ನವದೆಹಲಿ: ದೇಶಾದ್ಯಂತ ನಿನ್ನೆ ಸಡಗರ-ಸಂಭ್ರಮದಿಂದ 75ನೇ ಸ್ವಾತಂತ್ರ್ಯೋತ್ಸವ ಆಚರಣೆ ಮಾಡಲಾಗಿದೆ. ಸ್ವಾತಂತ್ರ್ಯ ಆಚರಣೆ ವೇಳೆ ನಡೆಯುವ ಧ್ವಜಾರೋಹಣದ ಬಳಿಕ ರಾಷ್ಟ್ರಗೀತೆ ಹಾಡಿ ಗೌರವ ನೀಡುವುದು ಪ್ರತಿಯೊಬ್ಬರ ಭಾರತೀಯರ ಕರ್ತವ್ಯ. ಆದರೆ ಸಮಾಜವಾದಿ ಪಕ್ಷದ ಸಂಸದ ಹಾಗೂ ಕಾರ್ಯಕರ್ತರು ರಾಷ್ಟ್ರಗೀತೆಯ ಕೆಲವು ಸಾಲುಗಳನ್ನು ಮರೆತು ಮುಜುಗರ ಅನುಭವಿಸಿದರು.
-
So finally they thought that the best way out of the mess that they had created was to quickly move on to “जय है” ..and then move out ..
— Sambit Patra (@sambitswaraj) August 15, 2021 " class="align-text-top noRightClick twitterSection" data="
वाह समाजवादियों वाह!! pic.twitter.com/BbqFffanMi
">So finally they thought that the best way out of the mess that they had created was to quickly move on to “जय है” ..and then move out ..
— Sambit Patra (@sambitswaraj) August 15, 2021
वाह समाजवादियों वाह!! pic.twitter.com/BbqFffanMiSo finally they thought that the best way out of the mess that they had created was to quickly move on to “जय है” ..and then move out ..
— Sambit Patra (@sambitswaraj) August 15, 2021
वाह समाजवादियों वाह!! pic.twitter.com/BbqFffanMi
ಉತ್ತರ ಪ್ರದೇಶದ ಮೊರದಾಬಾದ್ನಲ್ಲಿ ಈ ಘಟನೆ ನಡೆದಿದೆ. ಧ್ವಜಾರೋಹಣ ಮಾಡಿರುವ ಸಮಾಜವಾದಿ ಸಂಸದ ಎಸ್.ಟಿ ಹಸನ್ ಹಾಗೂ ಕೆಲವು ಬೆಂಬಲಿಗರು ರಾಷ್ಟ್ರಗೀತೆ ಹಾಡುವ ವೇಳೆ ಮಧ್ಯದ ಕೆಲವು ಸಾಲು ಮರೆತರು. ಈ ವೇಳೆ ಮುಜುಗರಕ್ಕೀಡಾಗಿದ್ದು, ಜಯ ಹೇ.. ಜಯ ಹೇ ಎಂದು ಕೊನೆಗೊಳಿಸಿದ್ದಾರೆ.
ಈ ಸನ್ನಿವೇಶದ ವಿಡಿಯೋ ತುಣುಕನ್ನು ಭಾರತೀಯ ಜನತಾ ಪಾರ್ಟಿಯ ವಕ್ತಾರ ಸಂಬಿತ್ ಪಾತ್ರ ಟ್ವೀಟ್ ಮಾಡಿದ್ದಾರೆ. ಜೊತೆಗೆ ಮುಜುಗರದಿಂದ ಪಾರಾಗಲು ಕೊನೆಯದಾಗಿ ಜಯ ಹೇ.. ಜಯ ಹೇ ಎನ್ನುವ ಉತ್ತಮ ಮಾರ್ಗ ಕಂಡುಕೊಂಡಿದ್ದಾರೆ. ಇದು ಸಮಾಜವಾದಿ ಪಕ್ಷ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಬೈಡನ್ ನೀವು ನಮಗೆ ದ್ರೋಹ ಮಾಡಿದ್ದೀರಿ: ಶ್ವೇತ ಭವನದ ಮುಂದೆ ಅಫ್ಘಾನ್ ಪ್ರಜೆಗಳ ಪ್ರತಿಭಟನೆ