ETV Bharat / bharat

ಸ್ಪೈಸ್‌ ಜೆಟ್‌ ವಿಮಾನ ಇಳಿಕೆಯ ವೇಳೆ ಭಾರಿ ಟರ್ಬ್ಯುಲೆನ್ಸ್‌; ಪ್ರಯಾಣಿಕರಿಗೆ ಗಾಯ - Mumbai Durgapur flight

ಮುಂಬೈನಿಂದ ಪಶ್ಚಿಮ ಬಂಗಾಳದ ದುರ್ಗಾಪುರಕ್ಕೆ ಸ್ಪೈಸ್‌ ಜೆಟ್‌ ವಿಮಾನದಲ್ಲಿ ಪ್ರಯಾಣಿಕರು ಬಂದಿಳಿಯುತ್ತಿದ್ದಂತೆ ತಕ್ಷಣ ವೈದ್ಯಕೀಯ ನೆರವು ನೀಡಲಾಗಿದೆ ಎಂದು ವಿಮಾನಯಾನ ಸಂಸ್ಥೆಯ ವಕ್ತಾರರು ಮಾಹಿತಿ ನೀಡಿದರು.

ಸ್ಪೈಸ್‌ ಜೆಟ್‌
ಸ್ಪೈಸ್‌ ಜೆಟ್‌
author img

By

Published : May 2, 2022, 9:08 AM IST

Updated : May 2, 2022, 12:10 PM IST

ದುರ್ಗಾಪುರ್‌( ಪಶ್ಚಿಮ ಬಂಗಾಳ): ಮುಂಬೈ- ದುರ್ಗಾಪುರ್‌ ನಡುವೆ ಸಂಚರಿಸುತ್ತಿದ್ದ ಸ್ಪೈಸ್ ಜೆಟ್‌ ಬೋಯಿಂಗ್‌ ಬಿ737 ವಿಮಾನಕ್ಕೆ ಭಾರಿ ಪ್ರಮಾಣದ ಟರ್ಬ್ಯೂಲೆನ್ಸ್‌( ವಾತಾವರಣದ ಪ್ರಕ್ಷುಬ್ಧತೆ) ಎದುರಾಗಿದೆ. ಈ ಸಂದರ್ಭದಲ್ಲಿ ಕೆಲವು ಪ್ರಯಾಣಿಕರಿಗೆ ಗಾಯಗಳಾಗಿದೆ ಎಂದು ವಿಮಾನಯಾನ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ. ಆದಾಗ್ಯೂ, ವಿಮಾನವು ದುರ್ಗಾಪುರ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್‌ ಆಗಿದೆ. ಪ್ರಯಾಣಿಕರಿಗೆ ತಕ್ಷಣ ವೈದ್ಯಕೀಯ ನೆರವು ನೀಡಲಾಗಿದೆ ಎಂದು ಅವರು ಹೇಳಿದರು. ದುರದೃಷ್ಟಕರ ಘಟನೆಗೆ ವಿಷಾದ ವ್ಯಕ್ತಪಡಿಸಿದ ಸ್ಪೈಸ್ ಜೆಟ್‌, ಗಾಯಾಳುಗಳಿಗೆ ಸೂಕ್ತ ವೈದ್ಯಕೀಯ ನೆರವು ಒದಗಿಸುವ ಭರವಸೆ ನೀಡಿದೆ.

ಟರ್ಬ್ಯೂಲೆನ್ಸ್ ಎಂದರೇನು?: ಶಕ್ತಿಯುತ ಗಾಳಿ-ಮೋಡದ ಚಲನೆಯನ್ನು ವಿಮಾನ ದಾಟಿಕೊಂಡು ಮುನ್ನುಗ್ಗುವಾಗ ಉಂಟಾಗುವ ಬೆಳವಣಿಗೆ. ಈ ಸಂದರ್ಭದಲ್ಲಿ ಪ್ರಯಾಣಿಕರಿಗೆ ವಿಮಾನ ನಡುಗಿದ ಅನುಭವ ಉಂಟಾಗುತ್ತದೆ. ಬಹುತೇಕ ವಾಣಿಜ್ಯ ವಿಮಾನಗಳು ಇಂಥ ಪ್ರಾಕೃತಿಕ ತೊಂದರೆಗಳನ್ನು ತಪ್ಪಿಸಲು ಸಾಕಷ್ಟು ಎತ್ತರದಲ್ಲಿ ಹಾರಾಟ ನಡೆಸುತ್ತವೆ. ಆದರೆ, ಕೆಲವು ಬಾರಿ ಎಂಥದ್ದೇ ಎತ್ತರದಲ್ಲೂ ಈ ರೀತಿಯ ಗಾಳಿ-ಮೋಡದ ಪ್ರಕ್ಷುಬ್ಧತೆ ಕಂಡುಬರುತ್ತದೆ. ವಿಮಾನವು ಸಾಮಾನ್ಯವಾಗಿ ಕಡಿಮೆ ತೀವ್ರತೆಯಿಂದ ಹೆಚ್ಚು ತೀವ್ರತೆಯ ಟರ್ಬ್ಯುಲೆನ್ಸ್‌ಗಳನ್ನು ಎದುರಿಸುತ್ತದೆ.

ಸ್ಪೈಸ್‌ ಜೆಟ್‌ ವಿಮಾನ ಇಳಿಕೆಯ ವೇಳೆ ಭಾರಿ ಟರ್ಬ್ಯುಲೆನ್ಸ್‌; ಪ್ರಯಾಣಿಕರಿಗೆ ಗಾಯ

ಇದನ್ನೂ ಓದಿ: ಕ್ರೌರ್ಯ! ಮರದ ರೆಂಬೆಗೆ ತಲೆಕೆಳಗಾಗಿ ನೇತುಹಾಕಿ ಯುವಕನಿಗೆ ಥಳಿತ- ವಿಡಿಯೋ

Last Updated : May 2, 2022, 12:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.