೇಹದ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.