ETV Bharat / bharat

ಕೇರಳದಲ್ಲಿ ಪ್ರಾಧ್ಯಾಪಕರ ಕೈ ಕತ್ತರಿಸಿದ ಪ್ರಕರಣ: 6 ಮಂದಿ ತಪ್ಪಿತಸ್ಥರೆಂದು NIA ವಿಶೇಷ ಕೋರ್ಟ್ ತೀರ್ಪು​ - ಎನ್‌ಐಎ ವಿಶೇಷ ನ್ಯಾಯಾಲಯ

ಪ್ರೊಫೆಸರ್ ಟಿ.ಜೆ. ಜೋಸೆಫ್ ಅವರ ಕೈ ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ವಿಶೇಷ ನ್ಯಾಯಾಲಯವು ಆರು ಮಂದಿ ಆರೋಪಿಗಳನ್ನು ತಪ್ಪಿತಸ್ಥರೆಂದು ಘೋಷಿಸಿದೆ.

professor hand chopping case
ಪ್ರಾಧ್ಯಾಪಕರ ಕೈ ಕತ್ತರಿಸಿದ ಪ್ರಕರಣ
author img

By

Published : Jul 12, 2023, 2:22 PM IST

ಕೊಚ್ಚಿ (ಕೇರಳ) : 2010ರಲ್ಲಿ ನಡೆದ ಕೇರಳದ ಕಾಲೇಜು ಪ್ರಾಧ್ಯಾಪಕರೊಬ್ಬರ ಕೈ ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನಿಷೇಧಿತ ಇಸ್ಲಾಮಿಕ್ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ಸದಸ್ಯರಾಗಿರುವ ಆರು ಮಂದಿಯನ್ನು 'ದೋಷಿಗಳು' ಎಂದು ಕೇರಳದ ವಿಶೇಷ ಎನ್‌ಐಎ ನ್ಯಾಯಾಲಯ ಬುಧವಾರ ಮಹತ್ವದ ತೀರ್ಪು ನೀಡಿದೆ.

ತೊಡುಪುಳ ನ್ಯೂಮನ್ ಕಾಲೇಜಿನ ಶಿಕ್ಷಕರಾಗಿದ್ದ ಪ್ರೊಫೆಸರ್ ಟಿ.ಜೆ. ಜೋಸೆಫ್ ಅವರ ಕೈ ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಹಂತದ ವಿಚಾರಣೆಯಲ್ಲಿ ಎನ್‌ಐಎ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅನಿಲ್ ಕೆ. ಭಾಸ್ಕರ್ ಅವರು ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿಯಲ್ಲಿ ಕೊಲೆ ಯತ್ನ, ಪಿತೂರಿ ಮತ್ತು ಇತರೆ ವಿವಿಧ ಅಪರಾಧಗಳಡಿ ವಿಚಾರಣೆಗೆ ಒಳಗಾದ ಹನ್ನೊಂದು ಆರೋಪಿಗಳ ಪೈಕಿ ಆರು ಮಂದಿ ತಪ್ಪಿತಸ್ಥರು ಎಂದು ನ್ಯಾಯಾಲಯ ತೀರ್ಪು ನೀಡಿದರು. ಸಾಕ್ಷ್ಯಾಧಾರಗಳ ಕೊರತೆಯಿಂದ ಐವರು ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ. ಸಜಲ್, ನಾಸರ್, ನಜೀಬ್, ನೌಶಾದ್, ಮೊಯ್ತೀನ್ ಕುಂಜ್ ಮತ್ತು ಅಯೂಬ್ ತಪ್ಪಿತಸ್ಥರೆಂದು ಕೋರ್ಟ್​ ತೀರ್ಪು ನೀಡಿದ್ದು, ಶಫೀಕ್, ಅಜೀಜ್, ಜುಬೇರ್, ಮಹಮ್ಮದ್ ರಫಿ ಮತ್ತು ಮನ್ಸೂರ್ ಖುಲಾಸೆಯಾಗಿದ್ದಾರೆ.

  • #WATCH | 11 accused faced the court in this stage of trial. Five were acquitted and six were convicted. Three of the convicts were convicted for conspiracy..," advocate Naushad - defence lawyer gives details on the Kerala Professor TJ Joseph hand chopping case verdict. https://t.co/CuZKgODgrv pic.twitter.com/Tuf4BtTjSV

    — ANI (@ANI) July 12, 2023 " class="align-text-top noRightClick twitterSection" data=" ">

ಮೊದಲ ಹಂತದಲ್ಲಿ 31 ಆರೋಪಿಗಳು ವಿಚಾರಣೆ ಎದುರಿಸಿದ್ದರು. ಈ ಪೈಕಿ, ಏಪ್ರಿಲ್ 30, 2015ರಲ್ಲಿ ಯುಎಪಿಎ ಮತ್ತು ಸ್ಫೋಟಕ ವಸ್ತುಗಳ ಕಾಯ್ದೆ ಮತ್ತು ಐಪಿಸಿ ಅಡಿಯಲ್ಲಿ 10 ಅಪರಾಧಗಳಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿತ್ತು. ಅಪರಾಧಿಗಳಿಗೆ ಆಶ್ರಯ ನೀಡಿದ ಇತರೆ ಮೂವರನ್ನು ತಪ್ಪಿತಸ್ಥರೆಂದು ತೀರ್ಪು ನೀಡಿತ್ತು. ಒಟ್ಟು13 ಜನರನ್ನು ತಪ್ಪಿತಸ್ಥರೆಂದು ಗುರುತಿಸಿ ಶಿಕ್ಷೆ ವಿಧಿಸಿದ್ದು, 18 ಮಂದಿ ದೋಷಮುಕ್ತರಾಗಿದ್ದರು.

ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಮೊದಲ ಹಂತದಲ್ಲಿ ಬಂಧಿಸಲಾಗಿದ್ದು, ವಿಚಾರಣೆ ಪೂರ್ಣಗೊಂಡಿದೆ. ನಂತರ, ಬಂಧಿತರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿ, ಎರಡನೇ ಹಂತದ ವಿಚಾರಣೆಯನ್ನು ಪೂರ್ಣಗೊಳಿಸಲಾಯಿತು. ವಿಚಾರಣೆಯು ಅಪರಾಧದಲ್ಲಿ ನೇರವಾಗಿ ಭಾಗವಹಿಸಿದವರನ್ನು ಒಳಗೊಂಡಿತ್ತು.

ಮಾರ್ಚ್ 23, 2010ರಂದು ಪ್ರಕರಣವನ್ನು ಮೊದಲು ರಾಜ್ಯ ಪೊಲೀಸರು ತನಿಖೆ ನಡೆಸಿದರು. ನಂತರ ಪ್ರಕರಣವನ್ನು ಕೈಗೆತ್ತಿಕೊಂಡ NIA, ಶಿಕ್ಷಕನ ಅಂಗೈ ಕತ್ತರಿಸಿದ ಘಟನೆ ಹಿಂದೆ ಜನಪ್ರಿಯ ಮೋರ್ಚಾದ ಕೈವಾಡವಿದೆ ಎಂದು ತಿಳಿಸಿತ್ತು. ಪಾಪ್ಯುಲರ್ ಫ್ರಂಟ್ ಹಿಂದೆಂದೂ ಕಂಡು ಕೇಳರಿಯದ ದುಷ್ಕೃತ್ಯವನ್ನು ಯೋಜಿಸಿ ಕಾರ್ಯಗತಗೊಳಿಸಿದೆ ಎಂದು ಎನ್ಐಎ ಪತ್ತೆ ಮಾಡಿತ್ತು. ಹೀಗಾಗಿ, ಪಾಪ್ಯುಲರ್ ಫ್ರಂಟ್ ನಿಷೇಧಿಸಲು ಈ ಘಟನೆಯೂ ಒಂದು ಕಾರಣವಾಗಿತ್ತು.

ಇದನ್ನೂ ಓದಿ : ಬೆಳಗಾವಿ ಹೊರವಲಯದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ

ಬೆಚ್ಚಿ ಬೀಳಿಸಿದ ಘಟನೆ : ಇಡುಕ್ಕಿ ಜಿಲ್ಲೆಯ ತೊಡುಪುಳದಲ್ಲಿರುವ ನ್ಯೂಮನ್ ಕಾಲೇಜಿನ ಪ್ರೊಫೆಸರ್ ಟಿ.ಜೆ. ಜೋಸೆಫ್ ಅವರ ಬಲಗೈಯನ್ನು ನಿಷೇಧಿತ ಇಸ್ಲಾಮಿಕ್ ಸಂಘಟನೆಯಾದ ಪಿಎಫ್‌ಐ ಕಾರ್ಯಕರ್ತರು ಕತ್ತರಿಸಿದ್ದರು. ಜುಲೈ 4, 2010ರಂದು ಎರ್ನಾಕುಲಂ ಜಿಲ್ಲೆಯ ಮುವಾಟ್ಟುಪುಳದಲ್ಲಿರುವ ಚರ್ಚ್‌ನಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಕುಟುಂಬದೊಂದಿಗೆ ಮನೆಗೆ ಹಿಂದಿರುಗುತ್ತಿದ್ದಾಗ ಜೋಸೆಫ್ ಮೇಲೆ ದಾಳಿ ನಡೆಸಲಾಗಿತ್ತು. ತೊಡುಪುಳ ನ್ಯೂಮನ್ ಕಾಲೇಜಿನಲ್ಲಿ ನಡೆದ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಧರ್ಮನಿಂದನೆ ಮಾಡಲಾಗಿದೆ ಎಂದು ಆರೋಪಿಸಿ ಪ್ರೊಫೆಸರ್ ಅವರ ಕೈಯನ್ನೇ ಕತ್ತರಿಸಿದ್ದರು. ಇದೀಗ ಕೇಸ್​ಗೆ ಸಂಬಂಧಿಸಿದಂತೆ ಕೋರ್ಟ್​ ಆರೋಪಿಗಳಿಗೆ ಶಿಕ್ಷೆ ವಿಧಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.