ನವದೆಹಲಿ : ಯುವಕರಲ್ಲಿ ಯೋಗದ ಪ್ರಯೋಜನಗಳು ಮತ್ತು ಆಧ್ಯಾತ್ಮಿಕ ಹಿನ್ನೆಲೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಯೋಗವನ್ನು ಸ್ಪರ್ಧಾತ್ಮಕ ಕ್ರೀಡೆಯಾಗಿ ಕೇಂದ್ರ ಸರ್ಕಾರ ಘೋಷಿಸಿದೆ.
ಈ ಕುರಿತು ಆಯುಷ್ ಸಚಿವ ಶ್ರೀಪಾದ್ ಯೆಸ್ಸೊ ನಾಯಕ್ ಮತ್ತು ಯುವ ವ್ಯವಹಾರ ಮತ್ತು ಕ್ರೀಡಾ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಪ್ರಕಟಣೆ ಹೊರಡಿಸಿದ್ದಾರೆ. ಯೋಗದ ಸಂರಕ್ಷಣೆ, ಅಭಿವೃದ್ಧಿ ಮತ್ತು ಯೋಗವನ್ನು ಸ್ಪರ್ಧಾತ್ಮಕ ಕ್ರೀಡೆಯಾಗಿ ಉತ್ತೇಜಿಸುವ ಸಲುವಾಗಿ ರಾಷ್ಟ್ರೀಯ ಯೋಗಾಸನ ಕ್ರೀಡಾ ಫೆಡರೇಶನ್ ಅನ್ನು ಇತ್ತೀಚೆಗೆ ಸ್ಥಾಪಿಸಲಾಗಿದೆ.
ಭಾರತ ಸರ್ಕಾರದ ಫಿಟ್ ಇಂಡಿಯಾ ಚಳವಳಿ ಮೂಲಕ ಆರೋಗ್ಯಕರ ಅಭ್ಯಾಸವಾಗಿ ಯೋಗವನ್ನು ಸರ್ಕಾರ ಉತ್ತೇಜಿಸಿದೆ. ಅಂತಾರಾಷ್ಟ್ರೀಯ ಯೋಗ ದಿನ ಪ್ರಾರಂಭವಾದಾಗಿನಿಂದ ಯೋಗ ನಿರೀಕ್ಷೆಯನ್ನೂ ಮೀರಿ ಬೆಳವಣಿಗೆ ಕಂಡಿದೆ ಎಂದು ರಾಷ್ಟ್ರೀಯ ಯೋಗಾಸನ ಕ್ರೀಡಾ ಫೆಡರೇಶನ್ (ಎನ್ವೈಎಸ್ಎಫ್ವೈ) ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಹೇಳಿದೆ.