ETV Bharat / bharat

ಸಂಸತ್ತಿನ ವಿಶೇಷ ಅಧಿವೇಶನ; ಏನಿದರ ವಿಶೇಷತೆ? ಇಲ್ಲಿದೆ ಮಾಹಿತಿ - ವಿಶೇಷ ಅಧಿವೇಶನವು ಐದು ಕಲಾಪಗಳನ್ನು

ಸೆಪ್ಟೆಂಬರ್​ 18 ರಿಂದ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದ ಹಿನ್ನೆಲೆಯಲ್ಲಿ ವಿಶೇಷ ಅಧಿವೇಶನಗಳ ವಿಶೇಷತೆಯೇನು ಎಂಬ ಬಗ್ಗೆ ರಾಜ್ಯಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ, ನಿವೃತ್ತ ಐಎಎಸ್ ಅಧಿಕಾರಿ ವಿವೇಕ್ ಕೆ ಅಗ್ನಿಹೋತ್ರಿಯವರ ಅಂಕಣ ಇಲ್ಲಿದೆ.

Special session of Parliament Whats so special Heres the information
ಸಂಸತ್ತಿನ ವಿಶೇಷ ಅಧಿವೇಶನ; ಏನದರ ವಿಶೇಷತೆ? ಇಲ್ಲಿದೆ ಮಾಹಿತಿ
author img

By ETV Bharat Karnataka Team

Published : Sep 3, 2023, 5:42 PM IST

ನವದೆಹಲಿ : ಆಗಸ್ಟ್​ 31, 2023ರಂದು I.N.D.I.A. ಮೈತ್ರಿಕೂಟದ ಮೂರನೇ ಸಭೆ ಮುಂಬೈನಲ್ಲಿ ಆರಂಭವಾಗಿತ್ತು. ಲೋಕಸಭೆ ಚುನಾವಣೆಗೆ ತನ್ನ ಕಾರ್ಯತಂತ್ರ ಏನಿರಬೇಕೆಂಬ ಬಗ್ಗೆ ಜೋರಾದ ಚರ್ಚೆಗಳು ಈ ಸಭೆಯಲ್ಲಿ ನಡೆಯುತ್ತಿದ್ದವು. ಅಂದು ದೇಶಾದ್ಯಂತ ರಕ್ಷಾಬಂಧನ ಹಬ್ಬವು ಸಂಪ್ರದಾಯ ಹಾಗೂ ಸಡಗರದಿಂದ ನಡೆದಿತ್ತು. ಏತನ್ಮಧ್ಯೆ ಆಶ್ಚರ್ಯಕರ ಘೋಷಣೆಯೊಂದನ್ನು ಮಾಡಿದ ಕೇಂದ್ರ ಸರ್ಕಾರ, ಸೆಪ್ಟೆಂಬರ್ 18 ರಿಂದ 22 ರವರೆಗೆ ಸಂಸತ್ತಿನ ವಿಶೇಷ ಅಧಿವೇಶನ ನಡೆಸಲಿರುವುದಾಗಿ ಘೋಷಿಸಿತು. ನವದೆಹಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆ ಮುಕ್ತಾಯಗೊಳ್ಳುವ ಕೆಲವೇ ದಿನಗಳಲ್ಲಿ ಸಂಸತ್ತಿನ ಅಧಿವೇಶನ ಕರೆಯಲಾಗಿರುವುದು ಕೂಡ ಗಮನಾರ್ಹ.

ವಿಶೇಷ ಅಧಿವೇಶನವು ಐದು ಕಲಾಪಗಳನ್ನು ಹೊಂದಿರುತ್ತದೆ ಮತ್ತು ಅಮೃತ್ ಕಾಲ (ಸ್ವಾತಂತ್ರ್ಯದ 100 ವರ್ಷಗಳವರೆಗಿನ ಕಾಲು ಶತಮಾನ) ನಡುವೆ, ಫಲಪ್ರದ ಚರ್ಚೆಗಳು ಮತ್ತು ಸಂವಾದಗಳನ್ನು ನಡೆಸಲು ಸರ್ಕಾರ ಎದುರು ನೋಡುತ್ತಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವರು ಹೇಳಿದ್ದಾರೆ.

ಸಂಸತ್ತಿನ ವಿಶೇಷ ಅಧಿವೇಶನ ಕರೆದಿರುವುದು ಇದೇ ಮೊದಲ ಬಾರಿ ಏನಲ್ಲ. ವಿಶೇಷ ಅಧಿವೇಶನ ಕರೆದಿರುವುದು ಅಸಾಮಾನ್ಯ ಆದರೂ ಇದು ಅಸಾಂವಿಧಾನಿಕವಲ್ಲ. ಭಾರತದ ಸಂವಿಧಾನದ 85 ನೇ ವಿಧಿಯ ಪ್ರಕಾರ, ರಾಷ್ಟ್ರಪತಿಗಳು ಕಾಲಕಾಲಕ್ಕೆ ಸಂಸತ್ತಿನ ಪ್ರತಿಯೊಂದು ಸದನವನ್ನು ತಮಗೆ ಸೂಕ್ತವೆಂದು ತೋರುವ ಸಮಯದಲ್ಲಿ ಮತ್ತು ಸ್ಥಳದಲ್ಲಿ ಸಭೆ ಸೇರಲು ಸೂಚಿಸಬಹುದು. ಆದರೆ ಎರಡು ಅಧಿವೇಶನಗಳ ಮಧ್ಯದ ಅಂತರ 6 ತಿಂಗಳು ಮೀರಬಾರದು.

ಮಾನ್ಸೂನ್ ಅಧಿವೇಶನವು ಈಗಷ್ಟೇ ಮುಗಿದಿರುವುದರಿಂದ, ಆರು ತಿಂಗಳಿಗಿಂತ ಹೆಚ್ಚು ಅಂತರಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಇಲ್ಲಿಲ್ಲ. ಇದಲ್ಲದೆ, ಬಜೆಟ್ ಅಧಿವೇಶನ, ಮಳೆಗಾಲದ ಅಧಿವೇಶನ ಮತ್ತು ಚಳಿಗಾಲದ ಅಧಿವೇಶನ ಹೀಗೆ ವರ್ಷದಲ್ಲಿ ಈ ಮೂರೇ ಅಧಿವೇಶನ ನಡೆಯಬೇಕೆಂದು ಸಂವಿಧಾನದಲ್ಲಿ ಬರೆದಿಲ್ಲ.

ಸಂವಿಧಾನದ 352 ನೇ ವಿಧಿಯು ತುರ್ತು ಪರಿಸ್ಥಿತಿ ಘೋಷಣೆಯ ಸಂದರ್ಭದಲ್ಲಿ ಲೋಕಸಭೆಯ "ವಿಶೇಷ ಅಧಿವೇಶನ" ವನ್ನು ಉಲ್ಲೇಖಿಸುತ್ತದೆ. ಆದರೆ ಇದು ಇಲ್ಲಿ ಪ್ರಸ್ತುತವಲ್ಲ. ಈ ಹಿಂದೆ ಸರಿಯಾದ ಚರ್ಚೆಗಳು ಮತ್ತು ಸಂವಾದಗಳೊಂದಿಗೆ ಕೆಲ ಐತಿಹಾಸಿಕ ಘಟನೆಗಳನ್ನು ಆಚರಿಸಲು ವಿಶೇಷ ಅಧಿವೇಶನಗಳನ್ನು ನಡೆಸಲಾಗಿದೆ. 1962 ರಲ್ಲಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಸೂಚನೆಯ ಮೇರೆಗೆ ಭಾರತ-ಚೀನಾ ಯುದ್ಧ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ನವೆಂಬರ್ 8-9 ರಂದು ವಿಶೇಷ ಅಧಿವೇಶನವನ್ನು ಕರೆಯಲಾಗಿತ್ತು.

ಡಾ.ಬಿ.ಆರ್. ಅಂಬೇಡ್ಕರ್ ಅವರ 125 ನೇ ಜನ್ಮ ದಿನಾಚರಣೆಯಂದು ಅವರಿಗೆ ಗೌರವ ಸಲ್ಲಿಸಲು 2015 ರ ನವೆಂಬರ್ 26-27 ರಂದು ವಿಶೇಷ ಅಧಿವೇಶನ ನಡೆದಿತ್ತು. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿನ ಎರಡು ದಿನಗಳ ಈ ವಿಶೇಷ ಅಧಿವೇಶನಗಳು ಭಾರತೀಯ ಸಂವಿಧಾನದ ಶಿಲ್ಪಿಯನ್ನು ಗೌರವಿಸುವ ವರ್ಷವಿಡೀ ಆಚರಣೆಗಳ ಭಾಗವಾಗಿದ್ದವು. ಅದೇ ವರ್ಷ, ಡಾ. ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಅವರ ಚಿಂತನೆಗಳ ಬಗ್ಗೆ ಜಾಗೃತಿ ಮೂಡಿಸಲು ಭಾರತ ಸರ್ಕಾರವು ನವೆಂಬರ್ 26 ಅನ್ನು ಸಂವಿಧಾನ ದಿನವೆಂದು ಘೋಷಿಸಿತು.

ಭಾರತದ ಸ್ವಾತಂತ್ರ್ಯದ 50 ನೇ ವಾರ್ಷಿಕೋತ್ಸವದ ನೆನಪಿಗಾಗಿ ಆಗಸ್ಟ್ 26 ರಿಂದ ಸೆಪ್ಟೆಂಬರ್ 1, 1997 ರವರೆಗೆ ಆರು ದಿನಗಳ ವಿಶೇಷ ಅಧಿವೇಶನ ನಡೆಸಲಾಗಿತ್ತು. ಜುಲೈ 1, 2017 ರಿಂದ ಜಾರಿಗೆ ಬರುವಂತೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಕಾಯ್ದೆಯನ್ನು ಜಾರಿಗೆ ತರಲು ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಸಂಸದೀಯ ಅಧಿವೇಶನವು ಜೂನ್ 30, 2017 ರಂದು ನಡೆದಿತ್ತು.

ಭಾರತದ ಸ್ವಾತಂತ್ರ್ಯದ ಮುನ್ನಾದಿನದಂದು 1947 ರ ಆಗಸ್ಟ್ 14-15 ರಂದು ಮೊದಲ ಅಧಿವೇಶನ ನಡೆದಿತ್ತು. ಕ್ವಿಟ್ ಇಂಡಿಯಾ ಚಳವಳಿಯ 50 ನೇ ವಾರ್ಷಿಕೋತ್ಸವದ ಅಂಗವಾಗಿ ಆಗಸ್ಟ್ 9, 1992 ರಂದು ಮತ್ತು ಭಾರತದ ಸ್ವಾತಂತ್ರ್ಯದ ರಜತ ಮಹೋತ್ಸವವನ್ನು ಆಚರಿಸಲು 1972 ರಲ್ಲಿ 14-15 ರ ಮಧ್ಯರಾತ್ರಿ ಆಚರಣೆಯ ಅಧಿವೇಶನಗಳನ್ನು ಸಹ ನಡೆಸಲಾಗಿದೆ.

ಪ್ರಸ್ತುತ ವಿಶೇಷ ಅಧಿವೇಶನವು ಭಾರತದ ಸ್ವಾತಂತ್ರ್ಯದ 50 ನೇ ವಾರ್ಷಿಕೋತ್ಸವದ ನೆನಪಿಗಾಗಿ 1997 ರಲ್ಲಿ ನಡೆದ ಆರು ದಿನಗಳ ವಿಶೇಷ ಅಧಿವೇಶನದ ರೀತಿಯಲ್ಲಿರುವುದು ಕಂಡು ಬರುತ್ತಿದೆ. ಪ್ರಸ್ತುತ ಅಧಿವೇಶನವು ಪವಿತ್ರ ಗಣೇಶೋತ್ಸವದ ಸಮಯದಲ್ಲಿ ಮತ್ತು ನರೇಂದ್ರ ಮೋದಿಯವರ ಜನ್ಮದಿನಕ್ಕೆ ಹತ್ತಿರದಲ್ಲಿ, ಜಿ 20 ರಾಷ್ಟ್ರಗಳ ಸಂಸದರ ಸಮ್ಮುಖದಲ್ಲಿ (ಪಿ -20) ಹೊಸ ಸಂಸತ್ ಭವನದಲ್ಲಿ ಕಲಾಪ ನಡೆಯಬಹುದು.

ವಿಶೇಷ ಅಧಿವೇಶನದ ಕಾರ್ಯಸೂಚಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಸಂಸದೀಯ ವ್ಯವಹಾರಗಳ ಸಚಿವರು ಹೇಳಿದ್ದಾರೆ. 2024 ರಲ್ಲಿ ನಡೆಯಲಿರುವ ಮುಂದಿನ ಲೋಕಸಭಾ ಚುನಾವಣೆಗಾಗಿ ತನ್ನ ಕಾರ್ಯತಂತ್ರ ರೂಪಿಸಲು ಸಭೆ ಸೇರಿದ ಪ್ರತಿಪಕ್ಷಗಳಿಗೆ ವಿಶೇಷ ಅಧಿವೇಶನದ ಘೋಷಣೆಯು ಕೊಂಚ ಅಡಚಣೆ ಉಂಟು ಮಾಡಬಹುದು.

ಸಂಸತ್ತಿನಲ್ಲಿ ಮಹಿಳೆಯರಿಗೆ ಮೀಸಲಾತಿಯಂತಹ ಕೆಲವು ಮಹತ್ವದ ಮತ್ತು ವಿವಾದಾತ್ಮಕ ಶಾಸನಗಳನ್ನು ಜಾರಿಗೆ ತರಲು ಸರ್ಕಾರ ಪ್ರಯತ್ನಿಸಬಹುದು ಎಂಬ ಊಹಾಪೋಹಗಳು ಹರಡಿವೆ. ಆದರೆ, ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ನೇತೃತ್ವದಲ್ಲಿ ಒಂದು ರಾಷ್ಟ್ರ ಒಂದು ಚುನಾವಣೆಯ ಕಾರ್ಯಸಾಧ್ಯತೆಯನ್ನು ಅನ್ವೇಷಿಸಲು ಸಮಿತಿಯನ್ನು ಘೋಷಿಸುವುದರೊಂದಿಗೆ, ಅದನ್ನು ಕಾರ್ಯರೂಪಕ್ಕೆ ತರುವ ಶಾಸಕಾಂಗ ಪ್ರಕ್ರಿಯೆ ನಡೆಯುತ್ತಿದೆ.

ಆದಾಗ್ಯೂ ಇದನ್ನು ಮಾಡುವುದು ಹೇಳಿದಷ್ಟು ಸುಲಭವಲ್ಲ. ಈ ವಿಷಯವನ್ನು 1983 ರಿಂದ ಕಾಲಕಾಲಕ್ಕೆ ಪರಿಗಣಿಸಲಾಗಿದೆ. 2018 ರಲ್ಲಿ, ಕಾನೂನು ಆಯೋಗದ ಕರಡು ವರದಿಯು ಲೋಕಸಭಾ ಚುನಾವಣೆ 2019 ರಿಂದ ಪ್ರಾರಂಭಿಸಿ ದೇಶದಲ್ಲಿ ಚುನಾವಣೆಗಳನ್ನು ಸಿಂಕ್ರೊನೈಸ್ ಮಾಡಲು ಮೂರು ಆಯ್ಕೆಗಳನ್ನು ಶಿಫಾರಸು ಮಾಡಿತ್ತು. ಅಮೃತ್ ಕಾಲದ ನಡುವೆ 5 ದಿನಗಳ ವಿಶೇಷ ಅಧಿವೇಶನದಲ್ಲಿ ನಿಖರವಾಗಿ ಏನಾಗಲಿದೆ ಎಂಬ ಪ್ರಶ್ನೆಗೆ ಸಮಯವೇ ಉತ್ತರ ನೀಡಲಿದೆ. ಅಲ್ಲಿಯವರೆಗೆ ಕುತೂಹಲದಿಂದ ಕಾಯುವುದೇ ದಾರಿ.

ಇದನ್ನೂ ಓದಿ : ರಾಜನಾಥ್ ಸಿಂಗ್ ಭೇಟಿ ಮುಂದೂಡಿಕೆ; ಶ್ರೀಲಂಕಾಗೆ ಭಾರತ ಎಚ್ಚರಿಕೆಯ ಸಂದೇಶ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.