ಕಾಜಿರಂಗ (ಅಸ್ಸೋಂ): ಅಸ್ಸೋಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ವೇಗವಾಗಿ ಬಂದ ಟ್ರಕ್ವೊಂದಕ್ಕೆ ಘೇಂಡಾಮೃಗ ಗುದ್ದಿ ಗಾಯಗೊಂಡ ಘಟನೆ ನಡೆದಿದೆ. ಅದೃಷ್ಟವತಾಶ್ ಈ ಅಪಘಾತದಲ್ಲಿ ಘೇಂಡಾಮೃಗ ಬದುಕುಳಿದಿದೆ. ಇತ್ತ, ಟ್ರಕ್ ಚಾಲಕನಿಗೆ ದಂಡ ವಿಧಿಸಲಾಗಿದೆ.
ರಾಷ್ಟ್ರೀಯ ಉದ್ಯಾನವನದ ಹಲ್ದಿಬರಿಯಲ್ಲಿ ಕಾಡಿನಿಂದ ರಸ್ತೆಗೆ ಘೇಂಡಾಮೃಗ ಬಂದಿದೆ. ಈ ವೇಳೆ ವೇಗವಾಗಿ ಟ್ರಕ್ವೊಂದು ಬಂದಿದ್ದು, ಅದಕ್ಕೆ ಗುದ್ದಿದೆ. ಇದರಿಂದ ಘೇಂಡಾಮೃಗದ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ರಸ್ತೆಯಲ್ಲೇ ಕುಸಿದಿದೆ. ನಂತರ ಪ್ರಾಣ ಭಯದಲ್ಲೇ ಮತ್ತೆ ಕಾಡಿನೊಳಗೆ ಓಡಿದೆ. ಇದರ ದೃಶ್ಯಗಳು ಅರಣ್ಯ ಇಲಾಖೆಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ.
ಈ ವಿಡಿಯೋ ಹಂಚಿಕೊಂಡು ಟ್ವೀಟ್ ಮಾಡಿರುವ ಅಸ್ಸೋಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಘೇಂಡಾಮೃಗಗಳು ನಮ್ಮ ವಿಶೇಷ ಸ್ನೇಹಿತರು. ನಾವು ಅವುಗಳ ಸ್ಥಳದಲ್ಲಿ ಯಾವುದೇ ಉಲ್ಲಂಘನೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ, ಹಲ್ದಿಬರಿಯಲ್ಲಿ ನಡೆದಿರುವುದು ದುರದೃಷ್ಟಕರ ಘಟನೆ. ಘೇಂಡಾಮೃಗ ಬದುಕುಳಿದಿದೆ. ವಾಹನವನ್ನು ತಡೆದು ದಂಡ ವಿಧಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
-
Rhinos are our special friends; we’ll not allow any infringement on their space.
— Himanta Biswa Sarma (@himantabiswa) October 9, 2022 " class="align-text-top noRightClick twitterSection" data="
In this unfortunate incident at Haldibari the Rhino survived; vehicle intercepted & fined. Meanwhile in our resolve to save animals at Kaziranga we’re working on a special 32-km elevated corridor. pic.twitter.com/z2aOPKgHsx
">Rhinos are our special friends; we’ll not allow any infringement on their space.
— Himanta Biswa Sarma (@himantabiswa) October 9, 2022
In this unfortunate incident at Haldibari the Rhino survived; vehicle intercepted & fined. Meanwhile in our resolve to save animals at Kaziranga we’re working on a special 32-km elevated corridor. pic.twitter.com/z2aOPKgHsxRhinos are our special friends; we’ll not allow any infringement on their space.
— Himanta Biswa Sarma (@himantabiswa) October 9, 2022
In this unfortunate incident at Haldibari the Rhino survived; vehicle intercepted & fined. Meanwhile in our resolve to save animals at Kaziranga we’re working on a special 32-km elevated corridor. pic.twitter.com/z2aOPKgHsx
ಇದೇ ವೇಳೆ ಕಾಜಿರಂಗದಲ್ಲಿ ಪ್ರಾಣಿಗಳನ್ನು ಉಳಿಸುವುದು ನಮ್ಮ ಸಂಕಲ್ಪ. ಹೀಗಾಗಿಯೇ 32 ಕಿಮೀ ವಿಶೇಷ ಎಲಿವೇಟೆಡ್ ಕಾರಿಡಾರ್ ನಿರ್ಮಿಸಲು ಕಾರ್ಯೋನ್ಮುಖರಾಗಿದ್ದೇವೆ ಎಂದೂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಮ್ಮ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಚಾಲಕನಿಗೆ 14 ಸಾವಿರ ರೂಪಾಯಿ ದಂಡ: ಅರಣ್ಯ ಇಲಾಖೆಯು ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಬಾಗೋರಿ ಪೊಲೀಸರ ಸಹಕಾರದೊಂದಿಗೆ ಟ್ರಕ್ಅನ್ನು ವಶಪಡಿಸಿಕೊಂಡಿದೆ. ಅಲ್ಲದೇ, ಟ್ರಕ್ನ ಚಾಲಕನಿಗೆ ಸಾರಿಗೆ ಇಲಾಖೆಯಿಂದ 9 ಸಾವಿರ ರೂ. ಹಾಗೂ ಅರಣ್ಯ ಇಲಾಖೆಯಿಂದ 5 ಸಾವಿರ ರೂ. ದಂಡ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.
ಇದೇ ಸೆಪ್ಟೆಂಬರ್ 22ರಂದು ಸದ್ಗುರು ವಾಸುದೇವ್ ಅವರೊಂದಿಗೆ ಹಿಮಂತ ಬಿಸ್ವಾ ಶರ್ಮಾ, ಕಾಜಿರಂಗ ರಾಷ್ಟ್ರೀಯ ಉದ್ಯಾನವನವನ್ನು ಪ್ರವಾಸಿಗರಿಗಾಗಿ ಮುಕ್ತಗೊಳಿಸಿದ್ದರು. ಮೂರು ಘೇಂಡಾಮೃಗಗಳ ಪ್ರತಿಮೆಗಳನ್ನು ಸಹ ಅನಾವರಣಗೊಳಿಸಿದ್ದರು.
ಇದನ್ನೂ ಓದಿ: ಮೇಕೆಗಳ ಕದ್ದ ಶಂಕೆ ಮೇಲೆ ಜಗಳ ಮಾಡಿದ ರೈತನಿಗೆ ಗುಂಡಿಕ್ಕಿ ಕೊಲೆ