ETV Bharat / bharat

ಸ್ಕೂಬ್​ ಡೈವಿಂಗ್​ ಜೊತೆ ಈಟಿ ಮೀನುಗಾರಿಕೆ; ಕೇರಳ ಯುವಕನ ಸಾಹಸ ನೋಡಲು ಮುಗಿಬೀಳ್ತಾರೆ ಜನ - ಈಟಿ ಮೀನುಗಾರಿಕೆ ಎಂಬುದು ಸಂಪ್ರದಾಯಿಕ ಪದ್ದತಿ

ಸಮುದ್ರಾಳದ ಡೈವಿಂಗ್ ಮತ್ತು ಗನ್​ ಫಿಶಿಂಗ್​ ತಂತ್ರಜ್ಞಾನ ಕುರಿತು ಶಿಬು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಹಂಚಿಕೊಂಡ ಬಳಿಕ ಅವರನ್ನು ಗುರುತಿಸುವವರ ಸಂಖ್ಯೆ ಹೆಚ್ಚಿದೆ

ಸ್ಕೂಬ್​ ಡೈವಿಂಗ್​ ಜೊತೆ ಈಟಿ ಮೀನುಗಾರಿಕೆ; ಕೇರಳ ಯುವಕನ ಸಾಹಸ ನೋಡಲು ಮುಗಿ ಬೀಳುತ್ತಾರೆ ಜನರು
spear-fishing-with-scuba-diving-people-flock-to-see-the-adventure-of-the-kerala-youth
author img

By

Published : Dec 22, 2022, 4:10 PM IST

ಕೊಲ್ಲಂ: ಈಟಿ ಮೀನುಗಾರಿಕೆ ಎಂಬುದು ಸಾಂಪ್ರದಾಯಿಕ ಪದ್ದತಿ. ಆಳ ನೀರಿನಲ್ಲಿ ಮೀನನ್ನು ಬೇಟೆಯಾಡುವ ಈ ಈಟಿ ಮೀನುಗಾರಿಕೆಗೆ ಕೊಲ್ಲಂನ ಯುವಕ ಶಿಬು ಜೋಸೆಫ್​ ಇದೀಗ ಆಧುನಿಕ್​ ಟಚ್​ ನೀಡಿದ್ದಾರೆ. ಆಧುನಿಕ ಈಟಿಯಂತಹ ಗನ್​ಗಳನ್ನು ಹಿಡಿದು ಆಳ ಸಮುದ್ರದಲ್ಲಿ ಮೀನುಗಳ ಬೇಟೆ ನಡೆಸುತ್ತಾರೆ. ವೃತ್ತಿಯಲ್ಲಿ ಸ್ಕೂಬಾ ಡೈವರ್​ ಆಗಿರುವ ಶಿಬು ಈಟಿ ಮೀನುಗಾರಿಕೆಯಲ್ಲೂ ಪರಿಣಿತರಾಗಿದ್ದಾರೆ.

ಈ ಕುರಿತು ತಮ್ಮ ಅನುಭವ ಹಂಚಿಕೊಂಡಿರುವ ಶಿಬು, ವೃತ್ತಿಯಲ್ಲಿ ನಾನು ಆಳ ಸಮುದ್ರದ ಸ್ಕೂಬಾ ಡೈವರ್​ ಆಗಿದ್ದೇನೆ. ಇದಾದ ಬಳಿಕ ನಾನು ಈಟಿ ಮೀನುಗಾರಿಕೆಯಲ್ಲಿ ಪರಿಣಿತಿ ಪಡೆದಿದ್ದೇನೆ. ಹಲವು ವರ್ಷಗಳ ಅಭ್ಯಾಸದಿಂದ ನಾನು ಆತ್ಮವಿಶ್ವಾಸದಿಂದ ಇದನ್ನು ಮಾಡುತ್ತಿದ್ದು, ಈ ಕಾರ್ಯವನ್ನು ಆನಂದಿಸುತ್ತಿದ್ದೇನೆ. ಈ ಈಟಿ ಮೀನುಗಾರಿಕೆಯನ್ನು ಜನರು ಯಾವುದೇ ತರಬೇತಿ ಅಥವಾ ಪರಿಣಿತರ ಸಲಹೆ ಇಲ್ಲದೇ ಅನುಸರಿಸುವುದು ತಪ್ಪು ಎಂದು ನಾನು ಸಾರ್ವಜನಿಕರಿಗೆ ಸಲಹೆ ನೀಡುತ್ತೇನೆ. ನೀರಿ ಹರಿವು ಮತ್ತು ನೀರಿನ ಆಳದ ಪರಿಚಯ ಇರುವವರು ಈ ಸಾಹಸವನ್ನು ಅನುಸರಿಸಬಹುದಾಗಿದೆ.

ಸಮುದ್ರಾಳದ ಡೈವಿಂಗ್ ಮತ್ತು ಗನ್​ ಫಿಶಿಂಗ್​ ಕುರಿತು ಶಿಬು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಹಂಚಿಕೊಂಡ ಬಳಿಕ ಅವರನ್ನು ಗುರುತಿಸುವವರ ಸಂಖ್ಯೆ ಹೆಚ್ಚಿದೆ. ಶಿಬು ಆಳ ಸಮುದ್ರಕ್ಕೆ ಈಟಿ ಜೊತೆಗೆ ಇಳಿದರೆ, ಮೀನಿನೊಂದಿಗೆ ಹೊರ ಬರುತ್ತಾರೆ. ಇದನ್ನು ನೋಡಲು ಅನೇಕ ಜನರು ಥಂಕಸ್ಸೆರಿ ಸಮುದ್ರ ಸೇತುವೆ ಬಳಿ ಜಮಾಯಿಸುತ್ತಾರೆ.

ಈಟಿ ಮೀನುಗಾರಿಕೆಯಲ್ಲಿ ಶಿಬು ಸ್ಪೇರ್​ ಗನ್​ ಬಳಕೆ ಮಾಡುತ್ತಾರೆ. ಮೀನು ಎಲ್ಲಿದೆ ಎಂಬುದನ್ನು ಗಮನಿಸಿ ಅವರು ಶೂಟ್​ ಮಾಡುತ್ತಾರೆ. ಮೀನುಗಾರಿಕೆ ಎಂಬುದು ಕರಾವಳಿ ಜನರ ಜೀವನೋಪಯವಾಗಿದ್ದು, ಈಟಿ ಮೀನುಗಾರಿಕೆ ಹಳೆಯ ಕಾಲದ ವಿಧಾನವಾಗಿದೆ.

ಇದನ್ನೂ ಓದಿ: ಶೌಚಾಲಯದ ಒಂದೇ ಕೊಠಡಿಯಲ್ಲಿ ಎರಡು ಬೇಸಿನ್​!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.