ನವದೆಹಲಿ: ದೇಶದಲ್ಲಿ ಕೋವಿಡ್ ಆತಂಕದ ನಡುವೆ ಲಸಿಕೆ ಅಭಿಯಾನವು ವೇಗ ಪಡೆದುಕೊಂಡಿರುವುದು ಸಮಾಧಾನ ತಂದಿದೆ. ಹೀಗಾಗಿ ನಾನಾ ರಾಜ್ಯಗಳು ಶಾಲಾ- ಕಾಲೇಜುಗಳ ಆರಂಭಕ್ಕೆ ಮುಂದಾಗಿವೆ.
ಇಂದಿನಿಂದಲೇ ಕೆಲವೆಡೆ ಪೂರ್ಣ ಪ್ರಮಾಣದ ಶಾಲಾ-ಕಾಲೇಜುಗಳು ಆರಂಭವಾಗುತ್ತಿದ್ದರೆ. ಕೋವಿಡ್ ಆತಂಕ ಹೆಚ್ಚಿರುವ ಪ್ರದೇಶಗಳು ಹಂತ ಹಂತವಾಗಿ ಶಾಲೆ ತೆರೆಯಲು ಮುಂದಾಗಿವೆ.ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆಗೂ ಮುಂಚಿತವಾಗಿ ಎಲ್ಲ ಶಾಲಾ ಶಿಕ್ಷಕರಿಗೆ ಆದ್ಯತೆ ಮೇರೆ ಲಸಿಕೆ ಹಾಕುವಂತೆ ಕೇಂದ್ರ ಶಿಕ್ಷಣ ಸಚಿವ ಮನ್ಸುಖ್ ಮಾಂಡವಿಯಾ ಆಯಾ ರಾಜ್ಯಗಳಿಗೆ ಸೂಚಿಸಿದ್ದಾರೆ.
ದೆಹಲಿಯಲ್ಲಿ ಕೋವಿಡ್ ಪರಿಸ್ಥಿತಿ ಸುಧಾರಿಸುತ್ತಿರುವ ಹಿನ್ನೆಲೆ ಸೆ.1ರಿಂದ 9 ನೇ ತರಗತಿಯಿಂದ 12 ಹಾಗೂ ಎಲ್ಲಾ ಕಾಲೇಜುಗಳು ಆರಂಭವಾಗಲಿದೆ ಎಂದು ದೆಹಲಿ ಸರ್ಕಾರ ಘೋಷಿಸಿದೆ. ಆದರೆ, ಕೋವಿಡ್ ನಿಯಮಾವಳಿಗಳ ಕಡ್ಡಾಯ ಪಾಲನೆಯ ಜೊತೆಗೆ ಹಲವು ನಿಯಮ ಜಾರಿ ಮಾಡಿದೆ. ಕೇವಲ ಶೇ.50ರಷ್ಟು ಮಾತ್ರ ವಿದ್ಯಾರ್ಥಿಗಳಿಗೆ ಅವಕಾಶ ನೀಡಿ ದಿನ ಬಿಟ್ಟು ದಿನ ಬದಲಿ ಆಸನ ವ್ಯವಸ್ಥೆಯ ನಿಯಮ ಜಾರಿ ಮಾಡಲಾಗಿದೆ. ಜೊತೆಗ ಥರ್ಮಲ್ ಸ್ಕ್ರೀನಿಂಗ್, ಊಟದ ವಿರಾಮ ಕಡಿತ ಸೇರಿ ಹಲವು ರೂಲ್ಸ್ ಕಡ್ಡಾಯ ಮಾಡಲಾಗಿದೆ.
-
#WATCH | A teacher briefs students of class 12th on COVID-19 guidelines to be followed by them, at Rajkiya Sarvodaya Kanya Vidyalaya in West Vinod Nagar as schools in Delhi reopen for classes 9 to 12 starting today pic.twitter.com/q8tO6LJWex
— ANI (@ANI) September 1, 2021 " class="align-text-top noRightClick twitterSection" data="
">#WATCH | A teacher briefs students of class 12th on COVID-19 guidelines to be followed by them, at Rajkiya Sarvodaya Kanya Vidyalaya in West Vinod Nagar as schools in Delhi reopen for classes 9 to 12 starting today pic.twitter.com/q8tO6LJWex
— ANI (@ANI) September 1, 2021#WATCH | A teacher briefs students of class 12th on COVID-19 guidelines to be followed by them, at Rajkiya Sarvodaya Kanya Vidyalaya in West Vinod Nagar as schools in Delhi reopen for classes 9 to 12 starting today pic.twitter.com/q8tO6LJWex
— ANI (@ANI) September 1, 2021
ಪೂರ್ಣ ಪ್ರಮಾಣದಲ್ಲಿ ಶಾಲೆ ಪುನಾರಂಭ
-
Telangana: Many schools remain shut in Hyderabad despite state govt's permission to reopen schools from today
— ANI (@ANI) September 1, 2021 " class="align-text-top noRightClick twitterSection" data="
"We sanitize classrooms frequently & ensure social distancing," says Raj Kumar, administrative officer of Oxford High School in Hyderabad pic.twitter.com/jPg5cGXIOZ
">Telangana: Many schools remain shut in Hyderabad despite state govt's permission to reopen schools from today
— ANI (@ANI) September 1, 2021
"We sanitize classrooms frequently & ensure social distancing," says Raj Kumar, administrative officer of Oxford High School in Hyderabad pic.twitter.com/jPg5cGXIOZTelangana: Many schools remain shut in Hyderabad despite state govt's permission to reopen schools from today
— ANI (@ANI) September 1, 2021
"We sanitize classrooms frequently & ensure social distancing," says Raj Kumar, administrative officer of Oxford High School in Hyderabad pic.twitter.com/jPg5cGXIOZ
ತೆಲಂಗಾಣದಲ್ಲಿ ಕೋವಿಡ್ ಪ್ರಕರಣ ಕಡಿಮೆಯಾದ ಬೆನ್ನಲ್ಲೇ ಎಲ್ಲ ಶಾಲಾ - ಕಾಲೇಜುಗಳ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಕೋಚಿಂಗ್ ಸೆಂಟರ್ಸ್, ಪಾಲಿಟೆಕ್ನಿಕ್ ಕಾಲೇಜುಗಳಲ್ಲಿಯೂ ತರಗತಿ ಆರಂಭಕ್ಕೆ ಸರ್ಕಾರ ನಿರ್ಧರಿಸಿದ್ದು, ಇಂದಿನಿಂದ ಕೋವಿಡ್ ನಿಯಮಗಳ ಕಡ್ಡಾಯ ಪಾಲನೆಯ ಜೊತೆ ತರಗತಿ ಆರಂಭವಾಗುತ್ತಿವೆ. ಆದರೆ ವಸತಿ ಶಾಲೆಗಳ ಆರಂಭ ಕುರಿತಂತೆ ಸ್ಪಷ್ಟನೆ ನೀಡಲ್ಲ.
ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್
ಇದೇ ರೀತಿಯಲ್ಲಿ ತಮಿಳುನಾಡು ಸರ್ಕಾರ ಸಹ ಶಾಲಾ-ಕಾಲೇಜು ಆರಂಭ ಮಾಡಿದೆ, 9ರಿಂದ 12 ಹಾಗೂ ಕಾಲೇಜುಗಳ ಶುರು ಮಾಡಲಾಗಿದೆ. ವಿದ್ಯಾರ್ಥಿಗಳು ಬಸ್ ಪಾಸ್ ಇಲ್ಲದೇ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿ. ಶಾಲಾ - ಕಾಲೇಜು ಆವರಣದಲ್ಲಿ ಕಡ್ಡಾಯ ಕೋವಿಡ್ ನಿಯಮ ಪಾಲನೆಗೆ ಸೂಚಿಸಲಾಗಿದೆ.
-
Schools in Uttar Pradesh reopen for classes 1 to 5 from today, following COVID0-19 protocols; visuals from City Montessori School, Station Road Campus in Lucknow
— ANI UP (@ANINewsUP) September 1, 2021 " class="align-text-top noRightClick twitterSection" data="
"We see a lot of enthusiasm in students to attend physical classes after a long time," says principal Deepali Gautam pic.twitter.com/90v46pjkmA
">Schools in Uttar Pradesh reopen for classes 1 to 5 from today, following COVID0-19 protocols; visuals from City Montessori School, Station Road Campus in Lucknow
— ANI UP (@ANINewsUP) September 1, 2021
"We see a lot of enthusiasm in students to attend physical classes after a long time," says principal Deepali Gautam pic.twitter.com/90v46pjkmASchools in Uttar Pradesh reopen for classes 1 to 5 from today, following COVID0-19 protocols; visuals from City Montessori School, Station Road Campus in Lucknow
— ANI UP (@ANINewsUP) September 1, 2021
"We see a lot of enthusiasm in students to attend physical classes after a long time," says principal Deepali Gautam pic.twitter.com/90v46pjkmA
ಹರಿಯಾಣದಲ್ಲಿ 4-5ನೇ ತರಗತಿ ಆರಂಭ
ಹರಿಯಾಣದಲ್ಲಿ ಕೋವಿಡ್ ಆರ್ಭಟ ಕಡಿಮೆಯಾಗುತ್ತಿದ್ದಂತೆ ಅಲ್ಲಿನ ಸರ್ಕಾರ ಇಂದಿನಿಂದ 4 ಮತ್ತು 5ನೇ ತರಗತಿ ಆರಂಭಿಸಿದೆ. ಇತ್ತ ಮಧ್ಯ ಪ್ರದೇಶದಲ್ಲಿ 6ನೇ ತರಗತಿಯಿಂದ 12ರ ವರೆಗೆ ಇಂದಿನಿಂದ ಶೇ.50ರಷ್ಟು ವಿದ್ಯಾರ್ಥಿಗಳಿಗೆ ಅವಕಾಶ ನೀಡಿ ತರಗತಿ ಆರಂಭಿಸುತ್ತಿದೆ.
ರಾಜಸ್ಥಾನದಲ್ಲಿ 9-12ನೇ ತರಗತಿಗಳು ಓಪನ್
ರಾಜಸ್ಥಾನದಲ್ಲಿ ಕೋವಿಡ್ ಇಳಿಮುಖವಾಗಿದ್ದು, ಈ ಹಿನ್ನೆಲೆ 9ರಿಂದ 12ನೇ ತರಗತಿ ಇಂದಿನಿಂದ ಆರಂಭವಾಗುತ್ತಿದೆ. ಇಲ್ಲಿಯೂ ಸಹ ಕೇವಲ ಶೇ50ರಷ್ಟು ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ಆಗಮಿಸಲು ಅವಕಾಶ ನೀಡಲಾಗಿದೆ.
-
Schools reopen in Rajasthan for classes 9 to 12, following COVID protocols; visuals from Mahatma Gandhi Govt School in Jaipur
— ANI (@ANI) September 1, 2021 " class="align-text-top noRightClick twitterSection" data="
"It feels great to be back in school after a long time. Now, we can interact with our teachers face to face," says a student pic.twitter.com/fTCWwOg25I
">Schools reopen in Rajasthan for classes 9 to 12, following COVID protocols; visuals from Mahatma Gandhi Govt School in Jaipur
— ANI (@ANI) September 1, 2021
"It feels great to be back in school after a long time. Now, we can interact with our teachers face to face," says a student pic.twitter.com/fTCWwOg25ISchools reopen in Rajasthan for classes 9 to 12, following COVID protocols; visuals from Mahatma Gandhi Govt School in Jaipur
— ANI (@ANI) September 1, 2021
"It feels great to be back in school after a long time. Now, we can interact with our teachers face to face," says a student pic.twitter.com/fTCWwOg25I
ಪುದುಚೆರಿಯಲ್ಲೂ ಶುಭಾರಂಭ
ಪುದುಚೆರಿಯಲ್ಲಿ 9ರಿಂದ 12ನೇ ತರಗತಿ ವರೆಗೂ ಶಾಲೆ ಆರಂಭವಾಗುತ್ತಿದ್ದು, 2 ಶಿಫ್ಟ್ನಲ್ಲಿ ತರಗತಿ ನಡೆಯಲಿದೆ. ಬೆಳಗ್ಗೆ ಹಾಗೂ ಸಂಜೆ ಎರಡು ಬ್ಯಾಚ್ನ ಮೂಲಕ ತರಗತಿ ಆರಂಭಿಸಲಾಗಿದೆ.