ETV Bharat / bharat

ವ್ಯಾಕ್ಸಿನ್ ಪಡೆಯಲು ನಾ ಮುಂದು.. ತಾ ಮುಂದು..: ಮಧ್ಯಪ್ರದೇಶದ ಲಸಿಕೆ ಕೇಂದ್ರದಲ್ಲಿ ನೂಕುನುಗ್ಗಲು - Stampede-Like Situation

ಲಸಿಕೆ ಕೇಂದ್ರವನ್ನು ತೆರೆಯುತ್ತಿದ್ದಂತೆ ನೆರೆದಿದ್ದ ಜನ ಪರಸ್ಪರರ ಮೇಲೆ ಬೀಳುತ್ತಾ, ಏಳುತ್ತಾ ದೌಡಾಯಿಸಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರವಾಗಿದೆ. ಪರಿಸ್ಥಿತಿ ಕೈಮೀರಿ ಹೋಗಲಿದೆ ಎಂಬುದನ್ನು ಗಮನಿಸಿದ ಅಧಿಕಾರಿಗಳು ಪೊಲೀಸರನ್ನು ಸ್ಥಳಕ್ಕೆ ಕರೆಸಿದ್ದಾರೆ.

Stampede-Like Situation At Madhya Pradesh Vaccine Centre
ಲಸಿಕೆ ಕೇಂದ್ರದಲ್ಲಿ ಬಿದ್ದು-ಎದ್ದ ಜನ
author img

By

Published : Jul 2, 2021, 4:48 PM IST

ಮಧ್ಯಪ್ರದೇಶ: ಇಲ್ಲಿನ ಚಿಂದ್ವಾರ ಜಿಲ್ಲೆಯ ವ್ಯಾಕ್ಸಿನೇಷನ್ ಕೇಂದ್ರವೊಂದರಲ್ಲಿ ಲಸಿಕೆ ಪಡೆಯಲು ಜನ ಮುಗಿಬಿದ್ದ ಘಟನೆ ನಡೆದಿದ್ದು, ವಿಡಿಯೋ ಇದೀಗ ವೈರಲ್​ ಆಗಿದೆ.

ಮಧ್ಯಪ್ರದೇಶದ ಲಸಿಕೆ ಕೇಂದ್ರದಲ್ಲಿ ಬಿದ್ದು-ಎದ್ದ ಜನ

ಲಸಿಕೆ ಕೇಂದ್ರವನ್ನು ತೆರೆಯುತ್ತಿದ್ದಂತೆ ನೆರೆದಿದ್ದ ಜನ ಪರಸ್ಪರರ ಮೇಲೆ ಬೀಳುತ್ತಾ, ಏಳುತ್ತಾ ದೌಡಾಯಿಸಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರವಾಗಿದೆ. ಪರಿಸ್ಥಿತಿ ಕೈಮೀರಿ ಹೋಗಲಿದೆ ಎಂಬುದನ್ನು ಗಮನಿಸಿದ ಅಧಿಕಾರಿಗಳು ಪೊಲೀಸರನ್ನು ಸ್ಥಳಕ್ಕೆ ಕರೆಸಿದ್ದಾರೆ.

ಮಧ್ಯಪ್ರದೇಶ ಸರ್ಕಾರವು ಇಲ್ಲಿಯವರೆಗೆ ಜನಸಂಖ್ಯೆಯ ಶೇ 3 ರಷ್ಟು ಜನರಿಗೆ ಎರಡೂ ಡೋಸ್‌ ಲಸಿಕೆಯನ್ನು ಒದಗಿಸಿದೆ. ಆದಾಗ್ಯೂ, ಜೂನ್ 21 ರಂದು 17 ಲಕ್ಷಕ್ಕೂ ಹೆಚ್ಚು ವ್ಯಾಕ್ಸಿನೇಷನ್ ಹೊಂದಿರುವ ರಾಷ್ಟ್ರೀಯ ದಾಖಲೆಯನ್ನು ಮಧ್ಯಪ್ರದೇಶ ಮಾಡಿತ್ತು. ಆದ್ರೆ, ಇಲ್ಲಿನ ಜನರು ವ್ಯಾಕ್ಸಿನ್‌​ ಪಡೆಯದಿದ್ದರೂ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳನ್ನು ಪಡೆಯುತ್ತಿದ್ದಾರೆ ಎಂಬ ಬಗ್ಗೆ ಹಲವು ದೂರುಗಳು ಬಂದಿದ್ದವು.

ಇದನ್ನೂ ಓದಿ: ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವುದೇ ಮೋದಿ 'ಅಚ್ಛೇ ದಿನ್': ಖರ್ಗೆ ಆಕ್ರೋಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.