ETV Bharat / bharat

ರಾಜಸ್ಥಾನದಲ್ಲಿ ಬಿಜೆಪಿಗೆ ಅಧಿಕಾರ: ಆಧ್ಯಾತ್ಮಿಕ ನಾಯಕನಿಗೆ ಸಿಎಂ ಹುದ್ದೆ?

Rajasthan Assembly Elections Results 2023: ರಾಜಸ್ಥಾನ ಬಿಜೆಪಿಯಲ್ಲಿ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ಚರ್ಚೆ ಆರಂಭ. ಅಚ್ಚರಿಯ ರೀತಿಯಲ್ಲಿ ಅಲ್ವಾರ ಕ್ಷೇತ್ರದ ಸಂಸದ, ಆಧ್ಯಾತ್ಮಿಕ ನಾಯಕ ಮಹಂತ್​ ಬಾಲಕನಾಥ್​ ಅವರ ಹೆಸರು ಸಿಎಂ ಹುದ್ದೆಯ ರೇಸ್​ನಲ್ಲಿ ಮುನ್ನೆಲೆಗೆ ಬಂದಿದೆ.

Spiritual leader and Alwar MP, Mahant Balaknath top BJP contender for Rajasthan CM post
ಮರುಭೂಮಿ ರಾಜ್ಯದಲ್ಲಿ ಬಿಜೆಪಿಗೆ ಅಧಿಕಾರ: ರಾಜಸ್ಥಾನ ಸಿಎಂ ಗದ್ದುಗೆಗೆ ಆಧ್ಯಾತ್ಮಿಕ ನಾಯಕ?
author img

By ETV Bharat Karnataka Team

Published : Dec 3, 2023, 1:24 PM IST

Updated : Dec 3, 2023, 2:11 PM IST

ಜೈಪುರ(ರಾಜಸ್ಥಾನ): ಮರುಭೂಮಿ ರಾಜ್ಯ ರಾಜಸ್ಥಾನದಲ್ಲಿ ಮೂರು ದಶಕಗಳ ಅಧಿಕಾರ ಬದಲಾವಣೆಯ ವಾಡಿಕೆ ಮುಂದುವರೆದಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಅಧಿಕಾರ ಕಸಿದುಕೊಂಡಿದ್ದ ಕಾಂಗ್ರೆಸ್​, ಈ ಬಾರಿ ಮರಳಿ ಕೇಸರಿ ಪಕ್ಷಕ್ಕೆ ಅಧಿಕಾರ ಹಸ್ತಾಂತರಿಸಲು ಸಜ್ಜಾಗಿದೆ. ಇದರ ನಡುವೆ ಬಿಜೆಪಿಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯ ಚರ್ಚೆ ಶುರುವಾಗಿದೆ.

ರಾಜಸ್ಥಾನ ಸಿಎಂ ಗದ್ದುಗೆಗೆ ಹಲವು ಲೆಕ್ಕಾಚಾರ ನಡೆಯುತ್ತಿದೆ. ಅಲ್ವಾರ ಕ್ಷೇತ್ರದ ಸಂಸದ, ಆಧ್ಯಾತ್ಮಿಕ ನಾಯಕರೂ ಆಗಿರುವ ಮಹಂತ್​ ಬಾಲಕನಾಥ್​ ಅವರ ಹೆಸರು ಸಿಎಂ ಹುದ್ದೆಯ ರೇಸ್​ನಲ್ಲಿ ಚಾಲ್ತಿಯಲ್ಲಿದೆ. ಇವರ ಜೊತೆಗೆ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಮತ್ತು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಸಿಎಂ ಹುದ್ದೆಯ ಆಕಾಂಕ್ಷಿಗಳಾಗಿದ್ಧಾರೆ. ಈ ಹಿಂದೆ ಎರಡು ಬಾರಿ ಸಿಎಂ ಆಗಿ ಕಾರ್ಯ ನಿರ್ವಹಿಸಿರುವ ವಸುಂಧರಾ ರಾಜೆ ಮೂರನೇ ಬಾರಿಗೆ ಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ. ಅಲ್ಲದೇ, ಕೇಂದ್ರ ಸಚಿವೆಯಾಗಿಯೂ ಸೇವೆ ಸಲ್ಲಿಸಿರುವ ಅನುಭವ ಹೊಂದಿದ್ದಾರೆ. ಮತ್ತೊಂದೆಡೆ, ಶೇಖಾವತ್ ಅವರು 2014ರಿಂದ ಸಂಸದರಾಗಿದ್ದು, 2017ರಲ್ಲಿ ಕೇಂದ್ರ ಸಚಿವರಾಗಿ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: ರಾಜಸ್ಥಾನ ಫಲಿತಾಂಶ: ಬಹುಮತದ ಗಡಿ ದಾಟಿದ ಬಿಜೆಪಿ... ಗೆಹ್ಲೋಟ್​​​​​ಗೆ ಫಲ ನೀಡದ ಗ್ಯಾರಂಟಿ!

ರಾಜಸ್ಥಾನದ 200 ಕ್ಷೇತ್ರಗಳ ಪೈಕಿ 199 ಸ್ಥಾನಗಳ ಫಲಿತಾಂಶ ಹೊರಬರುತ್ತಿದೆ. ರಾಜ್ಯದಲ್ಲಿ ಅಧಿಕಾರಕ್ಕೇರಲು ಬೇಕಿರುವ ಮ್ಯಾಜಿಕ್​ ಸಂಖ್ಯೆ 100. ಈಗಾಗಲೇ 114 ಸ್ಥಾನಗಳಲ್ಲಿ ಮುನ್ನಡೆಯಲ್ಲಿರುವ ಬಿಜೆಪಿ ಅಧಿಕಾರಕ್ಕೇರಲು ಸಿದ್ಧತೆ ನಡೆಸುತ್ತಿದೆ. ಮತ್ತೊಂದೆಡೆ, ಆಡಳಿತಾರೂಢ ಕಾಂಗ್ರೆಸ್ 70 ಸ್ಥಾನಗಳಿಗೆ ಕುಸಿದಿದೆ. ಬಿಎಸ್​ಪಿ 2 ಸ್ಥಾನಗಳಲ್ಲಿ ಮುನ್ನಡೆ ಹೊಂದಿದ್ದು, ಉಳಿದಂತೆ 13 ಕ್ಷೇತ್ರಗಳಲ್ಲಿ ಇತರರು ಮುನ್ನಡೆಯಲ್ಲಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಿದ ನಂತರ ಬಿಜೆಪಿ ಮತ್ತು ಕಾಂಗ್ರೆಸ್ ಎರಡರಿಂದಲೂ 40ಕ್ಕೂ ಹೆಚ್ಚು ಜನರು ಬಂಡಾಯವಾಗಿ ಸ್ಪರ್ಧಿಸಿದ್ದರು.

ಬಿ.ಎಲ್.ಸಂತೋಷ್-ಬಾಲಕನಾಥ್ ಭೇಟಿ: ಮತ್ತೊಂದೆಡೆ, ಅಚ್ಚರಿಯ ರೀತಿಯಲ್ಲಿ ಸಿಎಂ ಹುದ್ದೆಗೆ ಅಲ್ವಾರ ಕ್ಷೇತ್ರದ ಸಂಸದ ಮಹಂತ್​ ಬಾಲಕನಾಥ್​ ಹೆಸರು ಮುನ್ನೆಲೆಗೆ ಬಂದಿದೆ. ಇದಕ್ಕೆ ಪುಷ್ಠಿ ನೀಡುವಂತೆ ಚುನಾವಣಾ ಫಲಿತಾಂಶಕ್ಕೂ ಒಂದು ದಿನ ಮುಂಚಿತವಾಗಿ, ಶನಿವಾರ ಬಾಲಕನಾಥ್ ಅವರು ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪಕ್ಷದ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಭೇಟಿ ಮಾಡಿದ್ದರು.

ಈ ಕುರಿತು ಪ್ರತಿಕ್ರಿಯಿಸಿದ್ದ ಅವರು, ''ಇದೊಂದು ಸೌಜನ್ಯದ ಭೇಟಿ'' ಎಂದಷ್ಟೇ ಹೇಳಿದ್ದರು. ಸಿಎಂ ಹುದ್ದೆಗೆ ಸಂಬಂಧಿಸಿದಂತೆ ಮಾತನಾಡಿ, ''ಮುಖ್ಯಮಂತ್ರಿ ವಿಚಾರವಾಗಿ ಬಿಜೆಪಿಗೆ ನಮ್ಮ ಪ್ರಧಾನಿ ಅವರೇ ಮುಖ್ಯ. ಅವರ ನಾಯಕತ್ವದಲ್ಲಿ ನಾವು ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ. ಸಿಎಂ ಯಾರಾಗಬೇಕೆಂಬುದರ ಬಗ್ಗೆಯೂ ಪಕ್ಷವು ನಿರ್ಧಾರ ತೆಗೆದುಕೊಳ್ಳುತ್ತದೆ. ನಾನು ಸದ್ಯ ಸಂಸದನಾಗಿ ಸಂತೋಷವಾಗಿದ್ದೇನೆ. ಸಮಾಜ ಸೇವೆ ಮಾಡುವ ಇಚ್ಛೆ ಹೊಂದಿದ್ದು, ಅದರಲ್ಲಿ ನನಗೆ ತೃಪ್ತಿ ಇದೆ'' ಎಂದು ತಿಳಿಸಿದ್ದರು.

ಯಾರು ಈ ಬಾಲಕನಾಥ್?: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಂತೆ ಬಾಲಕನಾಥ್ ಕೂಡ ನಾಥ ಸಮುದಾಯದಿಂದ ಬಂದವರು. ಅಲ್ವಾರದಲ್ಲಿ ಇವರು ಅಪಾರ ಬೆಂಬಲ ಮತ್ತು ಅನುಯಾಯಿಗಳನ್ನು ಹೊಂದಿದ್ದಾರೆ. ಕೇವಲ 39 ವಯಸ್ಸಿನ ಬಾಲಕನಾಥ್ ಅವರು ಅಲ್ವಾರ ಕ್ಷೇತ್ರದಲ್ಲಿ 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ, ಕಾಂಗ್ರೆಸ್​ ಅಭ್ಯರ್ಥಿ ವಿರುದ್ಧ ಸುಮಾರು 3 ಲಕ್ಷ ಮತಗಳಿಂದ ಗೆದ್ದಿದ್ದಾರೆ.

ಇವರು ಬಾಲ್ಯದ ದಿನಗಳಲ್ಲೇ ಎಂದರೆ ತಮ್ಮ 6ನೇ ವಯಸ್ಸಿನಲ್ಲಿ ಸನ್ಯಾಸ ತೆಗೆದುಕೊಂಡಿದ್ದಾರೆ. ತಮ್ಮನ್ನು ಸಂತರಾಗಿ ಮಾಡುವ ನಿರ್ಧಾರವು ಕುಟುಂಬಸ್ಥರೇ ತೆಗೆದುಕೊಂಡಿದ್ದು ಎಂದು ಈ ಹಿಂದೆ ಹೇಳಿರುವ ಬಾಲಕನಾಥ್, ಸಮಾಜಕ್ಕೆ ಸದಾ ಸೇವೆ ಸಲ್ಲಿಸಲು ಬಯಸುವುದಾಗಿ ತಿಳಿಸಿದ್ದರು.

ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಪ್ರಚಂಡ ಬಹುಮತ: ಕೇಸರಿ ಪಾಳಯದ ಕೈ ಹಿಡಿದ 'ಲಾಡ್ಲಿ ಬೆಹ್ನಾ' ಯೋಜನೆ!

Last Updated : Dec 3, 2023, 2:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.