ಒಡಿಶಾ: ಯಾಸ್ ಚಂಡಮಾರುತ 26 ರ ಮಧ್ಯಾಹ್ನ ಒಡಿಶಾದ ಬಾಲೇಶ್ವರದಲ್ಲಿ ಬಾರಿ ಪೆಟ್ಟು ಕೊಡುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಯಾಸ್ ಚಂಡಮಾರುತದ ಅಬ್ಬರಕ್ಕೆ ಸಿಲುಕುವ ಪ್ರದೇಶಗಳಿಗೆ ಮಾನವ ಸಂಪನ್ಮೂಲ, ವಸ್ತು ಮತ್ತು ಜಾರಿ ವ್ಯವಸ್ಥೆಗಳನ್ನು ನಿರ್ವಹಿಸಲು ಸಂಬಂಧಪಟ್ಟ ಅಧಿಕಾರಿಗಳ ರಜೆ ರದ್ದುಗೊಳಿಸಲಾಗಿದೆ. ಅಪಾಯದ ಸ್ಥಳದಲ್ಲಿರುವ ಜನರನ್ನು ಸ್ಥಳಾಂತರಿಸಲು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಸರ್ಕಾರ ಮೂಲಗಳು ತಿಳಿಸಿವೆ.
ಆಹಾರ, ಮಾಸ್ಕ್ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ಬಾಲಾಸೋರ್, ಭದ್ರಕ್, ಕೇಂದ್ರಪಾರಾ, ಜಗತ್ಸಿಂಗ್‌ಪುರ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಜಾಜ್‌ಪುರ ಮತ್ತು ಕೆಂಡುಜಾರ್ ಜಿಲ್ಲೆಗಳಲ್ಲಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯುವಂತೆ ಕೇಳಿಕೊಳ್ಳಲಾಗಿದೆ. ಕಟಕ್ ಮತ್ತು ಭುವನೇಶ್ವರದಲ್ಲಿನ ಪುರಸಭೆಗಳನ್ನು ಸ್ಥಳಾಂತರಿಸಲು ತಿಳಿಸಲಾಗಿದೆ. 22 ಎನ್‌ಡಿಆರ್‌ಎಫ್ ತಂಡಗಳು, 50 ಕ್ಕೂ ಹೆಚ್ಚು ಒಡ್ರಾಫ್, 150 ಅಗ್ನಿಶಾಮಕ ತಂಡಗಳಿವೆ.ಹೆಚ್ಚುವರಿ 30 ಎನ್‌ಡಿಆರ್‌ಎಫ್ ತಂಡಗಳು ಸಹ ರಾಜ್ಯಕ್ಕೆ ತೆರಳಿವೆ.