ETV Bharat / bharat

ಯುವತಿಯ ಮದುವೆ ನಿಲ್ಲಿಸಲು ಅಪರಿಚಿತ ಪ್ರೇಮಿಯಿಂದ ಪೋಸ್ಟರ್​ ಹೋರಾಟ: ಪೊಲೀಸರಿಗೆ ತಲೆನೋವಾದ ಪ್ರಕರಣ - ಆಕೆಯ ಅಪರಿಚಿತ ಪ್ರಿಯತಮೆ

ಉತ್ತರಪ್ರದೇಶದ ಕಾನ್ಪುರದಲ್ಲಿ ಹುಡುಗಿಯ ಮದುವೆ ನಿಲ್ಲಿಸಲು, ಆರೋಪಿತ ಪ್ರೇಮಿ ಇಡೀ ಗ್ರಾಮದಲ್ಲಿ ಪೋಸ್ಟರ್‌ಗಳನ್ನು ಅಂಟಿಸಿದ್ದಾನೆ. 'ಜ್ಯೋತಿ ಮೌರ್ಯ ಮತ್ತು ಅಲೋಕ್ ಮೌರ್ಯ ಅವರಂತೆ ಮತ್ತೊಂದು ಘಟನೆ' ಎಂದು ಪೋಸ್ಟರ್‌ನಲ್ಲಿ ಆರೋಪಿ ಪ್ರೇಮಿ ಉಲ್ಲೇಖಿಸಿದ್ದಾನೆ. ಪ್ರಕರಣದಲ್ಲಿ ಯುವತಿಯ ಚಿಕ್ಕಪ್ಪ ಸಹ ಗಂಭೀರ ಆರೋಪ ಎದುರಿಸುತ್ತಿದ್ದಾರೆ.

Jyoti Maurya and Alok Maurya  Jyoti Maurya and Alok Maurya story in kanpur  Lover put up posters to stop marriage  Lover put up posters to stop girlfriend marriage  Sajeti police station  ಯುವತಿಯ ಮದುವೆ ನಿಲ್ಲಿಸಲು ಅಪರಿಚಿತ ಪ್ರೇಮಿ  ಪೊಲೀಸರಿಗೆ ತಲೆನೋವಾದ ಪ್ರಕರಣ  ಜ್ಯೋತಿ ಮೌರ್ಯ ಮತ್ತು ಅಲೋಕ್ ಮೌರ್ಯ  ಯುವತಿಯ ಚಿಕ್ಕಪ್ಪ ಸಹ ಗಂಭೀರ ಆರೋಪ  ಮದುವೆ ನಿಲ್ಲಿಸುವಂತೆ ಬೆದರಿಕೆ  ಆಕೆಯ ಅಪರಿಚಿತ ಪ್ರಿಯತಮೆ  ಚಿಕ್ಕಪ್ಪನ ಮೇಲೆ ಆರೋಪ
ಯುವತಿಯ ಮದುವೆ ನಿಲ್ಲಿಸಲು ಅಪರಿಚಿತ ಪ್ರೇಮಿ
author img

By

Published : Jul 29, 2023, 3:59 PM IST

ಕಾನ್ಪುರ, ಉತ್ತರಪ್ರದೇಶ: ಜಿಲ್ಲೆಯ ಸಾಜೆಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹುಡುಗಿ ಮದುವೆಯನ್ನು ನಿಲ್ಲಿಸುವ ಸಲುವಾಗಿ ಆಕೆಯ ಅಪರಿಚಿತ ಪ್ರಿಯತಮೆ ಇಡೀ ಗ್ರಾಮದಲ್ಲಿ 'ಜ್ಯೋತಿ ಮೌರ್ಯ ಮತ್ತು ಅಲೋಕ್ ಮೌರ್ಯ ಅವರಂತಹ ಮತ್ತೊಂದು ಘಟನೆ' ಎಂಬ ಶೀರ್ಷಿಕೆಯ ಪೋಸ್ಟರ್‌ಗಳನ್ನು ಅಂಟಿಸಿದ್ದಾನೆ.

ಜೂನ್ ತಿಂಗಳಿನಲ್ಲಿ ಬಾಲಕಿಯ ಭಾವಿ ಪತಿಗೆ ವಾಟ್ಸ್​ಆ್ಯಪ್​ ನಲ್ಲಿ ಹಲವು ಬೆದರಿಕೆ ಸಂದೇಶಗಳು ಬಂದಿದ್ದು, ಬಳಿಕ ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಪೊಲೀಸರು ಅಪರಿಚಿತ ಯುವಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೋಸ್ಟರ್‌ನಲ್ಲಿ ಬರೆದ ಕಥೆಯಲ್ಲಿ ಅಪರಿಚಿತ ಯುವಕ ತನ್ನನ್ನು ತನ್ನ ಪ್ರೇಮಿ ಎಂದು ಬಣ್ಣಿಸಿದ್ದಾನೆ.

ಮದುವೆ ನಿಲ್ಲಿಸುವಂತೆ ಬೆದರಿಕೆ: ಸಾಜೆಟಿ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದ ಮಹಿಳೆಯೊಬ್ಬರು ಮೇ ತಿಂಗಳಲ್ಲಿ ಮಗಳ ಬೇಬಿ ಶವರ್ ಹಾಗೂ ನಿಶ್ಚಿತಾರ್ಥ ಏರ್ಪಡಿಸಿದ್ದರು. ಇದಾದ ಕೆಲ ದಿನಗಳ ನಂತರ ಯಾರೋ ಮಗಳ ಭಾವಿ ಪತಿಗೆ ಬೆದರಿಕೆ ಸಂದೇಶ ಕಳುಹಿಸಿದ್ದಾರೆ. ಅಷ್ಟೇ ಅಲ್ಲ ಆಗಲಿರುವ ಅಳಿಯನನ್ನು ಕೊಲ್ಲುವುದಾಗಿಯೂ ಬೆದರಿಕೆ ಸಹ ಹಾಕಿದ್ದಾರೆ. ಈಗ ಇಡೀ ಗ್ರಾಮದಲ್ಲಿ ಮದುವೆ ನಿಲ್ಲಿಸುವಂತೆ ಪೋಸ್ಟರ್ ಹಾಕಿದ್ದಾರೆ. ಈ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಿದ ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಸಾಜೆಟಿ ಠಾಣೆ ಪ್ರಭಾರಿ ರಾಜೇಶ್ ಕುಮಾರ್ ತಿಳಿಸಿದ್ದಾರೆ.

ಚಿಕ್ಕಪ್ಪನ ಮೇಲೆ ಆರೋಪ: ಮದುವೆ ನಿಶ್ಚಿಯವಾಗಿದ್ದ ಯುವತಿಗೆ ತಂದೆ ಇಲ್ಲ. ಇತ್ತಿಚೇಗೆ ಕಾನ್ಪುರ ದೇಹತ್ ನಿವಾಸಿಯಾದ ಅವರ ಚಿಕ್ಕಪ್ಪನ ಮನೆಯಲ್ಲಿ ಉಳಿಯಲು ತಾಯಿ ತನ್ನ ಮಗಳನ್ನು ಕಳುಹಿಸಿದ್ದರು. ಚಿಕ್ಕಪ್ಪನ ನಡೆ ಸರಿಯಿಲ್ಲ ಎಂಬ ಕಾರಣಕ್ಕೆ ಯುವತಿ ತನ್ನ ತಾಯಿಯ ಮನೆಗೆ ಮರಳಿದ್ದಾಳೆ.

ಇದಾದ ಕೆಲ ದಿನಗಳ ನಂತರ ಆಕೆಯ ಚಿಕ್ಕಪ್ಪ ಮಗಳಿಗೆ ಸಾಕಷ್ಟು ಹಿಂಸೆ ನೀಡಲಾರಂಭಿಸಿದ ಎನ್ನಲಾಗಿದೆ. ಫೋನ್ ಮತ್ತು ಮೆಸೇಜ್​​​ಗಳ ಮೂಲಕ ಬೆದರಿಕೆ ಹಾಕುತ್ತಿದ್ದರು. ಈ ಬಗ್ಗೆ ಹಲವು ಅಧಿಕಾರಿಗಳಿಗೆ ದೂರು ನೀಡಿರುವುದಾಗಿ ಯುವತಿ ಹೇಳಿದ್ದಾರೆ. ಪೊಲೀಸರು ಆರೋಪಿ ಚಿಕ್ಕಪ್ಪನ ವಿರುದ್ಧ ಜೂನ್ 28ರಂದು ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದರು.

‘ಜ್ಯೋತಿ ಮೌರ್ಯ ಮತ್ತು ಅಲೋಕ್ ಮೌರ್ಯ ಅವರಂತಹ ಮತ್ತೊಂದು ಘಟನೆ’: ಗಮನಾರ್ಹವಾಗಿ, ಗ್ರಾಮದಲ್ಲಿ ಅಂಟಿಸಲಾದ ಪೋಸ್ಟರ್‌ನ ಶೀರ್ಷಿಕೆ 'ಜ್ಯೋತಿ ಮೌರ್ಯ ಮತ್ತು ಅಲೋಕ್ ಮೌರ್ಯ ರೀತಿಯ ಘಟನೆ' ಎಂದು ಬಣ್ಣಿಸಲಾಗಿದೆ. ಪೋಸ್ಟರ್ ಅಂಟಿಸಿರುವ ವ್ಯಕ್ತಿ ತನ್ನನ್ನು ತಾನು ಹುಡುಗಿಯ ಪ್ರೇಮಿ ಎಂದು ಬಣ್ಣಿಸಿಕೊಂಡಿದ್ದಾನೆ.

ಕಾನ್ಪರ್ ಗ್ರಾಮಾಂತರದಲ್ಲಿ ಯುವತಿಗೆ ತನ್ನ ಚಿಕ್ಕಪ್ಪನ ಜೊತೆ ವಾಸವಾಗಿರುವುದರ ಬಗ್ಗೆ ಪೋಸ್ಟರ್​ನಲ್ಲಿ ಉಲ್ಲೇಖವಿದೆ. ಹುಡುಗಿಯ ಚಿಕ್ಕಪ್ಪನ ಪರ ವಹಿಸಿ, ಪ್ರಿಯಕರನು ‘ಹುಡುಗಿಗೆ ತುಂಬಾ ಕಷ್ಟಪಟ್ಟು ಕಲಿಸಿದ್ದಾರೆ’ ಎಂದು ಪೋಸ್ಟರ್‌ನಲ್ಲಿ ಬರೆದಿದ್ದಾರೆ. ಈಗ ಆಕೆಯ ಕುಟುಂಬಸ್ಥರು ಬಲವಂತವಾಗಿ ಬೇರೆಡೆ ಮದುವೆ ಮಾಡಿಸುತ್ತಿದ್ದಾರೆ. ಕಾನ್ಪುರ ದೇಹತ್‌ನಲ್ಲಿ ಯುವತಿ ವ್ಯಾಸಂಗ ಮಾಡುತ್ತಿದ್ದ ಸಮಯದಲ್ಲಿ ನಾವಿಬ್ಬರು ಪ್ರೀತಿಸುತ್ತಿದ್ದೆವು. ಈಗ ಆಕೆಯ ಕುಟುಂಬಸ್ಥರು ನಮ್ಮಿಬ್ಬರನ್ನು ಸೇರಲು ಬಿಡುತ್ತಿಲ್ಲ ಎಂದು ಅಪರಿಚಿತ ಪ್ರೇಮಿ ಆರೋಪಿಸಿದ್ದಾನೆ. ಆದರೆ, ಯುವತಿಯ ಚಿಕ್ಕಪ್ಪ ಪೋಸ್ಟರ್ ತಯಾರಿಸಿ ಯಾರದೋ ಹೆಸರಿನಲ್ಲಿ ಅಂಟಿಸಿದ್ದಾರೆ ಎನ್ನಲಾಗುತ್ತಿದೆ.

ಸದ್ಯ ಈ ಪ್ರಕರಣ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದು, ಪೊಲೀಸರು ತನಿಖೆ ಕೈಗೊಂಡು ಆರೋಪಿ ಪತ್ತೆಗೆ ಜಾಲ ಬೀಸಿದ್ದಾರೆ.

ಓದಿ: ಮಗು ನಾಪತ್ತೆ ಪ್ರಕರಣ: ಕಟ್ಟಿದ ಗೋಣಿಚೀಲದಲ್ಲಿ ಶವ ಪತ್ತೆ, ಆರೋಪಿ ಹೇಳಿದ್ದು ಹೀಗೆ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.