ETV Bharat / bharat

ಅತ್ಯಾಚಾರ ಮಾಡಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ಕಟುಕ!.. ಮಹಿಳೆ ಸಾವು

author img

By

Published : Apr 9, 2023, 7:20 AM IST

ರಾಜಸ್ಥಾನದಲ್ಲಿ ದಲಿತ ಮಹಿಳೆಯ ಮೇಲೆ ಅತ್ಯಾಚಾರ ಮಾಡಿ ಬಳಿಕ, ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ಘಟನೆ ನಡೆದಿದೆ. ತೀವ್ರ ಗಾಯಗಳಿಂದ ಮಹಿಳೆ ಸಾವಿಗೀಡಾಗಿದ್ದಾಳೆ.

ಅತ್ಯಾಚಾರ ಮಾಡಿ ಮಹಿಳೆಗೆ ಬೆಂಕಿ
ಅತ್ಯಾಚಾರ ಮಾಡಿ ಮಹಿಳೆಗೆ ಬೆಂಕಿ

ಜೋಧ್‌ಪುರ (ರಾಜಸ್ಥಾನ): ದಲಿತ ಮಹಿಳೆ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ನಡೆಸಿದ್ದಲ್ಲದೇ, ಆಕೆಯನ್ನು ಸಜೀವವಾಗಿ ದಹಿಸಿದ ದಾರುಣ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಬೆಂಕಿಯಿಂದಾಗಿ ತೀವ್ರ ಸುಟ್ಟ ಗಾಯಕ್ಕೀಡಾಗಿದ್ದ ಮಹಿಳೆ ನಿನ್ನೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಕುಟುಂಬ ಸದಸ್ಯರು ಪರಿಹಾರ ನೀಡುವವರೆಗೂ ಅಂತ್ಯಕ್ರಿಯೆ ನಡೆಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಆಸ್ಪತ್ರೆ ಮುಂಭಾಗವೇ ಪ್ರತಿಭಟನೆ ನಡೆಸಿದ್ದಾರೆ.

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ಈ ದುರಂತ ನಡೆದಿದೆ. ಏಪ್ರಿಲ್​ 6 ರಂದು ಪಕ್ಕದ ಮನೆಯ ವ್ಯಕ್ತಿ ಮಹಿಳೆಯ ಮನೆಗೆ ನುಗ್ಗಿ ಅತ್ಯಾಚಾರ ನಡೆಸಿದ್ದಾನೆ. ಬಳಿಕ ಆಕೆ ಬಾಯಿಬಿಟ್ಟರೆ ತಾನು ಸಿಕ್ಕಿಹಾಕಿಕೊಳ್ಳುವ ಭಯದಲ್ಲಿ ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ಮಹಿಳೆಯ ಕಿರುಚಾಟವನ್ನು ಕೇಳಿ ಆಕೆಯ ಸಹೋದರಿ ಕೋಣೆಗೆ ಓಡಿ ಬಂದು ರಕ್ಷಿಸಿದ್ದಾರೆ. ತಕ್ಷಣವೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ಬಳಿಕ ಜೋಧ್​ಪುರಕ್ಕೆ ಕೊಂಡೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಆದರೆ, ಮಹಿಳೆಯ ತೀವ್ರ ಸುಟ್ಟ ಗಾಯಗಳಿಂದಾಗಿ ಶುಕ್ರವಾರ ಅಸುನೀಗಿದ್ದಾರೆ.

  • बाड़मेर के बालोतरा में महिला से दुष्कर्म के बाद उसे जलाने की घटना गहलोत के जंगलराज को दर्शाता है। मुख्यमंत्री श्री @ashokgehlot51 जी जो राजस्थान के गृह विभाग के मुखिया भी है, वह राज्य की लचर कानून व्यवस्था के लिए पूर्णतया जिम्मेदार है।

    — Rajendra Rathore (@Rajendra4BJP) April 7, 2023 " class="align-text-top noRightClick twitterSection" data=" ">

ಆಸ್ಪತ್ರೆ ಮುಂದೆ ಪ್ರತಿಭಟನೆ: ಇನ್ನು, ಮಹಿಳೆಯ ಸಾವಿನ ನಂತರ ಜೋಧ್​ಪುರದ ಮಹಾತ್ಮಾ ಗಾಂಧಿ ಆಸ್ಪತ್ರೆ ಆವರಣದಲ್ಲಿ ಜಮಾಯಿಸಿದ ಜನರು ಘಟನೆಯ ವಿರುದ್ಧ ಪ್ರತಿಭಟಿಸಿದರು. ಮಹಿಳೆಯ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ಮತ್ತು ಸರ್ಕಾರಿ ಉದ್ಯೋಗವನ್ನು ನೀಡುವಂತೆ ಒತ್ತಾಯಿಸಿದರು. ಅಲ್ಲಿಯವರೆಗೂ ಮರಣೋತ್ತರ ಪರೀಕ್ಷೆ ಮಾಡಲೂ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಸರ್ಕಾರದ ವಿರುದ್ಧ ಬಿಜೆಪಿ ಟೀಕೆ; ಘಟನೆಗೆ ಸಂಬಂಧಿಸಿದಂತೆ ಸಿಎಂ ಅಶೋಕ್​ ಗೆಹ್ಲೋಟ್​ ನೇತೃತ್ವದ ಕಾಂಗ್ರೆಸ್​ ಸರ್ಕಾರದ ವಿರುದ್ಧ ಬಿಜೆಪಿ ಟೀಕಾಪ್ರಹಾರ ನಡೆಸಿದೆ. ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ಕೈಲಾಶ್ ಚೌಧರಿ ಅವರು ಮಹಾತ್ಮಾ ಗಾಂಧಿ ಆಸ್ಪತ್ರೆಗೆ ಭೇಟಿ ನೀಡಿ ಅಹವಾಲು ಆಲಿಸಿದರು. ಘಟನೆಯನ್ನು ಅವರು ಲವ್ ಜಿಹಾದ್‌ಗೆ ಹೋಲಿಸಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಕಾರಣ ಕಿಡಿಗೇಡಿಗಳು ಬಹಿರಂಗವಾಗಿ ಇಂತಹ ಕೃತ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿದರು.

  • बालोतरा में एक दलित विवाहिता के साथ दुष्कर्म कर उसे तेजाब से जलाने की घटना सम्पूर्ण क्षेत्र के साथ राजस्थान पर काला धब्बा एवं लचर कानून व्यवस्था का प्रमाण है।

    — Kailash Choudhary (@KailashBaytu) April 7, 2023 " class="align-text-top noRightClick twitterSection" data=" ">

ಇಂತಹ ಪ್ರಕರಣದಲ್ಲೂ ಪೊಲೀಸ್ ಅಧಿಕಾರಿಗಳು ರಾಜಕೀಯ ಮಾಡುತ್ತಿದ್ದು, ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಚೌಧರಿ ಒತ್ತಾಯಿಸಿದರು. ಇದೇ ವೇಳೆ ಸಂತ್ರಸ್ತೆ ಕುಟುಂಬ ಸದಸ್ಯರ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ.

ರಾಜ್ಯದ ಪ್ರತಿಯೊಬ್ಬ ಶ್ರೀಸಾಮಾನ್ಯನಿಗೆ ಕಾಂಗ್ರೆಸ್ ಸರ್ಕಾರ ಶಾಪವಾಗಿ ಪರಿಣಮಿಸಿದೆ. ಮುಖ್ಯಮಂತ್ರಿ ಜೊತೆಗೆ ಗೃಹ ಸಚಿವ ಸ್ಥಾನವನ್ನು ನಿಭಾಯಿಸುತ್ತಿರುವ ಸಿಎಂ ಗೆಹ್ಲೋಟ್ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲರಾಗಿದ್ದಾರೆ ಎಂದು ದೂರಿದರು.

ಪ್ರತಿಪಕ್ಷ ನಾಯಕ ರಾಜೇಂದ್ರ ರಾಥೋಡ್ ಘಟನೆಯನ್ನು ಖಂಡಿಸಿದ್ದು, ಮಹಿಳೆಯ ಮೇಲೆ ಅತ್ಯಾಚಾರ ಮಾಡಿದ ನಂತರ ಸುಟ್ಟುಹಾಕಿದ ಘಟನೆಯು ಗೆಹ್ಲೋಟ್ ಸರ್ಕಾರದ ಜಂಗಲ್​ರಾಜ್ ಆಡಳಿತವನ್ನು ಪ್ರತಿಬಿಂಬಿಸುತ್ತದೆ. ಬಂಧಿತ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಟ್ವೀಟ್​ ಮಾಡಿದ್ದಾರೆ.

ಘಟನೆಯ ನಂತರ ತಮ್ಮ ಮೇಲೆಯೇ ಪೊಲೀಸರು ಒತ್ತಡ ಹೇರುತ್ತಿದ್ದಾರೆ ಎಂದು ಸಚಿವರ ಮುಂದೆಯೇ ಸಂತ್ರಸ್ತೆಯ ಸಂಬಂಧಿಕರು ಆರೋಪಿಸಿದರು. ಮಹಿಳೆ ಕುಟುಂಬಸ್ಥರು ಮತ್ತು ಸಮಾಜದ ಜನರು ಠಾಣೆಗೆ ತೆರಳಿ ಗಲಾಟೆ ಮಾಡಿದಾಗ ಪ್ರಕರಣದ ದಾಖಲಿಸಲಾಗಿದೆ.

ಓದಿ: 11 ಬುಡಕಟ್ಟು ಮಹಿಳೆಯರ ಮೇಲಿನ ಅತ್ಯಾಚಾರ ಕೇಸ್​: 21 ಪೊಲೀಸರು ಖುಲಾಸೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.