ETV Bharat / bharat

ಲೋಕಸಭೆಯಲ್ಲಿ ಭದ್ರತಾ ಲೋಪ: ನಾಲ್ವರ ಬಂಧನ, ಆರೋಪಿಗಳ ಗುರುತು ಪತ್ತೆ - ಹೊಸ ಸಂಸತ್ತು ಭವನ

Security breach in Lok Sabha: ಲೋಕಸಭೆ ಕಲಾಪದಲ್ಲಿ ನಡೆದ ಭದ್ರತಾ ಲೋಪದ ಬಗ್ಗೆ ಎಲ್ಲ ಪಕ್ಷಗಳ ಸದಸ್ಯರ ಸಭೆಯನ್ನು ಸ್ಪೀಕರ್ ಓಂ ಬಿರ್ಲಾ ಕರೆದಿದ್ದಾರೆ.

Speaker Om Birla calls meeting of MPs to discuss security lapse
ಲೋಕಸಭೆಯಲ್ಲಿ ಭದ್ರತಾ ಲೋಪ: ನಾಲ್ವರ ಬಂಧನ, ಸರ್ವಪಕ್ಷ ಸಭೆ ಕರೆದ ಸ್ಪೀಕರ್ ಓಂ ಬಿರ್ಲಾ
author img

By PTI

Published : Dec 13, 2023, 3:34 PM IST

Updated : Dec 13, 2023, 6:32 PM IST

ಲೋಕಸಭೆಯಲ್ಲಿ ಭದ್ರತಾ ಲೋಪ: ನಾಲ್ವರ ಬಂಧನ

ನವದೆಹಲಿ: ಹೊಸ ಸಂಸತ್ತು ಭವನದಲ್ಲಿ ಲೋಕಸಭೆ ಕಲಾಪದ ವೇಳೆ ಉಂಟಾದ ಭದ್ರತಾ ಲೋಪದ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ತಿಳಿಸಿದರು. ಅಲ್ಲದೇ, ಈ ವಿಷಯದ ಬಗ್ಗೆ ತಮ್ಮ ಕಳವಳಗಳನ್ನು ತಿಳಿಸಲು ಸರ್ವ ಪಕ್ಷಗಳ ಸಂಸದರ ಸಭೆಯನ್ನು ಸ್ಪೀಕರ್ ಕರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಜೆ 4 ಗಂಟೆಯವರೆಗೆ ಕಲಾಪ ಮುಂದೂಡಲಾಗಿದೆ. ಇದೇ ವೇಳೆ, ಸದನಕ್ಕೆ ನುಗ್ಗಿದ ಇಬ್ಬರು ಸೇರಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.

ಹಳೆ ಸಂಸತ್ತು ಭವನದ ಮೇಲಿನ ಭಯೋತ್ಪಾದನಾ ದಾಳಿಯ 22ನೇ ವರ್ಷದ ಕರಾಳ ದಿನದಂದೇ ಲೋಕಸಭೆಯಲ್ಲಿ ಈ ಭಾರಿ ಭದ್ರತಾ ಲೋಪ ಉಂಟಾಗಿದೆ. ಸುಮಾರು 1 ಗಂಟೆ ಸುಮಾರಿಗೆ ಲೋಕಸಭೆಯಲ್ಲಿ ಸದಸ್ಯರು ಶೂನ್ಯ ವೇಳೆಯಲ್ಲಿ ಮಾತನಾಡುತ್ತಿದ್ದಾಗಲೇ ಇಬ್ಬರು ಸಾರ್ವಜನಿಕ ಗ್ಯಾಲರಿಯಿಂದ ಸದನದೊಳಗೆ ಜಿಗಿದಿದ್ದಾರೆ. ಹಳದಿ ಬಣ್ಣದ ಸ್ಟ್ರೇ ಬಿಡುಗಡೆ ಮಾಡಿ ಆತಂಕ ಸೃಷ್ಟಿಸಿದ್ದಾರೆ. ಅದೇ ಸಮಯದಲ್ಲಿ ಸಂಸತ್ತಿನ ಆವರಣದ ಹೊರಗೆ ಒಬ್ಬ ಮಹಿಳೆ ಸೇರಿದಂತೆ ಮತ್ತಿಬ್ಬರು ಘೋಷಣೆಗಳನ್ನು ಕೂಗುತ್ತಾ ಸ್ಟ್ರೇ ಮಾಡಿದ್ದಾರೆ.

  • #WATCH | Lok Sabha security breach | Lok Sabha speaker Om Birla says "Both of them have been nabbed and the materials with them have also been seized. The two people outside the Parliament have also been arrested by Police..." pic.twitter.com/0CtsaKR2Rk

    — ANI (@ANI) December 13, 2023 " class="align-text-top noRightClick twitterSection" data=" ">

ನಾಲ್ವರ ಬಂಧನ- ಸದನಕ್ಕೆ ಸ್ಪೀಕರ್​ ಮಾಹಿತಿ: ಈ ಘಟನೆ ಬಳಿಕ ಮಧ್ಯಾಹ್ನ 2 ಗಂಟೆಗೆ ಮತ್ತೆ ಕಲಾಪ ಸೇರಲಾಯಿತು. ಆಗ ಮಾತನಾಡಿದ ಸ್ಪೀಕರ್​ ಓಂ ಬಿರ್ಲಾ, ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಸದನಕ್ಕೆ ತಿಳಿಸಿದರು. ಇಬ್ಬರನ್ನು ಸದನದ ಒಳಗೆ ಹಾಗೂ ಮತ್ತಿಬ್ಬರನ್ನು ಸಂಸತ್ತಿನ ಹೊರಗೆ ಬಂಧಿಸಲಾಗಿದೆ. ಈ ಬಗ್ಗೆ ಲೋಕಸಭೆಯು ತನಿಖೆ ನಡೆಸುತ್ತಿದೆ. ಜೊತೆಗೆ ದೆಹಲಿ ಪೊಲೀಸರಿಗೂ ತನಿಖೆ ನಡೆಸಲು ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

  • #WATCH | Lok Sabha security breach | Lok Sabha speaker Om Birla says "A thorough investigation of the incident that took place during zero hour, is being done. Essential instructions have also been given to Delhi Police. In the primary investigation, it has been found that it was… pic.twitter.com/GPMPAoyeLk

ಸದನದ ಒಳಗೆ ನುಗ್ಗಿದ್ದ ಒಬ್ಬರು ಬಿಡುಗಡೆ ಮಾಡಿದ ಅನಿಲವು ನಿರುಪದ್ರವ ಎಂದು ಕಂಡುಬಂದಿದೆ. ಇದು ಸಂಚಲನ ಸೃಷ್ಟಿಸಲು ಸಿಂಪಡಿಸಿದಂತೆ ತೋರುತ್ತಿದೆ ಎಂದು ಸ್ಪೀಕರ್​ ಹೇಳಿದರು. ನಮ್ಮ ಆತಂಕಕ್ಕೆ ಕಾರಣವಾದ ಹೊಗೆಯು ಕಳವಳಕಾರಿಯಾದ ವಿಷಯವಲ್ಲ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಅವರಿಬ್ಬರನ್ನೂ ಬಂಧಿಸಿ, ಅವರ ಬಳಿಯಿದ್ದ ಎಲ್ಲ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಇದೇ ವೇಳೆ, ಈ ವಿಷಯದ ಬಗ್ಗೆ ನಾನು ಸಂಜೆ 4 ಗಂಟೆಗೆ ಸರ್ವಪಕ್ಷಗಳ ಸಭೆ ಕರೆದಿದ್ದೇನೆ. ಅಲ್ಲಿಯವರೆಗೆ ಸದನವನ್ನು ಮುಂದೂಡಲಾಗಿದೆ ಎಂದು ಬಿರ್ಲಾ ತಿಳಿಸಿದರು. ಮತ್ತೊಂದೆಡೆ, ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಮಾತನಾಡಿ, ಬಿಜೆಪಿ ಸಂಸದರ ಪಾಸ್‌ಗಳನ್ನು ಬಳಸಿಕೊಂಡು ಇಬ್ಬರು ವ್ಯಕ್ತಿಗಳು ಸದನಕ್ಕೆ ಪ್ರವೇಶಿಸಿದ್ದಾರೆ ಎಂದು ದೂರಿದರು. ನಾನು ಕೇಳಲು ಬಯಸುವ ಭದ್ರತೆ ಎಲ್ಲಿದೆ ಎಂದೂ ಅವರು ಪ್ರಶ್ನಿಸಿದರು. ಇನ್ನು, ಈ ಘಟನೆ ಬಳಿಕ ಸಂಸತ್ತಿಗೆ ದೆಹಲಿ ಪೊಲೀಸರ ವಿಶೇಷ ದಳ ಮತ್ತು ಹಿರಿಯ ಅಧಿಕಾರಿಗಳ ತಂಡ ದೌಡಾಯಿಸಿದೆ.

ಆರೋಪಿಗಳ ಗುರುತು ಪತ್ತೆ: ಲೋಕಸಭೆಗೆ ನುಗ್ಗಿದ ಆರೋಪಿಯನ್ನು ಮನೋರಂಜನ್​ ಎಂದು ಗುರುತಿಸಲಾಗಿದೆ. ಅಲ್ಲದೇ, ಮತ್ತೊಬ್ಬನನ್ನು ಸಾಗರ್​ ಶರ್ಮಾ ಎಂದು ಗುರುತಿಸಲಾಗಿದ್ದು, ಆತನ ಬಳಿಯಿದ್ದ ಸಂದರ್ಶಕರ ಪಾಸ್‌ ಸಹ ಪತ್ತೆಯಾಗಿದೆ. ಇದರಿಂದ ಈತ ಹೆಸರು ಎಂದು ಗುರುತಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಂಸತ್ತಿನ ಹೊರಗೆ ನುಗ್ಗ ಪ್ರತಿಭಟನೆಯಲ್ಲಿ ತೊಡಗಿದ್ದ ಮತ್ತಿಬ್ಬರನ್ನೂ ಹೆಸರು ಸಹ ಬಹಿರಂಗವಾಗಿದೆ. ಹರಿಯಾಣದ ಹಿಸಾರ್ ಮೂಲದ 42 ವರ್ಷದ ನೀಲಾಮ್ ಹಾಗೂ ಮಹಾರಾಷ್ಟ್ರದ ಲಾತೂರ್​ ಮೂಲದ 25 ವರ್ಷದ ಅಮೋಲ್​ ಶಿಂಧೆ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಲೋಕಸಭೆಯಲ್ಲಿ ಭಾರಿ ಭದ್ರತಾ ಲೋಪ: ಗ್ಯಾಲರಿಯಿಂದ ಕಲಾಪಕ್ಕೆ ನುಗ್ಗಿದ ಯುವಕ ಸೇರಿ ಇಬ್ಬರು ವಶಕ್ಕೆ

Last Updated : Dec 13, 2023, 6:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.