ಲಕ್ನೋ (ಉತ್ತರ ಪ್ರದೇಶ): ಮನೆಯ ಹೊರಗೆ ಆಟವಾಡುತ್ತಿದ್ದ ಇಬ್ಬರು ಬಾಲಕಿಯರ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿರುವ ಘಟನೆ ವಜೀರ್‌ಗಂಜ್‌ನಲ್ಲಿ ನಡೆದಿದೆ. ಬಾಲಕಿಯರ ಅಳು ಕೇಳಿದ ಕುಟುಂಬಸ್ಥರು ಮನೆಯಿಂದ ಹೊರ ಬಂದು ನಾಯಿಗಳ ದಾಳಿಯಿಂದ ಇಬರನ್ನು ತುಂಬಾ ಪ್ರಯಾಸಪಟ್ಟು ರಕ್ಷಣೆ ಮಾಡಿದ್ದಾರೆ. ಬೀದಿನಾಯಿಗಳ ದಾಳಿಯಿಂದ ಈ ಭಾಗದ ಜನರು ಭಯಭೀತರಾಗಿದ್ದಾರೆ.
ಇದನ್ನೂ ಓದಿ: ರೆವಿನ್ಯೂ ಸ್ಟ್ಯಾಂಪ್ ಮಾದರಿಯಲ್ಲಿ ಅಪಾಯಕಾರಿ ಡ್ರಗ್ ಸೇಲ್: 2 ದಶಕದಲ್ಲೇ ಅತಿ ದೊಡ್ಡ ಜಾಲ ಭೇದಿಸಿದ ಎನ್‌ಸಿಬಿ
ರಾಜಧಾನಿಯಲ್ಲಿ ಬೀದಿ ನಾಯಿಗಳ ಉಪಟಳ: ರಾಜಧಾನಿಯಲ್ಲಿ ಬೀದಿ ನಾಯಿಗಳ ಉಪಟಳ ತಡೆಯಲು ಯಾರೂ ಕೂಡ ಮುಂದಾಗುತ್ತಿಲ್ಲ. ವಜೀರ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಗುಂಪೊಂದು ಇಬ್ಬರು ಬಾಲಕಿಯರ ಮೇಲೆ ಮಾರಣಾಂತಿಕವಾಗಿ ದಾಳಿ ನಡೆಸಿದ್ದರಿಂದ ದೀಪು ಸೋಂಕರ್ ಅವರ ಪುತ್ರಿ 9 ವರ್ಷ ವರ್ಷದ ಬಾಲಕಿ ಹಾಗೂ ಮಿಶ್ತಿ ಸೋಂಕರ್ ಅವರ ಪುತ್ರಿ 10 ವರ್ಷದ ಬಾಲಕಿ ಗಾಯಗೊಂಡಿದ್ದಾರೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ಶಾಲಾ ಮುಖ್ಯೋಪಾಧ್ಯಾಯರಿಂದ ಶಾಲಾ ಬಾಲಕಿ ಮೇಲೆ ಅತ್ಯಾಚಾರ : ವಿಡಿಯೋ ವೈರಲ್ ಮಾಡಿದ ಆರೋಪಿ
ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯ-ನಿವಾಸಿಗಳು ಆಕ್ರೋಶ: ಲಕ್ನೋದಲ್ಲಿ ಪದೇ ಪದೇ ನಾಯಿಗಳ ದಾಳಿಯಿಂದಾಗಿ, ಜನರು ಮನೆಯಿಂದ ಹೊರಗೆ ಹೋಗುವುದನ್ನು ನಿಲ್ಲಿಸಿದ್ದಾರೆ. ಇಷ್ಟು ಮಾತ್ರವಲ್ಲದೇ ರಸ್ತೆಗಳಲ್ಲಿ ದೊಣ್ಣೆ ಹಿಡಿದು ಗಸ್ತು ತಿರುಗುತ್ತಿದ್ದಾರೆ. ಈಗಲೂ ಕೂಡ ಹಲವೆಡೆ ರಹಸ್ಯವಾಗಿ ಪ್ರಾಣಿಗಳನ್ನು ಹತ್ಯೆ ಮಾಡಿ ಅವುಗಳ ಅವಶೇಷಗಳನ್ನು ಬಯಲಿಗೆ ಎಸೆಯಲಾಗುತ್ತದೆ. ಅವುಗಳನ್ನು ತಿಂದ ನಂತರ ನಾಯಿಗಳು ಹಿಂಸಾತ್ಮಕವಾಗಿ ವರ್ತಿಸುತ್ತಿವೆ. ಮಾಂಸ ಸಿಗದಿದ್ದಾಗ ಮಕ್ಕಳ ಮೇಲೆ ದಾಳಿ ನಡೆಸುತ್ತವೆ. ಎಲ್ಲಾ ಸಂತ್ರಸ್ತರು ಚುಚ್ಚುಮದ್ದು ಪಡೆಯಲು ಜಿಲ್ಲಾ ಆಸ್ಪತ್ರೆಗೆ ಹೋಗಬೇಕಾಗಿದೆ. ರಾಜಧಾನಿಯಲ್ಲಿ ಕಳೆದ ಎರಡು ತಿಂಗಳಲ್ಲಿ ಇಂತಹ ಹಲವು ಘಟನೆಗಳು ಮುನ್ನೆಲೆಗೆ ಬಂದಿವೆ. ಇಷ್ಟಾದರೂ ಪಾಲಿಕೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ನಿವಾಸಿಗಳು ಕಿಡಿಕಾರಿದರು.
ಹಿಂದೆಯು ನಡೆದಿತ್ತು ಬೀದಿ ನಾಯಿ ದಾಳಿ: ಮೇ 11ರಂದು ಲಕ್ನೋನ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯ (ಕೆಜಿಎಂಯು) ಆವರಣದಲ್ಲಿ ಬೀದಿ ನಾಯಿಯೊಂದು ದಾಳಿ ನಡೆಸಿತ್ತು. ಇಬ್ಬರು ವೈದ್ಯರು ಹಾಗೂ ಇತರ ಮೂವರಿಗೆ ಕಚ್ಚಿ ಗಾಯಗೊಳಿಸಿತ್ತು. ರಾಜಧಾನಿ ಲಕ್ನೋದಲ್ಲಿ ಕಳೆದೊಂದು ವರ್ಷದಲ್ಲಿ ನಡೆದ 16ನೇ ಪ್ರಮುಖ ಬೀದಿ ನಾಯಿ ದಾಳಿ ನಡೆಸಿದ ಪ್ರಕರಣ ಇದಾಗಿತ್ತು. ಈ ಕುರಿತು ವಿಶ್ವವಿದ್ಯಾನಿಲಯದ ಅಧಿಕಾರಿಗಳು ಲಕ್ನೋ ಮುನ್ಸಿಪಲ್ ಕಾರ್ಪೊರೇಷನ್ಗೆ ಮಾಹಿತಿ ಕೊಟ್ಟಿದ್ದರು. ಅವರು ಕ್ಯಾಂಪಸ್‌ಗೆ ತಂಡವನ್ನು ಕಳುಹಿಸಿದ್ದರು. ಆದರೆ, ಅವರು ಬರುವ ಮುನ್ನವೇ ನಾಯಿ ಸಾವನ್ನಪ್ಪಿದೆ ಎನ್ನಲಾಗಿತ್ತು. ಸಾವಿಗೆ ನಿಖರ ಕಾರಣ ತಿಳಿದಿಲ್ಲವಾದರೂ, ರೇಬೀಸ್ ರೋಗದಿಂದ ಬಳಲುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದರು.
ಇದನ್ನೂ ಓದಿ: ನಕಲಿ ರೈಡ್ ಸೃಷ್ಟಿಸಿ ಆ್ಯಪ್ ಆಧಾರಿತ ಕ್ಯಾಬ್ ಕಂಪನಿಗಳಿಗೆ ವಂಚನೆ; ಪ್ರಕರಣ ಬಯಲಿಗೆಳೆದ ಸಿಸಿಬಿ
ಇದನ್ನೂ ಓದಿ: ಪ್ರಿಯಕರನ ಜೊತೆ ಸೇರಿ ತಂದೆ ಕೊಂದ ಮಗಳು, ತಾಯಿ: ವೆಬ್ ಸಿರೀಸ್ ನೋಡಿ ಶವ ವಿಲೇವಾರಿ ಮಾಡಿದವರು ಅಂದರ್