ETV Bharat / bharat

ಎಸ್‌ಪಿ ದರ್ಜೆ ಅಧಿಕಾರಿಯಿಂದ 'ದೇಶದ್ರೋಹ' ಪ್ರಕರಣಗಳ ಮೇಲ್ವಿಚಾರಣೆ : ಸುಪ್ರೀಂಗೆ ಕೇಂದ್ರ ಮಾಹಿತಿ

'ರಾಷ್ಟ್ರದ್ರೋಹದ ಅಪರಾಧಗಳ ಮೇಲೆ ಎಫ್‌ಐಆರ್‌ ದಾಖಲಿಸುವುದನ್ನು ತಡೆಯಲಾಗದು. ಈ ಉಪಬಂಧವು ದಸ್ತಗಿರಿ ಮಾಡಬಹುದಾದ ಅಪರಾಧವನ್ನು ಒಳಗೊಂಡಿದೆ. ಅಷ್ಟೇ ಅಲ್ಲ, ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠವು 1962ರಲ್ಲಿ ಇದನ್ನು ಎತ್ತಿ ಹಿಡಿದಿದೆ'- ಕೇಂದ್ರ ಸರ್ಕಾರ

ಸುಪ್ರೀಂ
ಸುಪ್ರೀಂ
author img

By

Published : May 11, 2022, 12:23 PM IST

ನವದೆಹಲಿ : ದೇಶದ್ರೋಹ ಪ್ರಕರಣಗಳಲ್ಲಿ ಎಫ್‌ಐಆರ್‌ ನೋಂದಣಿಗಳ ಮೇಲ್ವಿಚಾರಣೆ ನಡೆಸುವ ಹೊಣೆಯನ್ನು ಎಸ್‌ಪಿ(ಪೊಲೀಸ್‌ ವರಿಷ್ಠಾಧಿಕಾರಿ) ದರ್ಜೆಯ ಅಧಿಕಾರಿಗೆ ವಹಿಸಲಾಗುವುದು ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

ಈ ವಿಚಾರವನ್ನು ಸಾಲಿಸಿಟರ್ ಜನರಲ್‌ ತುಷಾರ್‌ ಮೆಹ್ತಾ ಅವರು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಅವರಿದ್ದ ನ್ಯಾಯಪೀಠಕ್ಕೆ ತಿಳಿಸಿದರು. ರಾಷ್ಟ್ರದ್ರೋಹದ ಅಪರಾಧಗಳ ಮೇಲೆ ಎಫ್‌ಐಆರ್‌ ದಾಖಲಿಸುವುದನ್ನು ತಡೆಯಲಾಗದು.

ಈ ಉಪಬಂಧವು ದಸ್ತಗಿರಿ ಮಾಡಬಹುದಾದ ಅಪರಾಧವನ್ನು ಒಳಗೊಂಡಿದೆ. ಅಷ್ಟೇ ಅಲ್ಲ, ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠವು 1962ರಲ್ಲಿ ಇದನ್ನು ಎತ್ತಿ ಹಿಡಿದಿದೆ ಎಂದು ಅವರು ಹೇಳಿದರು.

ಇಂಥ ಬಾಕಿ ಉಳಿದಿರುವ ಪ್ರಕರಣಗಳಲ್ಲಿ ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್‌ ತ್ವರಿತಗತಿಯಲ್ಲಿ ನಡೆಸಬಹುದು. ಏಕೆಂದರೆ, ಈಗಾಗಲೇ ದಾಖಲಾಗಿರುವ ಪ್ರತಿ ದೇಶದ್ರೋಹದ ಪ್ರಕರಣಗಳ ತೀವ್ರತೆಯ ಸಂಪೂರ್ಣ ಮಾಹಿತಿ ಕೇಂದ್ರ ಸರ್ಕಾರದ ಬಳಿ ಇರುವುದಿಲ್ಲ.

ಇಂಥ ಪ್ರಕರಣಗಳಿಗೆ ಭಯೋತ್ಪಾದಕ ಕೃತ್ಯ ಅಥವಾ ಅಕ್ರಮ ಹಣ ವರ್ಗಾವಣೆಯ ಆಯಾಮವೂ ಇರಬಹುದು ಎಂದು ಕೇಂದ್ರ ಸರ್ಕಾರ ಸುಪ್ರೀಂಗೆ ಹೇಳಿದೆ. ಅಂತಿಮವಾಗಿ, ಬಾಕಿ ಪ್ರಕರಣಗಳು ನ್ಯಾಯಾಲಯದ ಮುಂದಿವೆ. ನಾವು ನ್ಯಾಯಾಲಯಗಳ ಮೇಲೆ ನಂಬಿಕೆ ಇಡಬೇಕಿದೆ ಎಂದು ಸಾಲಿಸಿಟರ್ ಜನರಲ್‌ ತುಷಾರ್ ಮೆಹ್ತಾ ಅವರು ನ್ಯಾ.ಸೂರ್ಯಕಾಂತ್‌ ಹಾಗೂ ಹಿಮಾ ಕೊಹ್ಲಿ ಅವರಿದ್ದ ಪೀಠಕ್ಕೆ ತಿಳಿಸಿದರು.

ನಾಗರಿಕರ ಹಕ್ಕುಗಳನ್ನು ರಕ್ಷಿಸುವ ಹಿನ್ನೆಲೆಯಲ್ಲಿ ಈಗಾಗಲೇ ದಾಖಲಾಗಿರುವ ದೇಶದ್ರೋಹದ ಪ್ರಕರಣಗಳ ವಿಚಾರಣೆಯನ್ನು ತಡೆಹಿಡಿಯುವುದು ಹಾಗೂ ವಸಾಹುತಶಾಹಿ ಕಾಲದಿಂದ ಅಸ್ತಿತ್ವದಲ್ಲಿರುವ ದೇಶದ್ರೋಹ ಕಾನೂನನ್ನು ಸರ್ಕಾರ ಮರುಪರಿಶೀಲನೆಗೆ ಒಳಪಡಿಸುವವರೆಗೆ ಹೊಸ ಪ್ರಕರಣಗಳನ್ನು ದಾಖಲಿಸದಿರುವ ಬಗ್ಗೆ ಮುಂದಿನ 24 ಗಂಟೆಗಳ ಅವಧಿಯಲ್ಲಿ ಪ್ರತಿಕ್ರಿಯೆ ನೀಡುವಂತೆ ಮಂಗಳವಾರ ಕೋರ್ಟ್‌, ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತ್ತು.

ಇದನ್ನೂ ಓದಿ: ಪಿಡಬ್ಲ್ಯೂಡಿ ಕೇಸ್​ಗೆ‌ ಮರುಜೀವ: ಪಿಎಸ್ಐ ಅಕ್ರಮದ ಆರೋಪಿ ಬೆಂಗಳೂರಿಗೆ ಶಿಫ್ಟ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.