ETV Bharat / bharat

ಆಗಂತುಕರಿಂದ ಗರೀಬ್ ರಥ ರೈಲಿನ ಮೇಲೆ ಕಲ್ಲು ತೂರಾಟ.. ಬಾಲಕಿ, ಮಹಿಳೆಗೆ ಗಾಯ - ಗರೀಬ್​ ರಥದ ಮೇಲೆ ಕಲ್ಲು ತೂರಾಟ

ರಾಂಚಿಯಿಂದ ನವದೆಹಲಿಗೆ ತೆರಳುತ್ತಿದ್ದ ಗರೀಬ್ ರಥ ರೈಲಿಗೆ ಆಗಂತುಕರು ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಬಾಲಕಿ, ಮಹಿಳೆ ಗಾಯಗೊಂಡಿದ್ದಾರೆ.

stone-pelting-on-garib
ಆಗಂತುಕರಿಂದ ಗರೀಬ್ ರಥ ರೈಲಿನ ಮೇಲೆ ಕಲ್ಲು ತೂರಾಟ
author img

By

Published : May 24, 2022, 11:07 PM IST

ಲತೇಹಾರ್: ರಾಂಚಿಯಿಂದ ನವದೆಹಲಿಗೆ ತೆರಳುತ್ತಿದ್ದ ಗರೀಬ್ ರಥ ರೈಲಿಗೆ ಮಂಗಳವಾರ ತಡರಾತ್ರಿ ಲತೇಹಾರ್ ಬಳಿ ಕಲ್ಲು ತೂರಾಟ ನಡೆದಿದೆ. ಕಲ್ಲು ತೂರಾಟದಿಂದಾಗಿ ರೈಲಿನ ಬೋಗಿ ಸಂಖ್ಯೆ 12ರ ಗಾಜು ಒಡೆದಿದೆ. ಘಟನೆಯಲ್ಲಿ 8 ವರ್ಷದ ಬಾಲಕಿ ಮತ್ತು ಆಕೆಯ ತಾಯಿ ಗಾಯಗೊಂಡಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಆರ್‌ಪಿಎಫ್ ತಂಡ ಸ್ಥಳಕ್ಕೆ ಆಗಮಿಸಿ ಕ್ರಮ ಕೈಗೊಂಡಿದೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಘಟನೆ ಲತೇಹಾರ್ ಮತ್ತು ಬರ್ವಾಡಿ ರೈಲು ನಿಲ್ದಾಣದ ನಡುವೆ ನಡೆದಿದೆ. ಕಲ್ಲು ತೂರಾಟದ ಬಳಿಕ ರೈಲಿನಲ್ಲಿದ್ದ ಪ್ರಯಾಣಿಕರಲ್ಲಿ ಆತಂಕಗೊಂಡಿದ್ದು, ಆಗಂತುಕರ ವಿರುದ್ದ ಆಕ್ರೋಶ ವ್ಯಕ್ತವಾಗಿದೆ.

ಘಟನೆ ಕುರಿತು ಮಾಹಿತಿ ಪಡೆದ ರೈಲ್ವೇ ಪೊಲೀಸರು ಕೋಚ್‌ಗೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಗಾಯಗೊಂಡಿರುವ ಮಹಿಳೆ ಹಾಗೂ ಬಾಲಕಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಓದಿ: ನೀಮಚ್​ ಹಲ್ಲೆ ಪ್ರಕರಣ: ವಿಡಿಯೋ ವೈರಲ್​ ಮಾಡಿದ ವಾಟ್ಸ್​​​ಆ್ಯಪ್​ ಗ್ರೂಪ್​ ವಿರುದ್ಧ ಎಫ್​ಐಆರ್, 6 ಜನರ ಬಂಧನ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.