ETV Bharat / bharat

Jammu Kashmir Temperature: ಅಬ್ಬಾ! ಶ್ರೀನಗರದಲ್ಲಿ ಮರಗಟ್ಟುವ ಚಳಿ - ಲಡಾಖ್​ನಲ್ಲಿ ತಾಪಮಾನ

Jammu Kashmir Temperature: ಜಮ್ಮು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ದಾಖಲೆ ಮಟ್ಟದ ಚಳಿ ಕಂಡುಬಂದಿದ್ದು, 2.3 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ.

Srinagar shivers at minus 2.3, Drass in deep freeze at minus 12.8
Jammu Kashmir Temperature, ಶ್ರೀನಗರದಲ್ಲಿ ದಾಖಲೆಯ ಚಳಿ
author img

By

Published : Nov 23, 2021, 2:36 PM IST

ಶ್ರೀನಗರ(ಜಮ್ಮು ಕಾಶ್ಮೀರ): ಕಣಿವೆನಾಡಿನಲ್ಲಿ ಮಂಗಳವಾರ ಅತ್ಯಂತ ಚಳಿ ದಾಖಲಾಗಿದೆ. ಶ್ರೀನಗರದಲ್ಲಿ ಮೈನಸ್ 2.3 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ಲಡಾಖ್​ನ ದ್ರಾಸ್ ಪಟ್ಟಣದಲ್ಲಿ ಮೈನಸ್ 12.8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಂಡುಬಂದಿದೆ.

ಶ್ರೀನಗರದಲ್ಲಿ ಈಗ ದಾಖಲಾಗಿರುವುದು ಅತ್ಯಂತ ಶೀತ ರಾತ್ರಿಯಾಗಿದೆ (Cold Night in Srinagar) ಎಂದು ಹವಾಮಾನ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಮತ್ತಷ್ಟು ತಾಪಮಾನ ಇಳಿಯುವ ಸಾಧ್ಯತೆ ಇದೆ.

ಮುಂದಿನ 48 ಗಂಟೆಗಳಲ್ಲಿ ಹವಾಮಾನದಲ್ಲಿ ಏರುಪೇರಾಗಲಿದೆ. ಕನಿಷ್ಠ ತಾಪಮಾನ ಮತ್ತಷ್ಟು ಇಳಿಯುವ ಸಾಧ್ಯತೆಯಿದೆ. ಪಹಲ್ಗಾಮ್​ನಲ್ಲಿ ಮೈನಸ್ 4.4 ಡಿಗ್ರಿ ಸೆಲ್ಸಿಯಸ್ ಮತ್ತು ಗುಲ್ಮಾರ್ಗ್​ನಲ್ಲಿ ಮೈನಸ್ 0.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗದೆ.

ಲಡಾಖ್‌ ಕೇಂದ್ರಾಡಳಿತ ಪ್ರದೇಶದ ರಾಜಧಾನಿ ಲೇಹ್ ಪಟ್ಟಣದಲ್ಲಿ ಮೈನಸ್ 11.5 ಡಿಗ್ರಿ ಸೆಲ್ಸಿಯಸ್ ಮತ್ತು ಕಾರ್ಗಿಲ್​ನಲ್ಲಿ ಮೈನಸ್ 6.5 ಡಿಗ್ರಿ ಸೆಲ್ಸಿಯಸ್ ತಾಪಮಾನ ರಾತ್ರಿ ದಾಖಲಾಗಿದೆ. ಇನ್ನುಳಿದಂತೆ ಜಮ್ಮು ನಗರದಲ್ಲಿ 9 ಡಿಗ್ರಿ ಸೆಲ್ಸಿಯಸ್ ತಾಪಮಾನ, ಕತ್ರಾದಲ್ಲಿ 9.6, ಬಟೋಟೆ ನಗರದಲ್ಲಿ 6.2, ಬನಿಹಾಲ್​​ನಲ್ಲಿ 5.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ಇದನ್ನೂ ಓದಿ: ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಪುತ್ರನೂ ಹಗರಣದಲ್ಲಿ ಭಾಗಿ: ಜಾರಿ ನಿರ್ದೇಶನಾಲಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.