ನವದೆಹಲಿ: ದಲಿತರು, ರೈತರು, ಬಡವರ ಧ್ವನಿಯು ದೇಶದಲ್ಲಿ ಬಿರುಗಾಳಿಯನ್ನು ಸೃಷ್ಟಿಸುತ್ತದೆ ಎಂದು ಹೇಳಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇತ್ತೀಚೆಗೆ ದಲಿತ ಹುಡುಗಿಯರ ಮೇಲೆ ನಡೆದ ಘೋರ ದೌರ್ಜನ್ಯಗಳ ವಿಷಯದ ಕುರಿತು ಕಾಂಗ್ರೆಸ್‌ನ ಎಸ್‌ಸಿ ಇಲಾಖೆ ಮತ್ತು ಅದರ ದೆಹಲಿ ಘಟಕವು ಆಯೋಜಿಸಿದ್ದ "ಹಳ್ಳ ಬೋಲ್" ಪ್ರತಿಭಟನೆಯ ಸಂದರ್ಭದಲ್ಲಿ ಈ ಟೀಕೆ ಮಾಡಲಾಗಿದೆ.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಗಾಂಧಿ, ದೇಶದಲ್ಲಿ ಬಡವರು, ದಲಿತರು, ರೈತರು ಮತ್ತು ಕಾರ್ಮಿಕರ ಧ್ವನಿ ಹೆಚ್ಚಾಗುತ್ತಿದೆ. ಇದು ಕ್ರಮೇಣ ವೇಗ ಪಡೆಯುತ್ತದೆ ಮತ್ತು ನರೇಂದ್ರ ಮೋದಿಯವರನ್ನು ಪ್ರಧಾನಿ ನಿವಾಸದಿಂದ ಹೊರಹಾಕುವ ಚಂಡಮಾರುತವಾಗಿ ಬದಲಾಗುತ್ತದೆ ಎಂದು ಹರಿಹಾಯ್ದರು.
ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧಿ ಹೇಳಿದ್ದನ್ನು ಭಾರತದ ಜನರಿಗೆ ನೆನಪಿಸುವುದು ನಮ್ಮ ಕೆಲಸ. ಯಾರಿಗೂ ಹೆದರಬೇಡಿ. ಹೇಡಿಗಳು ಮತ್ತು ಪೊಳ್ಳು ಜನರು ಓಡಿಹೋಗುತ್ತಾರೆ ಎಂದು ಅವರು ಹೆಳಿದ್ದಾರೆ ಎಂದು ಗಣ್ಯರ ಹೇಳಿಕೆ ಉಲ್ಲೇಖಿಸಿದರು.