ETV Bharat / bharat

ಹಣಕಾಸಿನ ಸಂಕಷ್ಟದ ಸುಳಿಯಲ್ಲಿ ಸಿಲುಕಿಕೊಂಡಿರುವ ರಾಜ್ಯಗಳು - 15th finance comission

15ನೇ ಹಣಕಾಸು ಆಯೋಗ, ಮುಂದಿನ ಐದು ವರ್ಷಗಳಲ್ಲಿ ರಾಜ್ಯಗಳು ದೇಶದ ಏಕೀಕೃತ ನಿಧಿಯಿಂದ 52.41 ಲಕ್ಷ ಕೋಟಿ ರೂಪಾಯಿ ಪಾಲು ಪಡೆಯಲಿವೆ ಎಂದು ಹೇಳುತ್ತಿದೆ. ಆದರೆ, ಇದಕ್ಕೆ ತದ್ವಿರುದ್ಧವಾಗಿ, ಕೇಂದ್ರ ಈ ನಿಧಿಯಿಂದ 1.8 ಲಕ್ಷ ಕೋಟಿ ರೂಪಾಯಿಗಳನ್ನು ರಾಜ್ಯಗಳಿಗೆ ನೀಡಲು ಪರಿಶೀಲಿಸುವುದಾಗಿ ಹೇಳುತ್ತಿದೆ. ಅದೂ ಕೂಡ ಈ ಹಂಚಿಕೆ ಬಗ್ಗೆ ಎಚ್ಚರಿಕೆಯಿಂದ ಪರಿಶೀಲಿಸಿದ ಬಳಿಕವಷ್ಟೇ ಒಂದು ನಿರ್ಧಾರ ತೆಗೆದುಕೊಳ್ಳುವುದಾಗಿ ಸರ್ಕಾರ ಹೇಳುತ್ತಿದೆ. ಇದು, ನಮ್ಮ ಒಕ್ಕೂಟ ವ್ಯವಸ್ಥೆಯ ಭಾವನೆಗೆ ತೀವ್ರತರವಾದ ಹೊಡೆತವಾಗಿದೆ. ಒಕ್ಕೂಟ ವ್ಯವಸ್ಥೆಯ ಬಗೆಗಿನ ಉತ್ಸಾಹಕ್ಕೆ ಇದು ವಿರುದ್ಧವಾಗಿದೆ.

States remain in financial shackles
15ನೇ ಹಣಕಾಸು ಆಯೋಗದ ವರದಿ ಸಲ್ಲಿಕೆ
author img

By

Published : Feb 5, 2021, 12:33 PM IST

ಏಳು ದಶಕಗಳನ್ನು ಈಗ ಪೂರ್ಣಗೊಳಿಸಿರುವ ಕೇಂದ್ರ ಯೋಜನಾ ಆಯೋಗ, ಹಿಂದೊಮ್ಮೆ ನಮ್ಮ ದೇಶದಲ್ಲಿ ಲಭ್ಯವಿರುವ ಸಂಪನ್ಮೂಲಗಳ ವಿತರಣೆ ಸಂಬಂಧ ಅದ್ಭುತವಾದ ವಿವರಣೆ ನೀಡಿತ್ತು. ನಮ್ಮ ಸಂವಿಧಾನ ಕೇಂದ್ರ ಮತ್ತು ರಾಜ್ಯಗಳ ನಡುವೆ, ತರ್ಕಬದ್ಧವಾದ ಸಂಪನ್ಮೂಲ ಹಂಚಿಕೆಯನ್ನು ಖಾತರಿ ಪಡಿಸುತ್ತದೆ ಎಂದು ಆಯೋಗ ಅಭಿಪ್ರಾಯಪಟ್ಟಿತ್ತು. ಈ ಅಭಿಪ್ರಾಯದ ಹಿನ್ನೆಲೆಯಲ್ಲಿ, ನಾವು 15ನೇ ಫೈನಾನ್ಸ್‌ ಕಮಿಷನ್‌ (ಹಣಕಾಸು ಆಯೋಗ) ಈ ಮಾತನ್ನು ಉಳಿಸಿಕೊಂಡಿದೆಯೇ ಎಂದು ನೋಡಬೇಕಿದೆ. ಏಕೆಂದರೆ, ಕೇಂದ್ರ ಯೋಜನ ಆಯೋಗದ ರದ್ದು, ಸರಕು ಮತ್ತು ಸೇವಾ ತೆರಿಗೆ ಜಾರಿ (ಜಿಎಸ್​‌ಟಿ) ಹಾಗೂ ಜಾಗತಿಕ ಆರ್ಥಿಕತೆಯನ್ನು ತಲ್ಲಣಗೊಳಿಸಿರುವ ಕೋವಿಡ್‌ ಹಾವಳಿಯಿಂದ ಕುಸಿದು ಹೋಗಿರುವ ಆರ್ಥಿಕ ವ್ಯವಸ್ಥೆಗಳ ನಡುವೆಯೆ, 15ನೇ ಹಣಕಾಸು ಆಯೋಗ ಇತ್ತೀಚೆಗೆ ತನ್ನ ವರದಿಯನ್ನು ಸಲ್ಲಿಸಿದೆ. ಈ ಬಿಕ್ಕಟ್ಟುಗಳ ನಡುವೆ ಆಯೋಗ ಸಲ್ಲಿಸಿರುವ ವರದಿ ಎಲ್ಲರ ಕುತೂಹಲ ಕೆರಳಿಸಿದೆ.

ಇತ್ತೀಚೆಗೆ ತಾನು ಕೇಂದ್ರಕ್ಕೆ ಸಲ್ಲಿಸಿದ ವರದಿಯಲ್ಲಿ, 15ನೇ ಹಣಕಾಸು ಆಯೋಗವು, ತನ್ನನ್ನು ಕೋವಿಡ್‌ -19 ಅವಧಿಯ ಹಣಕಾಸು ಆಯೋಗ ಎಂದು ಬಣ್ಣಿಸಿಕೊಂಡಿದೆ. ಅದು ಕೇಂದ್ರದ ನರೇಂದ್ರ ಮೋದಿ ಸರಕಾರ ನೀಡಿದ ಉಲ್ಲೇಖಗಳ ಒಳಗೇ ತನ್ನ ವರದಿಯನ್ನು ಸಿದ್ಧಪಡಿಸಿದೆ. ತನ್ನ ವರದಿ ಸಿದ್ಧಪಡಿಸುವಾಗ, ಹಣಕಾಸು ಆಯೋಗವು 2011 ರ ಜನಗಣತಿಯನ್ನು ಆಧಾರವಾಗಿ ತೆಗೆದುಕೊಂಡಿದೆ. ಪರಿಣಾಮ ತಮಿಳುನಾಡು ಹೊರತಾದ ದಕ್ಷಿಣ ಭಾರತದ ರಾಜ್ಯಗಳು 16,640 ಕೋಟಿ ರೂ ನಷ್ಟ ಅನುಭವಿಸಿವೆ. ಆಯೋಗ ತನ್ನ ವರದಿ ತಯಾರಿಕೆ ಸಂದರ್ಭದಲ್ಲಿ ಅಳವಡಿಸಿಕೊಂಡ ತಪ್ಪು ಮಾಪಕದ ಪರಿಣಾಮ, 2021-2026ರ ಹೊತ್ತಿಗೆ ಈ ನಷ್ಟದ ಪ್ರಮಾಣ ಸುಮಾರು 94,000 ಕೋಟಿ ರೂಗಳಷ್ಟಾಗಲಿದೆ. ಇದು ರಾಜ್ಯಗಳ ಪಾಲಿಗೆ ದೊಡ್ಡ ಮೊತ್ತ. ಇದರ ಜೊತೆಗೆ, ಆಯೋಗದ ವರದಿಯ ಇನ್ನಷ್ಟು ಅಂಶಗಳು ರಾಜ್ಯಗಳ ಆರ್ಥಿಕ ಸಂಪನ್ಮೂಲವನ್ನು ಕುಗ್ಗಿಸಲಿವೆ.

ಈ ನಷ್ಟದೊಂದಿಗೆ ರಾಜ್ಯಗಳ ಸಂಕಷ್ಟ ಮುಗಿಯುತ್ತಿಲ್ಲ. ಇದಕ್ಕಿಂತ ಹಿಂದಿನ, 14ನೇ ಹಣಕಾಸು ಆಯೋಗ 42 ಪ್ರತಿಶತ ಸಂಪನ್ಮೂಲ ಪಾಲನ್ನು ರಾಜ್ಯಗಳಿಗೆ ಹಂಚಿಕೆ ಮಾಡಿತ್ತು. ಈ ಹಂಚಿಕೆ ಪ್ರಮಾಣವನ್ನು ಪರಿಶೀಲಿಸುವಂತೆ ಕೇಂದ್ರವು 15ನೇ ಆಯೋಗಕ್ಕೆ ಶಿಫಾರಸು ಮಾಡಿತ್ತು. ಈ ಶಿಫಾರಸಿಗೆ ಅನುಗುಣವಾಗಿ ಈಗ 15ನೇ ಆಯೋಗ ತನ್ನ ವರದಿಯಲ್ಲಿ ಈ‌ ಪ್ರಮಾಣವನ್ನು ಶೇ. 1ರಷ್ಟು ಕಡಿಮೆ ಮಾಡಿದೆ. ಈ ವರದಿ ಪ್ರಕಾರ, 41 ಪ್ರತಿಶತ ಸಂಪನ್ಮೂಲಗಳನ್ನು ರಾಜ್ಯಗಳಿಗೆ ವರ್ಗಾಯಿಸಲು ಶಿಫಾರಸು ಮಾಡಲಾಗಿದೆ. ಇನ್ನು ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್​ಗಳು ಶೇ1ರಷ್ಟು ಪಾಲು ಪಡೆಯಲಿವೆ. ಈ ಹಿಂದೆ, ಶೇ42ರಷ್ಟು ಪಾಲು ವರ್ಗಾವಣೆ ಮಾಡಲು ಶಿಫಾರಸು ಮಾಡಿದ ಸಂದರ್ಭದಲ್ಲೂ, ರಾಜ್ಯಗಳಿಗೆ ವಾಸ್ತವದಲ್ಲಿ ಸಿಕ್ಕಿದ್ದು ಶೇ 35ರಷ್ಟು ಮಾತ್ರ. ರಾಜ್ಯಗಳು ಸಂಪನ್ಮೂಲದ ಪಾಲಿನಲ್ಲಿ ಶೇ.50ರಷ್ಟನ್ನು ಕೇಳುತ್ತಿವೆ. ಆದರೆ ಅದು, ಕೇಂದ್ರದ ಕಿವಿಗಾಗಲಿ, ಆಯೋಗದ ಕಿವಿಗಾಗಲಿ ಬಿದ್ದಿಲ್ಲ.

ಈ ನಡುವೆ 15ನೇ ಹಣಕಾಸು ಆಯೋಗ, ಮುಂದಿನ ಐದು ವರ್ಷಗಳಲ್ಲಿ ರಾಜ್ಯಗಳು ದೇಶದ ಏಕೀಕೃತ ನಿಧಿಯಿಂದ 52.41 ಲಕ್ಷ ಕೋಟಿ ರೂಪಾಯಿ ಪಾಲು ಪಡೆಯಲಿವೆ ಎಂದು ಹೇಳುತ್ತಿದೆ. ಆದರೆ, ಇದಕ್ಕೆ ತದ್ವಿರುದ್ಧವಾಗಿ, ಕೇಂದ್ರ ಈ ನಿಧಿಯಿಂದ 1.8 ಲಕ್ಷ ಕೋಟಿ ರೂಪಾಯಿಗಳನ್ನು ರಾಜ್ಯಗಳಿಗೆ ನೀಡಲು ಪರಿಶೀಲಿಸುವುದಾಗಿ ಹೇಳುತ್ತಿದೆ. ಅದೂ ಕೂಡ ಈ ಹಂಚಿಕೆ ಬಗ್ಗೆ ಎಚ್ಚರಿಕೆಯಿಂದ ಪರಿಶೀಲಿಸಿದ ಬಳಿಕವಷ್ಟೇ ಒಂದು ನಿರ್ಧಾರ ತೆಗೆದುಕೊಳ್ಳುವುದಾಗಿ ಸರ್ಕಾರ ಹೇಳುತ್ತಿದೆ. ಇದು, ನಮ್ಮ ಒಕ್ಕೂಟ ವ್ಯವಸ್ಥೆಯ ಭಾವನೆಗೆ ತೀವ್ರತರವಾದ ಹೊಡೆತವಾಗಿದೆ. ಒಕ್ಕೂಟ ವ್ಯವಸ್ಥೆಯ ಬಗೆಗಿನ ಉತ್ಸಾಹಕ್ಕೆ ಇದು ವಿರುದ್ಧವಾಗಿದೆ.

ಈ ನಡುವೆ ನಾವು ನೆನಪಿಸಿಕೊಳ್ಳಬೇಕಿರುವುದು, 2015 ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡಿದ ಹೇಳಿಕೆಯನ್ನು. "ರಾಜ್ಯಗಳು ತಮ್ಮ ಅಭಿವೃದ್ಧಿಗೆ ಸಂಬಂಧಿಸಿದಂತೆ, ವಿನೂತನ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಲು ಅಗತ್ಯ ಅವಕಾಶ ನೀಡಬೇಕು. ಈ ವ್ಯವಸ್ಥೆಯನ್ನು ನಾವು ನಂಬುತ್ತೇವೆ. ಹೀಗೆ ಮಾಡುವಾಗ, ಅವುಗಳಿಗೆ ಹೆಚ್ಚಿನ ಆರ್ಥಿಕ ನೆರವು ಹಾಗೂ ಸ್ವಾಯತ್ತತೆಯನ್ನು ನೀಡಬೇಕಿದೆ. ಈ ಸಂದರ್ಭದಲ್ಲಿ ಹಣಕಾಸು ಖರ್ಚು ವೆಚ್ಚಗಳ ಬಗ್ಗೆ ಹೆಚ್ಚಿನ ನಿಗಾ, ವಿವೇಕ ಹಾಗೂ ಶಿಸ್ತುಗಳನ್ನು ನಾವು ಪಾಲಿಸಬೇಕಿದೆ. ಇದು ಸಾಧ್ಯವಾಗದಿದ್ದರೆ, ಸ್ಥಳೀಯ ಅಭಿವೃದ್ಧಿ ಸಾಧ್ಯವಿಲ್ಲ.ಹೀಗಾದಾಗ ಮಾತ್ರ ಸದ್ಯ ಅಭಿವೃದ್ಧಿಯ ಮುಖ್ಯವಾಹಿನಿಯಿಂದ ಹೊರಗಿರುವ, ಆದಿವಾಸಿಗಳನ್ನು, ಬಡವರನ್ನು, ನಶಿಸುವ ಅಂಚಿನಲ್ಲಿರುವ ಜನಾಂಗಗಳನ್ನು ಅಭಿವೃದ್ಧಿ ರೇಖೆಯತ್ತ ಕೊಂಡೊಯ್ಯಬಹುದು," ಎಂದು ಮೋದಿ ತಿಳಿಸಿದ್ದರು.

ಹಣಕಾಸಿನ ಖರ್ಚು ವೆಚ್ಚ, ಈ ಕುರಿತ ಕರ್ತವ್ಯ ಹಾಗೂ ಸಂಗ್ರಹ ಸಂಬಂಧ, ಕೇಂದ್ರ ಮತ್ತು ರಾಜ್ಯಗಳ ನಡುವೆ ಗಂಭೀರ ಅಸಮತೋಲನವಿದೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ.
ದೇಶದ ಅಭಿವೃದ್ಧಿಗೆ ಅಗತ್ಯವಾದ ಸಂಪನ್ಮೂಲಗಳನ್ನು ಸಂಗ್ರಹಿಸಲು, ಸಂವಿಧಾನವು ಕೇಂದ್ರಕ್ಕೆ ಅಧಿಕಾರ ನೀಡಿದೆ ಮತ್ತು ಅದರ ಖರ್ಚು ವೆಚ್ಚದ ಜವಾಬ್ದಾರಿಗಳು ರಾಜ್ಯಕ್ಕೆ ಸೇರಿದೆ ಎಂದು ಆಯೋಗ ತಿಳಿಸಿದೆ. ಸಂವಿಧಾನದ ಪ್ರಕಾರ, ಕೇಂದ್ರ ಸರಕಾರ ಶೇ.62.7 ಹಣಕಾಸು ಸಂಪನ್ಮೂಲಗಳನ್ನು ಹೊಂದಿದೆ. ಆದರೆ ಖರ್ಚುಗಳ ಪೈಕಿ ಅದಕ್ಕೆ ಶೇ.37.6 ಪಾಲು ಹೊಂದಿದೆ. ಇದಕ್ಕೆ ತದ್ವಿರುದ್ಧವಾಗಿ,ಶೇ. 37.6 ಆರ್ಥಿಕ ಸಂಪನ್ಮೂಲದ ಮೇಲೆ ಅಧಿಕಾರ ಹೊಂದಿರುವ ರಾಜ್ಯಗಳಿಗೆ ಶೇ. 62.4 ಖರ್ಚು ಮಾಡುವ ಜವಾಬ್ದಾರಿ ಇದೆ.

ಈ ಎಲ್ಲಾ ಸಂಗತಿಗಳ ಸ್ಪಷ್ಟ ಅರಿವಿದ್ದರೂ, ಕೇಂದ್ರ ಸರಕಾರ ಹಣಕಾಸು ಆಯೋಗಕ್ಕೆ ತನಗೆ ಇನ್ನಷ್ಟು ಹೆಚ್ಚಿನ ಸಂಪನ್ಮೂಲ ಸಂಗ್ರಹಣೆಗೆ ಒತ್ತಡ ಹೇರಿತ್ತು. ಭಾರತದ ಕನ್ಸಾಲಿಡೇಟೆಡ್ ಫಂಡ್‌ನಿಂದ ರಕ್ಷಣಾ ಮತ್ತು ಆಂತರಿಕ ಭದ್ರತೆಗಾಗಿ ಅಂದರೆ ರಾಜ್ಯಗಳು ಸಹ ಖರ್ಚಿನ ಹೊಣೆಯನ್ನು ಇದರ ಅಡಿಯಲ್ಲಿ ಹಂಚಿಕೊಳ್ಳಬೇಕಾಗುತ್ತದೆ. ಇದು ಕೇಂದ್ರದ ಶಿಫಾರಸು ಎಂದು ಹಣಕಾಸು ಆಯೋಗ ಹೇಳಿದೆ. ಈ ಶಿಫಾರಸ್ಸನ್ನು ಸಾಂವಿಧಾನಿಕ ತಜ್ಞರ ಅಭಿಪ್ರಾಯ ಪಡೆದ ಬಳಿಕವೇ ಒಪ್ಪಿಕೊಳ್ಳಲಾಗಿದೆ ಎಂದು ಆಯೋಗ ತಿಳಿಸಿದೆ. ಆದರೆ ಇದೇ ಮೊದಲ ಬಾರಿಗೆ ಕೇಂದ್ರ ಸರಕಾರವು ರಾಜ್ಯಗಳ ನಿಧಿಯಲ್ಲಿ ಒಂದು ಶೇಕಡಾ ಕಡಿತ ಮಾಡಿ, ಅದನ್ನು ರಕ್ಷಣಾ ಬಜೆಟ್‌ಗೆ ಸೇರಿಸಿದೆ.

ಇನ್ನು ಸಂವಿಧಾನದ ಪ್ರಕಾರ, ಕಾನೂನು ಮತ್ತು ಸುವ್ಯವಸ್ಥೆ ರಾಜ್ಯ ವಿಷಯ. ಈ ಹಿಂದೆ, ಕೇಂದ್ರವು ರಾಜ್ಯಗಳ ಪೊಲೀಸ್ ಪಡೆಗಳ ಆಧುನೀಕರಣಕ್ಕೆ ಸಾಕಷ್ಟು ನೆರವು ನೀಡಿದೆ. ಆದರೆ ಈಗ ಅದನ್ನು ನಿಲ್ಲಿಸಿದೆ. ಇಂತಹ ವಿಷಯಗಳಲ್ಲಿ ರಾಜ್ಯ ಸರಕಾರಗಳಿಗೆ ನೆರವು ನೀಡುವುದನ್ನು ಕೇಂದ್ರ ಸರಕಾರ ಏಕೆ ನಿಲ್ಲಿಸಿದೆ ಎನ್ನುವುದು ಇಂದಿಗೂ ನಿಗೂಢ ಪ್ರಶ್ನೆಯಾಗಿಯೇ ಉಳಿದಿದೆ. ಏಕೆಂದರೆ, ಕಾನೂನು-ಸುವ್ಯವಸ್ಥೆ ಕಾಪಾಡುವುದು ಕೇಂದ್ರದ ಜವಾಬ್ದಾರಿ ಸಹ ಆಗಿದೆ.

ಇವೆಲ್ಲದರ ನಡುವೆಯೆ, ಇತ್ತೀಚಿನ ವರ್ಷಗಳಲ್ಲಿ ಕೇಂದ್ರವು ಹೆಚ್ಚು-ಹೆಚ್ಚು ಸೆಸ್‌ಗಳನ್ನು ವಿಧಿಸುತ್ತಿದೆ. ಈ ಸೆಸ್‌ಗಳನ್ನು ಅದು ರಾಜ್ಯಗಳೊಂದಿಗೆ ಹಂಚಿಕೊಳ್ಳಬೇಕಾಗಿಲ್ಲ. ಏಕೆಂದರೆ, ಸೆಸ್‌ಗಳನ್ನು ಕೇಂದ್ರ ರಾಜ್ಯಗಳೊಂದಿಗೆ ಹಂಚಿಕೊಳ್ಳಬೇಕು ಎಂಬ ನಿಯಮವಿಲ್ಲ. ಇದರ ಜೊತೆಗೆ ಕೇಂದ್ರ ಸರ್ಕಾರವು, ಹೆಚ್ಚಿನ ಅನುದಾನ ನೀಡಬೇಕು ಎಂಬ ರಾಜ್ಯಗಳ ಮನವಿ ಕೂಡ ಪುರಸ್ಕರಿಸುತ್ತಿಲ್ಲ. ಇವೆಲ್ಲದರ ನಡುವೆ, ಕೇಂದ್ರವು ಜಾರಿಗೆ ತರುತ್ತಿರುವ ಯೋಜನೆಗಳ ಸಂಖ್ಯೆಯೂ ಏರುತ್ತಿದೆ. ಉದಾಹರಣೆಗೆ ಕೇಂದ್ರ ಪ್ರಾಯೋಜಿತ ಯೋಜನೆಗಳ ಸಂಖ್ಯೆ 30 ರಿಂದ 35 ಕ್ಕೆ ಏರಿಕೆ ಕಂಡಿದೆ. ಇದಕ್ಕೆ ರಾಜ್ಯ ಸರ್ಕಾರಗಳು ಕೂಡ ತಮ್ಮ ಪಾಲನ್ನು ನೀಡಬೇಕಿದೆ. ಇದರ ಜೊತೆಗೆ ಕೇಂದ್ರದ ಯೋಜನೆಗಳ ಸಂಖ್ಯೆ 685 ರಿಂದ 704 ಏರಿಕೆ ಕಂಡಿವೆ. ಸರಕು ಹಾಗೂ ಸೇವಾ ತೆರಿಗೆ ಜಾರಿ ಬಳಿಕ ತೆರಿಗೆ ಆದಾಯ ಮೇಲಿನ ರಾಜ್ಯಗಳ ನ್ಯಾಯವ್ಯಾಪ್ತಿ ಸಹ ಕುಗ್ಗಿದೆ. ಹೀಗಾಗಿ ರಾಜ್ಯಗಳು ಅನುದಾನಕ್ಕಾಗಿ ಇನ್ನಾವುದೇ ದಾರಿ ಇಲ್ಲದೆ, ಕೇಂದ್ರದ ಮುಂದೆ ಮಂಡಿಯೂರಬೇಕಾದ ಸ್ಥಿತಿ ಎದುರಾಗಿದೆ. ಎಂದಿನಂತೆ 15 ನೇ ಹಣಕಾಸು ಆಯೋಗಕ್ಕೂ ಈ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ತರಲು ಸಾಧ್ಯವಾಗಿಲ್ಲ. ಹೀಗಾಗಿ ಸಂಪನ್ಮೂಲ ಕೊರತೆಯ ಸುಳಿಯಿಂದ ಹೊರಬಂದು ಆರ್ಥಿಕ ಸಂಕಷ್ಟದಿಂದ ಪಾರಾಗಲು ರಾಜ್ಯಗಳಿಗೆ ಸಾಧ್ಯವಾಗುತ್ತಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.