ETV Bharat / bharat

ರಸ್ತೆ ಬದಿ ನಿಂತು ಸೆಲ್ಫಿ: ಎಸ್​ಯುವಿ ಕಾರು ಡಿಕ್ಕಿಯಾಗಿ ಇಬ್ಬರು ಸಾವು - ETv Bharat kannada news

ರಸ್ತೆ ಬದಿಯಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದವರಿಗೆ ಎಸ್​ಯುವಿ ಕಾರು ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಅಸುನೀಗಿದ್ದಾರೆ.

accident
ಅಪಘಾತ
author img

By

Published : Jan 17, 2023, 2:31 PM IST

ಬಹ್ರೈಚ್ (ಉತ್ತರ ಪ್ರದೇಶ) : ರಸ್ತೆಯಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಎಸ್​ಯುವಿ ವಾಹನವೊಂದು ಡಿಕ್ಕಿ ಹೊಡೆದು 8 ವರ್ಷದ ಬಾಲಕ ಮತ್ತು ಆತನ ಚಿಕ್ಕಪ್ಪ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಬಹ್ರೈಚ್ ಎಂಬಲ್ಲಿ ನಡೆದಿದೆ. ಮೃತರನ್ನು ಕೊತ್ವಾಲಿಯ ದೇಹತ್​ ಮೂಲದ ರವಿ (30) ಮತ್ತು ಪುತ್ರ ಯಶ್​ ಎಂದು ಗುರುತಿಸಲಾಗಿದೆ.

ಮಕರ ಸಂಕ್ರಾಂತಿ ಹಬ್ಬದ ಸಂಜೆ ರವಿ, ಮಗ ಯಶ್ ಮತ್ತು ಕಿರಿ ಸಹೋದರ ಗೋಲು ಎಂಬ ಮೂವರು ಚಲ್ಹರಿ ಘಾಟ್‌ಬ್ರಿಡ್ಜ್ ಬಳಿ ಬಂದಿದ್ದಾರೆ. ಜನನಿಬಿಡ ಪ್ರದೇಶವಾಗಿರುವ ಈ ತಾಣದಲ್ಲಿ ಬೈಕ್ ಅ​ನ್ನು ರಸ್ತೆಬದಿಯಲ್ಲಿ ನಿಲ್ಲಿಸಿ ಇಬ್ಬರು ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಇದೇ ವೇಳೆ ಅತಿವೇಗವಾಗಿ ಬಂದ ಎಸ್​ಯುವಿ ವಾಹನ ಇವರಿಗೆ ಗುದ್ದಿದೆ. ಗಾಯಾಳುಗಳನ್ನು ತಕ್ಷಣ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

ಇದನ್ನೂ ಓದಿ :ಬೈಕ್​ಗೆ ಬಸ್ ಡಿಕ್ಕಿ: ಪತ್ನಿ ಮುಂದೆಯೇ ಪ್ರಾಣ ಬಿಟ್ಟ ಪತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.