ಜುನಾಗಢ್(ಗುಜರಾತ್): ಜಿಲ್ಲೆಯ ಮಾನವದರ್ನಲ್ಲಿ ಬೀದಿ ನಾಯಿಗಳ ದಾಳಿಗೆ ಬಾಲಕನೊಬ್ಬ ಬಲಿಯಾಗಿದ್ದಾನೆ. ದಾಹೋದ್‌ನ ಬುಡಕಟ್ಟು ಕೃಷಿ ಕಾರ್ಮಿಕನ ಎರಡು ವರ್ಷದ ಮಗನನ್ನು ಸೋಮವಾರ ಸಂಜೆ ನಾಯಿಗಳು ಕಚ್ಚಿವೆ. ತಕ್ಷಣ ಬಾಲಕನನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮಗು ಮೃತಪಟ್ಟಿದೆ.
ಜುನಾಗಢ ಜಿಲ್ಲೆಗೆ ದಾಹೋದ್‌ನಿಂದ ಹೆಚ್ಚಿನ ಸಂಖ್ಯೆಯ ಬುಡಕಟ್ಟು ಕೃಷಿ ಕಾರ್ಮಿಕರು ಬರುತ್ತಾರೆ. ಅದರಲ್ಲಿ ಒಬ್ಬರಾದ ಜಗದೀಶ್ ರಥ್ವಾ ಕುಟುಂಬ ಸಮೇತ ಕೃಷಿ ಕೂಲಿಗಾಗಿ ಮಾನವದಾರ್ ಪ್ರದೇಶಕ್ಕೆ ಬಂದಿದ್ದರು. ಸೋಮವಾರ ಸಂಜೆ ಜಗದೀಶ್ ಮತ್ತು ಅವರ ಜೊತೆಯಲ್ಲಿದ್ದ ಇತರ ಕುಟುಂಬಸ್ಥರು ಹೊಲದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಜಮೀನಿನಲ್ಲಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಶೆಲ್ಟರ್‌ನಲ್ಲಿ ಮಗು ಮಲಗಿತ್ತು. ಈ ವೇಳೆ ನಾಯಿಗಳು ಮಗುವಿನ ಮೇಲೆ ದಾಳಿ ನಡೆಸಿವೆ.
ಇದನ್ನೂ ಓದಿ: ಆಧಾರ್ ಕಾರ್ಡ್ ಪರಿಶೀಲಿಸಿದಾಗ ಬಯಲಿಗೆ ಬಿತ್ತು ಪ್ರಿಯಕರನ ಬಣ್ಣ: ರಸ್ತೆಯಲ್ಲೇ ಹಿಡಿದು ಥಳಿಸಿದ ಯುವತಿ
ಒಂದಕ್ಕಿಂತ ಹೆಚ್ಚು ನಾಯಿಗಳು ಬಾಲಕನ ಮೇಲೆ ದಾಳಿ ಮಾಡಿ ಕೊಂದಿವೆ. ಕುಟುಂಬಸ್ಥರು ಆತನನ್ನು ರಕ್ಷಿಸಲು ಧಾವಿಸಿದ್ದಾರೆ. ಆದರೆ ಅವರು ಬರಲು ತಡವಾದ ಕಾರಣ ಮಗು ತೀವ್ರವಾಗಿ ಗಾಯಗೊಂಡಿತ್ತು. ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದರು, ಮಗು ಸಾವನ್ನಪ್ಪಿದೆ.