ETV Bharat / bharat

Strawberry Moon: ಹುಣ್ಣಿಮೆ ದಿನ ಬಾನಂಗಳದಲ್ಲಿ ಗುಲಾಬಿ ಚಂದ್ರನ ಬೆಳಕು - ಸ್ಟ್ರಾಬೆರಿ ಮೂನ್

ಸೂಪರ್ ಮೂನ್, ನೀಲಿ ಚಂದಿರ ಹಾಗೂ ರಕ್ತ ಚಂದಿರ.. ಸೇರಿದಂತೆ ಹಲವು ರೀತಿಯಲ್ಲಿ ಚಂದಮಾಮ ಗೋಚಿಸುವುದರ ಹಿಂದೆ ನಾನಾ ವೈಜ್ಞಾನಿಕ ಕಾರಣಗಳಿವೆ. ಜೂನ್​ 24 ರಂದು ಗೋಚರಿಸಿದ ಸೂಪರ್​ಮೂನ್​ಗೆ ಸ್ಟ್ರಾಬೆರಿ ಮೂನ್​ ಎಂಬ ಹೆಸರು ಬರಲು ವಿಶೇಷ ಕಾರಣವಿದೆ.

Strawberry Moon 2021
ಸ್ಟ್ರಾಬೆರಿ ಮೂನ್ 2021
author img

By

Published : Jun 25, 2021, 12:58 PM IST

Updated : Jun 25, 2021, 1:07 PM IST

ನವದೆಹಲಿ: ನೀಲಿ ಬಾನಿನಲ್ಲಿ ನಡೆಯುವ ಪ್ರತಿಯೊಂದು ವಿಸ್ಮಯಗಳು ಎಂಥವರಲ್ಲೂ ಬೆರಗು ಹುಟ್ಟಿಸುತ್ತವೆ. ಪೂರ್ಣ ಚಂದಿರ ಗುರುವಾರ ಬಾನಂಗಳದಲ್ಲಿ ಸ್ಟ್ರಾಬೆರಿ ಬಣ್ಣದಲ್ಲಿ ಗೋಚರಿಸಿದ್ದಾನೆ.

  • This Thursday, the last supermoon of the year will have a sweet ending – it’s a Strawberry Moon! It's coined ‘Strawberry Moon’ because it signaled a time to gather the harvest of strawberries and other fruits. 🍓Get the details: https://t.co/6yaRFexegx pic.twitter.com/AuFO4UzY1b

    — NASA (@NASA) June 23, 2021 " class="align-text-top noRightClick twitterSection" data=" ">

ಆಕಾಶದಲ್ಲಿ ನಡೆಯುವ ವಿಸ್ಮಯದ ವಿದ್ಯಮಾನಗಳು ಎಲ್ಲರನ್ನು ಬೆರಗುಗೊಳಿಸುವಂತೆ ಮಾಡುತ್ತದೆ. ಸೂಪರ್ ಮೂನ್, ನೀಲಿ ಚಂದಿರ ಹಾಗೂ ರಕ್ತ ಚಂದ್ರ ಸೇರಿದಂತೆ ಹಲವು ರೀತಿಯಲ್ಲಿ ಚಂದಿರ ಗೋಚಿಸುವುದರ ಹಿಂದೆ ನಾನಾ ವೈಜ್ಞಾನಿಕ ಕಾರಣಗಳಿವೆ. ಕೆಲವೊಮ್ಮೆ ಘಟಿಸುವ ಚಂದ್ರ ಗ್ರಹಣವನ್ನು ರಕ್ತ ಚಂದ್ರ ಎಂದೂ ಕರೆಯಲಾಗುತ್ತದೆ. ಅದೇ ರೀತಿ ಈ ನಿನ್ನೆಯ ದಿನ ಚಂದ್ರ ಸ್ಟ್ರಾಬೆರಿ ಬಣ್ಣದಲ್ಲಿ ಕಾಣಿಸಿದ ಕಾರಣ ಸ್ಟ್ರಾಬೆರಿ ಮೂನ್ ಎಂದು ಕರೆಯಲಾಗಿದೆ.

  • Many cultures name full Moons and while the names differ, we can all agree that June's full Moon is a sweet sight to behold. Whether you call it honey, strawberry, mead, or rose, enjoy the view this evening.🍯🍓🍺🌹

    More about Moon phases: https://t.co/zZOl6fVCUo pic.twitter.com/RhanHT3kt8

    — NASA Moon (@NASAMoon) June 24, 2021 " class="align-text-top noRightClick twitterSection" data=" ">

ಒಂದೊಂದು ದೇಶದಲ್ಲೂ ಒಂದೊಂದು ರೀತಿಯ ಹೆಸರಿನಿಂದ ಕರೆಯಲಾಗುತ್ತದೆ. ಯುರೋಪ್​ನಲ್ಲಿ ರೋಸ್​ ಮೂನ್, ಉತ್ತರ ಅಮೆರಿಕದಲ್ಲಿ ಸ್ಟ್ರಾಬೆರಿ ಮೂನ್​, ಉತ್ತರ ಗೋಳಾರ್ಧದಲ್ಲಿ ಹಾಟ್​ ಮೂನ್ ಎಂದು ಹೆಸರಿಸಲಾಗಿದೆ.

ಜೂನ್​ 24 ರಂದು ಗೋಚರಿಸಿದ ಸೂಪರ್​ಮೂನ್​ಗೆ ಸ್ಟ್ರಾಬೆರಿ ಮೂನ್​ ಎಂಬ ಹೆಸರು ಬರಲು ವಿಶೇಷ ಕಾರಣವಿದೆ. ಅಮೆರಿಕದ ಉತ್ತರ ಭಾಗದಲ್ಲಿ ಜೂನ್​ ತಿಂಗಳ ಅವಧಿ ಸ್ಟ್ರಾಬೆರಿ ಹಣ್ಣು ಬೆಳೆಯುವ ಸಮಯ ಇದಾಗಿದೆ. ಈ ಕಾರಣಕ್ಕಾಗಿ ಇದನ್ನು ಸ್ಟ್ರಾಬೆರಿ ಮೂನ್ ಎಂದು ಕರೆಯಲಾಗುತ್ತದೆ.

ಮೊದಲಿಗೆ ಕಿತ್ತಳೆ ಮಂಡಲದಂತೆ ಕಂಡು ಬರುವ ಚಂದ್ರ ಬಳಿಕ ತಿಳಿ ಹಳದಿ ಬಣ್ಣಕ್ಕೆ ತಿರುಗುತ್ತಾನೆ. ಆಕಾಶದಲ್ಲಿ ಚಂದ್ರನು ಪ್ರಕಾಶಮಾನವಾಗಿ ದೊಡ್ಡದಾಗಿ ಕಾಣಿಸುತ್ತದೆ. ಅಬ್ಲೂಮಿಂಗ್ ಮೂನ್, ಗ್ರೀನ್ ಕಾರ್ನ್​ ಮೂನ್, ಆನರ್ ಮೂನ್, ಬರ್ತ್​ ಮೂನ್, ಎಗ್​ ಲೇಯಿಂಗ್ ಮೂನ್, ಹ್ಯಾಚಿಂಗ್ ಮೂನ್​, ಹನಿ ಮೂನ್, ಮೀಡ್ ಮೂನ್​ ಎಂಬ ಹೆಸರಿನಿಂದ ಕರೆಯಲಾಗುತ್ತದೆ.

Last Updated : Jun 25, 2021, 1:07 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.