ತಿರುವನಂತಪುರಂ: ಕೇರಳದ 26ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವರದಿಗಾರಿಕೆ ವಿಭಾಗದಲ್ಲಿ ಈಟಿವಿ ಭಾರತಗೆ Special Jury Mention ಪ್ರಶಸ್ತಿ ಲಭಿಸಿದೆ. ಪ್ರೇಕ್ಷಕರ ಭಾವನೆಗಳನ್ನು ಪ್ರತಿಬಿಂಬಿಸುವ ಸುದ್ದಿಗಳನ್ನು ಒದಗಿಸಿದ್ದಕ್ಕಾಗಿ ETV Bharat ಗೆ Special Jury Mention ಪ್ರಶಸ್ತಿ ಲಭಿಸಿತು.
ತಿರುವನಂತಪುರದಲ್ಲಿ ನಡೆದ IFFK ಸಮಾರೋಪ ಸಮಾರಂಭದಲ್ಲಿ ವರದಿಗಾರ ಬಿನೋಯ್ ಕೃಷ್ಣನ್ ಈಟಿವಿ ಭಾರತ್ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು. ವಿದೇಶಿ ಚಲನಚಿತ್ರಗಳನ್ನು ಪರಿಚಯಿಸುವಲ್ಲಿ ಈ ಟಿವಿ ಭಾರತದ ಕೊಡುಗೆ ಗುರುತಿಸಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.