ETV Bharat / bharat

ಮಗುವಿನ ಚಿಕಿತ್ಸೆಗೆ ಬೇಕಿದೆ ₹16 ಕೋಟಿ.. ದಾನಿಗಳೇ ನೀವೂ ನೆರವಾಗಿ.. - Spinal Muscular Atrophy (SMA) Disease

ಈವರೆಗೆ ಸುಮಾರು 1.40 ಕೋಟಿ ಹಣ ಸಂಗ್ರಹವಾಗಿದ್ದು, ಮಗನ ಸೇವೆಗಾಗಿ ತಾಯಿ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಉಳಿದ ಹಣಕ್ಕಾಗಿ ದಾನಗಳಿಂದ, ಸಂಘ-ಸಂಸ್ಥೆಗಳಿಂದ ಮತ್ತು ಸರ್ಕಾರದಿಂದ ಸಹಾಯ ಕೋರಿದ್ದಾರೆ..

ಮಗುವಿನ ಚಿಕಿತ್ಸೆಗೆ ಬೇಕಿದೆ 16 ಕೋಟಿ...ದಾನಿಗಳೇ ನೀವು ನೇರವಾಗಿ
spinal-muscular-atrophy-in-a-2-year-old-child
author img

By

Published : Feb 14, 2021, 10:03 PM IST

ಹೈದರಾಬಾದ್ ​: ಬೆನ್ನುಮೂಳೆಯ ಸ್ನಾಯು ಕ್ಷೀಣತೆ (ಎಸ್‌ಎಂಎ) ರೋಗದಿಂದ ಬಳಲುತ್ತಿರುವ ತಮ್ಮ 2 ವರ್ಷದ ಮಗುವಿಗೆ (ಜೊಲ್ಗೆನ್ಸ್ಮಾ) ಚಿಕಿತ್ಸೆ ಕೊಡಿಸಲು ಪೋಷಕರಾದ ಯೋಗೇಶ್ ಗುಪ್ತಾ ಮತ್ತು ರೂಪಾಲ್ ಗುಪ್ತಾ ಅವರು ಸಾಕಷ್ಟು ಶ್ರಮಪಡುತ್ತಿದ್ದಾರೆ.

ಇವರು ಮೂಲತಃ ಛತ್ತೀಸ್​ಗಢದವರಾಗಿದ್ದು, ಕಳೆದ 10 ವರ್ಷಗಳಿಂದ ಹೈದರಾಬಾದ್​ನ ನಲ್ಲಗಂಡಲ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. 2018ರಲ್ಲಿ ಅವರು ಆಯನ್ಶ್‌ನಿಗೆ ಜನ್ಮ ನೀಡಿದ್ದಾರೆ. ದುರದೃಷ್ಟವೆಂದರೆ ಮಗು ಹುಟ್ಟಿದಾಗಿನಿಂದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದೆ.

ಈ ಕಾಯಿಲೆಯನ್ನ ಗುಣಪಡಿಸಬೇಕಾದರೆ ಜೊಲ್ಗೆನ್ಸ್ಮಾ ಒನ್-ಟೈಮ್ ಜೀನ್ ರಿಪ್ಲೇಸ್ಮೆಂಟ್ ಥೆರಪಿಯಿಂದ ಮಾತ್ರ ಸಾಧ್ಯ ಎಂದು ವೈದ್ಯರು ಸೂಚಿಸಿದ್ದಾರೆ.

ಈ ಚಿಕಿತ್ಸೆ ಅಮೆರಿಕಾದಲ್ಲಿ ಲಭ್ಯವಿದ್ದು, ಪ್ರತಿ ಇಂಜೆಕ್ಷನ್‌ಗೆ 16 ಕೋಟಿ ರೂ. ತಗುಲಲಿದೆ. ಚಿಕಿತ್ಸೆಗಾಗಿ impactguru.com ಮೂಲಕ ಸುಮಾರು 10 ದಿನಗಳವರೆಗೆ ಹಣ ಸಂಗ್ರಹಕ್ಕಾಗಿ ಪ್ರಯತ್ನಿಸಿದ್ದಾರೆ.

ಈವರೆಗೆ ಸುಮಾರು 1.40 ಕೋಟಿ ಹಣ ಸಂಗ್ರಹವಾಗಿದ್ದು, ಮಗನ ಸೇವೆಗಾಗಿ ತಾಯಿ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಉಳಿದ ಹಣಕ್ಕಾಗಿ ದಾನಗಳಿಂದ, ಸಂಘ-ಸಂಸ್ಥೆಗಳಿಂದ ಮತ್ತು ಸರ್ಕಾರದಿಂದ ಸಹಾಯ ಕೋರಿದ್ದಾರೆ.

ಈ ಲಿಂಕ್ ಕ್ಲಿಕ್​ ಮಾಡುವುದರ ಮೂಲಕ ನೀವು ನೆರವಾಗಿ impactguru.com

ETV Bharat Logo

Copyright © 2025 Ushodaya Enterprises Pvt. Ltd., All Rights Reserved.