ಹೈದರಾಬಾದ್: ಟಿಆರ್ಎಸ್ ಪಕ್ಷದ ಸಂಸದ ಸಂತೋಷ್ ಕುಮಾರ್ ಪ್ರಾರಂಭಿಸಿದ ಹಸಿರು ಅಭಿಯಾನದ 'ಗ್ರೀನ್ ಇಂಡಿಯಾ ಚಾಲೆಂಜ್' 5.0 ಆವೃತ್ತಿಯನ್ನು ಸದ್ಗುರು ಜಗ್ಗಿ ವಾಸುದೇವ್ ಅವರು ಜೂನ್ 16ರಂದು ನಗರದಲ್ಲಿ ಬಿಡುಗಡೆಗೊಳಿಸಲಿದ್ದಾರೆ.
ಸೇವ್ ಸಾಯಿಲ್ ಅಭಿಯಾನದ ಕುರಿತು ಜಾಗತಿಕವಾಗಿ ಜನರಿಗೆ ಜಾಗೃತಿ ಮೂಡಿಸಲು ಬೈಕ್ಗಳ ಮೂಲಕ ಪ್ರಚಾರ ನಡೆಸಿದ್ದು, ಪ್ರಚಾರವು ಜೂನ್ 15 ರಂದು ರಾಜ್ಯ ರಾಜಧಾನಿ ತಲುಪಲಿದೆ. ಜೂನ್ 16 ರಂದು ಸಮೀಪದ ಗೊಲ್ಲೂರು ಅರ್ಬನ್ ಫಾರೆಸ್ಟ್ನಲ್ಲಿ ಗ್ರೀನ್ ಇಂಡಿಯಾ ಅಭಿಯಾನದ ಐದನೇ ಆವೃತ್ತಿ ಪ್ರಾರಂಭಿಸಲಿದ್ದು, ಗ್ರೀನ್ ಇಂಡಿಯಾ ಅನುಯಾಯಿಗಳು ಹಾಗೂ ಸದ್ಗುರು ಅಭಿಮಾನಿಗಳು ಸೇರಿದಂತೆ ನಗರದಲ್ಲಿ 10,000 ಸಸಿಗಳನ್ನು ನೆಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಮಹತ್ವಾಕಾಂಕ್ಷಿ ಯೋಜನೆ ಆಗಿರುವ 'ಹರಿತಹರಂ' ಅಭಿಯಾನದಿಂದ ಪ್ರೇರಿತರಾಗಿ ಸಂತೋಷ್ ಕುಮಾರ್ ಅವರು 2018 ರಲ್ಲಿ 'ಹಸಿರು ಭಾರತ' ಅಭಿಯಾನ ಪ್ರಾರಂಭಿಸಿದ್ದಾರೆ. ಒಬ್ಬ ವ್ಯಕ್ತಿ ಮೂರು ಸಸಿಗಳನ್ನು ನೆಟ್ಟು ಇತರ ಮೂವರಿಗೆ ಸಸಿಗಳನ್ನು ನೆಡಲು ಒತ್ತಾಯಿಸುವುದು 'ಗ್ರೀನ್ ಇಂಡಿಯಾ ಚಾಲೆಂಜ್'ನ ವಿಶೇಷತೆ. ಕೋಟಿಗಟ್ಟಲೆ ಸಸಿಗಳನ್ನು ನೆಡುವುದು, ಸಂರಕ್ಷಣೆ ಮತ್ತು ಅರಣ್ಯ ಪ್ರದೇಶಗಳನ್ನು ದತ್ತು ತೆಗೆದುಕೊಳ್ಳುವ ಮೂಲಕ ಹಸಿರನ್ನು ಉತ್ತೇಜಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.
ಸಂಸದ ಸಂತೋಷ್ ಕುಮಾರ್ ಮತ್ತಿತರರ ಸಮ್ಮುಖದಲ್ಲಿ ನಾಳೆ ಸದ್ಗುರು ಸಸಿಗಳನ್ನು ನೆಡಲಿದ್ದಾರೆ. ಕಾರ್ಯಕ್ರಮಕ್ಕೆ ತೆಲಂಗಾಣ ಅರಣ್ಯ ಸಚಿವ ಎ ಇಂದ್ರಕರನ್ ರೆಡ್ಡಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಕಾರ್ಯಕ್ರಮವನ್ನು ತೆಲಂಗಾಣ ಅರಣ್ಯ ಇಲಾಖೆ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದೆ.
ಇದನ್ನು ಓದಿ:ಅಷ್ಟವಕ್ರಾಸನದಲ್ಲಿ ಹೊಸ ದಾಖಲೆ ನಿರ್ಮಿಸಿದ ವೈದ್ಯೆ: ಗಿನ್ನಿಸ್ ರೆಕಾರ್ಡ್ ಸೇರಲು ಸಜ್ಜು