ಚೆನ್ನೈ: ಅಧಿಕಾರಕ್ಕೆ ಬಂದರೆ ಮಧುರೈನ ತೊಪ್ಪೂರಿನಲ್ಲಿ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಏಮ್ಸ್) ನಿರ್ಮಾಣ ಪೂರ್ಣ ಮಾಡಲಾಗುವುದು ಎಂದು ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಹೇಳಿದ್ದಾರೆ.
ಮಧುರೈನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2014 ರಲ್ಲಿ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆ ಸ್ಥಾಪನೆಯ ಘೋಷಣೆ ಮಾಡಲಾಗಿತ್ತು ಅದಕ್ಕೆ ಪ್ರಧಾನ ಮಂತ್ರಿಗಳು ಸಾರ್ವತ್ರಿಕ ಚುನಾವಣೆಗೆ ಸ್ವಲ್ಪ ಮೊದಲು 2019 ರಲ್ಲಿ ಅಡಿಪಾಯ ಹಾಕಿದ್ದರು ಎಂದು ತಿಳಿಸಿದರು.
ಮಧುರೈನ ತೊಪ್ಪೂರಿನಲ್ಲಿ ಏಮ್ಸ್ ನಿರ್ಮಾಣವನ್ನು ಪೂರ್ಣಗೊಳಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿಫಲವಾಗಿವೆ ಎಂದು ಆರೋಪ ಮಾಡಿದರು. ಹಾಗೆಯೇ ಡಿಎಂಕೆ ಅಧಿಕಾರಕ್ಕೆ ಬಂದ ನಂತರ ಪಾಂಡಿಯರಾಜಪುರಂ ಮತ್ತು ಅಲಂಗನಲ್ಲೂರಿನಲ್ಲಿರುವ ರಾಷ್ಟ್ರೀಯ ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ಮತ್ತೆ ತೆರೆಯಲಾಗುವುದು ಎಂದರು.