ETV Bharat / bharat

12 ಭಾರತೀಯ ಮೀನುಗಾರರ ಬಂಧಿಸಿದ ಶ್ರೀಲಂಕಾ ನೌಕಾಪಡೆ - Sri Lankan navy

ಸಮುದ್ರ ಗಡಿ ಉಲ್ಲಂಘನೆಯ ಆರೋಪದ ಮೇಲೆ ಭಾರತೀಯ ಮೀನುಗಾರರನ್ನು ಲಂಕಾ ನೌಕಾಪಡೆ ಬಂಧಿಸಿದೆ.

sri-lankan-navy-arrests-12-indian-fishermen
12 ಭಾರತೀಯ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ
author img

By

Published : Apr 3, 2022, 10:06 AM IST

ರಾಮೇಶ್ವರಂ: ಸಮುದ್ರ ಗಡಿ ದಾಟಿ ಶ್ರೀಲಂಕಾ ಪ್ರದೇಶದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಆರೋಪದಡಿ ತಮಿಳುನಾಡಿನ 12 ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದೆ ಎಂದು ಇಲ್ಲಿನ ಮೀನುಗಾರಿಕಾ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ. ಇದರ ಜೊತೆಗೆ ಒಂದು ದೋಣಿಯನ್ನೂ ವಶಪಡಿಸಿಕೊಳ್ಳಲಾಗಿದೆ. ಶನಿವಾರ ತಡರಾತ್ರಿ ಕಚ್ಚತೀವು ಬಳಿ ಮೀನುಗಾರಿಕೆಯಲ್ಲಿ ತೊಡಗಿದ್ದ ಮೀನುಗಾರರನ್ನು ಬಂಧಿಸಲಾಗಿದೆ.

ರಾಮನಾಥಪುರಂ ಸಂಸದ ಕೆ.ನವಾಸ್ ಕಣಿ, ಈ ವಿಷಯದ ಕುರಿತು ವಿದೇಶಾಂಗ ಸಚಿವಾಲಯವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮಾರ್ಚ್ 29ರಿಂದ ಸಮುದ್ರ ಗಡಿ ಉಲ್ಲಂಘನೆಯ ಆರೋಪದ ಮೇಲೆ ಭಾರತೀಯ ಮೀನುಗಾರರನ್ನು ಲಂಕಾ ನೌಕಾಪಡೆಯು ಬಂಧಿಸಿರುವುದು ಇದು ಮೂರನೇ ಪ್ರಕರಣವಾಗಿದೆ. ಮಂಗಳವಾರ ಮತ್ತು ಗುರುವಾರ ಒಟ್ಟು ಏಳು ಮೀನುಗಾರರನ್ನು ದೋಣಿಸಮೇತ ಬಂಧಿಸಲಾಗಿತ್ತು.

ಇದನ್ನೂ ಓದಿ: ಭಾರತ ತನ್ನ ಸೈನಿಕರನ್ನು ಶ್ರೀಲಂಕಾಕ್ಕೆ ಕಳುಹಿಸುತ್ತಿಲ್ಲ: ಹೈಕಮಿಷನ್‌ ಸ್ಪಷ್ಟನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.