ETV Bharat / bharat

ಕೊರೊನಾ 2ನೇ ಅಲೆ ಅಪಾಯ: ನೈಟ್ ಕರ್ಫ್ಯೂ ಅಲ್ಲ,​ ಕೊರೊನಾ ಕರ್ಪ್ಯೂ ಅನ್ನಿ: ಮೋದಿ ಕರೆ

ದೇಶದಲ್ಲಿ 4 ದಿನಗಳ ಕಾಲ ಲಸಿಕೆ ಉತ್ಸವ ಆಚರಣೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಏಪ್ರಿಲ್​ 11ರಿಂದ 14ರವರೆಗೆ ದೇಶಾದ್ಯಂತ ವಾಕ್ಸಿನ್ ಉತ್ಸವ ಆಚರಣೆ ಮಾಡಲಾಗುವುದು ಎಂದಿದ್ದಾರೆ.

author img

By

Published : Apr 8, 2021, 8:45 PM IST

Updated : Apr 8, 2021, 10:20 PM IST

pm modi
pm modi

ನವದೆಹಲಿ: ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವ ಕಾರಣ ಪ್ರಧಾನಿ ನರೇಂದ್ರ ಮೋದಿ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದ ಮುಖ್ಯಮಂತ್ರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು. ಇದಾದ ಬಳಿಕ ದೇಶವನ್ನುದ್ದೇಶಿಸಿ ನಮೋ ಮಾತನಾಡಿದರು.

4 ದಿನ ಕೊರೊನಾ ವ್ಯಾಕ್ಸಿನ್​ ಹಬ್ಬ ಎಂದ ನಮೋ

ದೇಶದಲ್ಲಿ ಮತ್ತೊಮ್ಮೆ ಸವಾಲಿನ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಕೋವಿಡ್​ ಪರಿಸ್ಥಿತಿ ನಿಭಾಯಿಸಲು ನಾನು ನಿಮ್ಮೆಲ್ಲರಲ್ಲೂ ಕೋರುತ್ತೇನೆ ಎಂದು ನಮೋ ಸಿಎಂ ಸಭೆಯಲ್ಲಿ ತಿಳಿಸಿದರು. ದೇಶದಲ್ಲಿ ಕೊರೊನಾ ಪಾಸಿಟಿವ್​ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದಿರುವ ನಮೋ, ಯಾವುದೇ ಕಾರಣಕ್ಕೂ ವೈರಸ್​ ಲಘುವಾಗಿ ಪರಿಗಣಿಸಬೇಡಿ ಎಂದು ಕಿವಿಮಾತು ಹೇಳಿದರು. ದೇಶದಲ್ಲಿ ಎರಡನೇ ಅಲೆ ದಿಢೀರ್​ ಆಗಿ ಹೆಚ್ಚಳವಾಗಿದ್ದು, ಪ್ರತಿಯೊಬ್ಬರಲ್ಲೂ ಇದರ ಬಗ್ಗೆ ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆ ಇದೆ. ಮೊದಲನೇ ಅಲೆಗಿಂತಲೂ ಎರಡನೇ ಅಲೆ ಅಪಾಯಕಾರಿಯಾಗಿದ್ದು, ಇದರ ತಡೆಗೆ ಯುದ್ಧೋಪಾದಿ ಕಾರ್ಯ ಅಗತ್ಯ ಎಂದರು.

ಹೆಚ್ಚು ಟೆಸ್ಟಿಂಗ್ ಮಾಡುವಂತೆ ಸೂಚನೆ

4 ದಿನ ಕೊರೊನಾ ವ್ಯಾಕ್ಸಿನ್​ ಹಬ್ಬ ಎಂದ ನಮೋ

ಕೊರೊನಾ ಹರಡುವಿಕೆ ತಡೆಯಲು ಎಲ್ಲರ ಸಹಭಾಗಿತ್ವ ಅವಶ್ಯವಾಗಿದ್ದು, ಪಾಸಿಟಿವ್​ ರೇಟ್​ ಶೇ. 5ಕ್ಕಿಂತಲೂ ಕಡಿಮೆ ಮಾಡಬೇಕು. ಹೀಗಾಗಿ 2-3 ವಾರಗಳ ಕಾಲ ಕಠಿಣ ನಿಯಮ ಜಾರಿಗೊಳಿಸಿ ಎಂದು ತಿಳಿಸಿದರು. ಟೆಸ್ಟ್​ ಮಾಡಿಸಿದಾಗ ಕೊರೊನಾ ಪಾಸಿಟಿವ್​ ಹೆಚ್ಚು ಬಂದರೂ ಪರವಾಗಿಲ್ಲ. ಆದರೆ ಟೆಸ್ಟಿಂಗ್ ಗರಿಷ್ಠ ಪ್ರಮಾಣದಲ್ಲಿ ಮಾಡಿ. ಹೆಚ್ಚು ಕೊರೊನಾ ಪರೀಕ್ಷೆ​ ಮಾಡದೇ ಇದ್ರೆ ಅದು ಎಲ್ಲರಿಗೂ ಹರಡುತ್ತೆ. ಹೀಗಾಗಿ ಆರ್​ಟಿಪಿಸಿಆರ್ ಪರೀಕ್ಷೆ ಮಾಡಿಸುವುದು ಅಗತ್ಯ ಎಂದು ತಿಳಿಸಿದರು. ಇದೇ ವೇಳೆ ನೈಟ್​ ಕರ್ಪ್ಯೂ ಎನ್ನುವ ಬದಲು ಕೊರೊನಾ ಕರ್ಪ್ಯೂ ಎಂದು ಕರೆಯಿರಿ ಎಂದು ಪ್ರಧಾನಿ ಸಲಹೆ ನೀಡಿದರು.

  • I appeal to you all to stress on COVID19 testing. Our target is to do 70% RT-PCR tests. Let the number of positive cases come high, but do maximum testing. Proper sample collection is very important, it can be checked through proper governance: PM Modi during meeting with CMs pic.twitter.com/Ml35BVLY3q

    — ANI (@ANI) April 8, 2021 " class="align-text-top noRightClick twitterSection" data=" ">

ದೇಶ ಮೊದಲ ಅಲೆ ವಿರುದ್ಧ ಯಶಸ್ವಿಯಾಗಿ ಹೋರಾಡಿದ್ದು, ಇದೀಗ ಎರಡನೇ ಅಲೆ ವಿರುದ್ಧ ಹೋರಾಟ ನಡೆಸಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ. ಮಹಾರಾಷ್ಟ್ರ, ಛತ್ತೀಸ್​ಗಢ, ಗುಜರಾತ್​​, ಪಂಜಾಬ್​ನಲ್ಲಿ ಹೆಚ್ಚಿನ ರೀತಿಯಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಇದರ ಬಗ್ಗೆ ಸೂಕ್ತ ಕ್ರಮ ಅಗತ್ಯ ಎಂದರು. ಈ ಹಿಂದಿನ ರೀತಿ ಕಾಳಜಿ ವಹಿಸಿರುವುದು ಜನರು ಕಡಿಮೆ ಮಾಡಿದ್ದರಿಂದ ಸೋಂಕು ವೇಗವಾಗಿ ಹರಡುತ್ತಿದ್ದು, ಮೈಕ್ರೋ ಕಂಟೇನ್​ಮೆಂಟ್​ ವಲಯಗಳ ಬಗ್ಗೆ ಹೆಚ್ಚಿನ ಎಚ್ಚರ ವಹಿಸಬೇಕಾಗಿದೆ ಎಂದು ತಿಳಿಸಿದರು.

ನೈಟ್​ ಕರ್ಫ್ಯೂ ಅಲ್ಲ ಇದು ಕೊರೊನಾ ಕರ್ಫ್ಯೂ

ನೈಟ್​ ಕರ್ಫ್ಯೂ ಬಗ್ಗೆ ಇದೀಗ ಕೆಲವರು ವ್ಯಂಗ್ಯವಾಡುತ್ತಿರುವ ಕಾರಣ ಇದಕ್ಕೆ ನೈಟ್ ಕರ್ಫ್ಯೂ ಬದಲು ಕೊರೊನಾ ಕರ್ಫ್ಯೂ ಎಂದು ಕರೆಯೋಣ ಎಂದ ನಮೋ, ಕೊರೊನಾ ಕರ್ಫ್ಯೂ ಎಂದಾಗ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬಹುದು ಎಂದರು.

ಮೈಕ್ರೋ ಕಂಟೇನ್​ಮೆಂಟ್​ ವಲಯದ ಬಗ್ಗೆ ಜಾಗೃತಿ

  • We must concentrate on micro-containment zones. In places where night curfew has been imposed, I would urge to use the word 'Corona Curfew', to continue alertness about coronavirus. It will be better to start curfew timing from 9pm or 10pm till 5am or 6am: PM Modi pic.twitter.com/BXZukPcPuC

ಕೊರೊನಾ ವಿರುದ್ಧ ಯಶಸ್ವಿಯಾಗಿ ಹೋರಾಡಲು ಮೈಕ್ರೋ ಕಂಟೇನ್​ಮೆಂಟ್​ ಗುರುತಿಸಿ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ನಮೋ ಸೂಚನೆ ನೀಡಿದರು. ಇದರಿಂದ ಯಶಸ್ವಿಯಾಗಿ ಮಹಾಮಾರಿ ಹೊಡೆದು ಓಡಿಸಬಹುದಾಗಿದೆ. ಈ ಹಿಂದೆ ಸಕ್ರಿಯ ಪ್ರಕರಣಗಳ ಸಂಖ್ಯೆ 10 ಲಕ್ಷ ಇತ್ತು. ಕ್ರಮೇಣವಾಗಿ ಕಡಿಮೆಯಾಗಿಲಿಲ್ವಾ ಎಂದು ತಿಳಿಸಿದ್ರು.

ಕೊರೊನಾ ವೈರಸ್​ ಬಗ್ಗೆ ಭಯ ಕಡಿಮೆ

ಕೊರೊನಾ ವೈರಸ್​ ಬಗ್ಗೆ ಜನರಲ್ಲಿ ಭಯ ಕಡಿಮೆಯಾಗಿದ್ದು, ಟೆಸ್ಟ್​​, ಟ್ರ್ಯಾಕ್​ ಹಾಗೂ ಟ್ರೇಸ್​ ಬಗ್ಗೆ ಹೆಚ್ಚಿನ ಗಮನ ಹರಿಸೋಣ. ಎಲ್ಲ ಮುಖ್ಯಮಂತ್ರಿಗಳು ಇದರ ಬಗ್ಗೆ ಹೆಚ್ಚಿನ ಗಮನ ಹರಿಸಿ. ಈ ಹಿಂದೆ ಕೊರೊನಾದ ಲಕ್ಷಣಗಳಿದ್ದರೆ ತಕ್ಷಣವೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ ಇದೀಗ ಆ ಭಯ ಹೊರಟು ಹೋಗಿದೆ ಎಂದರು. ಕೆಲವೊಂದು ರಾಜ್ಯಗಳಲ್ಲಿ ಟೆಸ್ಟಿಂಗ್​​ ಪ್ರಮಾಣ ಕಡಿಮೆಯಾಗಿದ್ದು, ಹೀಗಾಗಿ ನಮ್ಮಲ್ಲಿ ಕೋವಿಡ್​ ಜಾಸ್ತಿ ಇಲ್ಲ ಎಂದು ಹೇಳುತ್ತಿವೆ ಎಂದು ಚಾಟಿ ಬೀಸಿದ್ರು.

ಕೋವಿಡ್ ಪಾಸಿಟಿವ್​ ಸಂಖ್ಯೆ ಹೆಚ್ಚಾಗುತ್ತಿದೆ ಎಂಬ ಕಾರಣಕ್ಕೆ ಕೆಲವೊಂದು ರಾಜ್ಯಗಳಲ್ಲಿ ಕಡಿಮೆ ಟೆಸ್ಟಿಂಗ್ ಮಾಡಲಾಗ್ತಿದೆ. ಅದರೆ ಕೋವಿಡ್ ಸಂಖ್ಯೆ ಹೆಚ್ಚಾಗಿದ್ರೂ ಪರವಾಗಿಲ್ಲ. ಹೆಚ್ಚಿನ ಟೆಸ್ಟಿಂಗ್ ಮಾಡುವಂತೆ ಸೂಚನೆ ನೀಡಿದರು. ದೇಶದಲ್ಲಿ ಶೇ.70ರಷ್ಟು ಆರ್​​ಟಿಪಿಸಿಆರ್​ ಟೆಸ್ಟ್ ಮಾಡಬೇಕು. ಕೆಲವೊಂದು ಸೆಂಟರ್​ಗಳಲ್ಲಿ ಸರಿಯಾಗಿ ಸ್ಯಾಂಪಲ್​ ತೆಗೆದುಕೊಳ್ಳುತ್ತಿಲ್ಲ ಎಂದು ತಿಳಿಸಿದರು. 72 ಗಂಟೆಯಲ್ಲಿ 30 ಸಂಪರ್ಕಿತರ ಗುರುತಿಸುವ ಕೆಲಸವಾಗಬೇಕಾಗಿದ್ದು, ಇದರ ಬಗ್ಗೆ ಗಂಭೀರವಾಗಿ ಕೆಲಸ ನಿರ್ವಹಿಸೋಣ ಎಂದರು.

ಲಸಿಕೆ ವ್ಯರ್ಥಮಾಡಬೇಡಿ

ಕೋವಿಡ್ ಲಸಿಕೆ ಯಾವುದೇ ಕಾರಣಕ್ಕೂ ವ್ಯರ್ಥವಾಗದಂತೆ ಕ್ರಮ ಕೈಗೊಳ್ಳಿ ಎಂದಿರುವ ನಮೋ, ನಮ್ಮ ಬಳಿ ಇರುವುದನ್ನ ಸರಿಯಾಗಿ ಬಳಕೆ ಮಾಡಿಕೊಳ್ಳಬೇಕಾಗಿದೆ. ಇಡೀ ದೇಶವನ್ನ ಗಮನದಲ್ಲಿಟ್ಟುಕೊಂಡು ಲಸಿಕೆ ಬಳಕೆ ಮಾಡಿ ಎಂದರು. ಈ ತಿಂಗಳಲ್ಲಿ ಲಸಿಕಾ ಅಭಿಯಾನಕ್ಕೆ ಹೆಚ್ಚಿನ ಆದ್ಯತೆ ನೀಡೋಣ ಎಂದಿರುವ ನಮೋ ಆದಷ್ಟು ಹೆಚ್ಚಿನ ಲಸಿಕೆ ನೀಡಲು ಕೇಂದ್ರ ಸರ್ಕಾರ ಪ್ರಯತ್ನ ಮಾಡ್ತಿದೆ ಎಂದರು.

ಕೊರೊನಾ ವಿಷಯದಲ್ಲಿ ರಾಜಕಾರಣ ಬೇಡ

ಕೊರೊನಾ ವೈರಸ್​ ವಿರುದ್ಧದ ಹೋರಾಟದಲ್ಲಿ ನಾವು ಗೆಲುವು ಸಾಧಿಸುತ್ತೇವೆ ಎಂದಿರುವ ನಮೋ, ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿ ಬೇಕು ಎಂದರು. 45 ವರ್ಷ ಮೇಲ್ಪಟ್ಟ ಎಲ್ಲರೂ ಕೊರೊನಾ ವ್ಯಾಕ್ಸಿನ್ ತೆಗೆದುಕೊಳ್ಳು ಸಹಾಯ ಮಾಡಿ ಎಂದಿರುವ ನಮೋ, ಇದರಲ್ಲಿ ಯಾವುದೇ ರೀತಿಯ ರಾಜಕಾರಣ ಮಾಡಬೇಡಿ ಎಂದರು. ಲಸಿಕೆ ಇಲ್ಲದ ವೇಳೆ ನಾವು ಕೊರೊನಾ ವೈರಸ್​ ವಿರುದ್ಧ ಹೋರಾಟ ನಡೆಸಿದ್ದೇವೆ. ಇದೀಗ ನಮ್ಮ ಬಳಿ ಅಸ್ತ್ರವಿದ್ದು, ಖಂಡಿತವಾಗಿ ಗೆಲುವು ಸಾಧಿಸುತ್ತೇವೆ ಎಂದರು.

4 ದಿನ ಕೊರೊನಾ ವ್ಯಾಕ್ಸಿನ್​ ಹಬ್ಬ

ಕೋವಿಡ್​ ಲಸಿಕೆ ಭಾಗವಾಗಿ ಇದೀಗ ದೇಶದಲ್ಲಿ ಏಪ್ರಿಲ್​ 11ರಿಂದ 14ರವರೆಗೆ ಕೊರೊನಾ ವ್ಯಾಕ್ಸಿನ್​ ಹಬ್ಬ ಆಚರಣೆ ಮಾಡಲಾಗುವುದು ಎಂದಿರುವ ನಮೋ, ಹೆಚ್ಚಿನ ರೀತಿಯಲ್ಲಿ ವ್ಯಾಕ್ಸಿನ್​ ನೀಡುವ ಉದ್ದೇಶ ಇಟ್ಟುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಮಾಸ್ಕ್​ ಧರಿಸುವುದರ ಪ್ರಾಮುಖ್ಯತೆ ಬಗ್ಗೆ ಮತ್ತಷ್ಟು ಜಾಗೃತಿ ಮೂಡಿಸಬೇಕಾಗಿದೆ ಎಂದ ನಮೋ, ಕೋವಿಡ್​-19 ಸುರಕ್ಷತಾ ಕ್ರಮಗಳ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಸೂಚನೆ ನೀಡಿದರು.

Last Updated : Apr 8, 2021, 10:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.