ETV Bharat / bharat

ಅತಿಯಾಗಿ ಸ್ಮಾರ್ಟ್​ಫೋನ್​​ ಬಳಸದಂತೆ ತಂದೆ ತಾಕೀತು : ನೇಣು ಬಿಗಿದುಕೊಂಡು ಬಾಲಕಿ ಆತ್ಮಹತ್ಯೆ

ಕೆಲವು ದಿನಗಳಿಂದ ಮಗಳು ಮೊಬೈಲ್ ಫೋನ್‌ನಲ್ಲಿ ಆನ್‌ಲೈನ್ ಗೇಮ್​​ಗಳಿಗೆ ವ್ಯಸನಿಯಾಗಿದ್ದಳು. ಇದನ್ನು ಗಮನಿಸಿದ ಆಕೆಯ ತಂದೆ ಸೆಲ್ ಫೋನ್ ಬಳಸದಂತೆ ಎಚ್ಚರಿಕೆ ನೀಡಿದರು..

ಹೈದರಾಬಾದ್‌
ಹೈದರಾಬಾದ್‌
author img

By

Published : Oct 4, 2021, 6:52 PM IST

ಹೈದರಾಬಾದ್‌ : ಸ್ಮಾರ್ಟ್​ಫೋನ್​​ ಅತಿಯಾಗಿ ಬಳಕೆ ಮಾಡದಂತೆ ತಂದೆ ತಾಕೀತು ಮಾಡಿದ್ದರಿಂದ ಮನನೊಂದ ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಹೈದರಾಬಾದ್‌ನ ಮೀರ್‌ಪೇಟೆಯಲ್ಲಿ ನಡೆದಿದೆ.

ಕೌಶಿಕಿ (17) ಎಂಬಾಕೆ ಆತ್ಮಹತ್ಯೆಗೆ ಶರಣಾದ ಬಾಲಕಿ. ಈಕೆ ಮನೋಹರ ಚಾರಿ ಎಂಬುವರ ಪುತ್ರಿ. ಮನೋಹರ ಚಾರಿ ಮೀರ್‌ಪೇಟೆಯ ಸರ್ವೋದಯ ನಗರ ಕಾಲೋನಿಯಲ್ಲಿ ಕುಟುಂಬದೊಂದಿಗೆ ವಾಸವಿದ್ದು, ಇವರಿಗೆ ಮೂವರು ಮಕ್ಕಳಿದ್ದಾರೆ. ಕೌಶಿಕಿ ಹಿರಿಯ ಮಗಳು. ಕೆಲವು ದಿನಗಳಿಂದ ಕೌಶಿಕಿ ಮೊಬೈಲ್ ಫೋನ್‌ನಲ್ಲಿ ಆನ್‌ಲೈನ್ ಗೇಮ್​​ಗಳಿಗೆ ವ್ಯಸನಿಯಾಗಿದ್ದಳು.

ಇದನ್ನು ಗಮನಿಸಿದ ಆಕೆಯ ತಂದೆ ಸೆಲ್ ಫೋನ್ ಬಳಸದಂತೆ ಎಚ್ಚರಿಕೆ ನೀಡಿದರು. ಆನ್‌ಲೈನ್ ಆಟಗಳಿಂದ ಹೊರ ಬರಲಾಗದೆ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತಕ್ಷಣ ಪೋಷಕರು ಅವಳನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಆಕೆ ಮಾರ್ಗ ಮಧ್ಯೆ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.

ಮೀರ್​ಪೇಟೆ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಮರಣೋತ್ತರ ಪರೀಕ್ಷೆಗಾಗಿ ಮೃತ ದೇಹವನ್ನು ಉಸ್ಮಾನಿಯಾ ಆಸ್ಪತ್ರೆಗೆ ಕಳುಹಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.