ಶಹಜಹಾನ್‌ಪುರ(ಉತ್ತರಪ್ರದೇಶ): ಸಮಾಜವಾದಿ ಪಕ್ಷ (ಎಸ್‌ಪಿ), ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮತ್ತು ಕಾಂಗ್ರೆಸ್ ತಮ್ಮ ಕುಟುಂಬಕ್ಕಾಗಿ ಮಾತ್ರ ಬದುಕುತ್ತವೆ ಮತ್ತು ರಾಜವಂಶಗಳನ್ನು ಪ್ರೋತ್ಸಾಹಿಸುತ್ತವೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಟೀಹಾ ಪ್ರಹಾರ ನಡೆಸಿದ್ದಾರೆ.
ಶಹಜಹಾನ್‌ಪುರದಲ್ಲಿ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಉತ್ತರಪ್ರದೇಶದಲ್ಲಿ ಡಬಲ್ ಇಂಜಿನ್ ಸರ್ಕಾರ ದುಪ್ಪಟ್ಟು ವೇಗದಲ್ಲಿ ಕೆಲಸ ಮಾಡುತ್ತಿದೆ. "ಎಸ್‌ಪಿ, ಬಿಎಸ್‌ಪಿ, ಕಾಂಗ್ರೆಸ್‌ಗಳು ತಮ್ಮ ಕುಟುಂಬಕ್ಕಾಗಿ ಬದುಕುತ್ತಾರೆ.
ಅವರು ರಾಜವಂಶಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ. ನಾವು ರಾಷ್ಟ್ರೀಯತೆಯ ಬಗ್ಗೆ ಮಾತನಾಡಿದರೆ ಅವರು ಜಾತೀಯತೆಯ ಬಗ್ಗೆ ಮಾತನಾಡುತ್ತಾರೆ. ನಾವು ಅಭಿವೃದ್ಧಿಯ ಬಗ್ಗೆ ಮಾತನಾಡುತ್ತೇವೆ. ಅವರು ಧರ್ಮ ಮತ್ತು ಸ್ಮಶಾನಗಳ ಬಗ್ಗೆ ಮಾತನಾಡುತ್ತಾರೆ.
ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕೋವಿಡ್-19 ಲಸಿಕೆ ಬಗ್ಗೆ ಅಪಪ್ರಚಾರ ಮಾಡುತ್ತಾರೆ. ಅಪರಾಧವನ್ನು ಉತ್ತೇಜಿಸುವ ಹಾಗೂ ಮಾಫಿಯಾಗೆ ಪ್ರೋತ್ಸಾಹ ನೀಡುವವರಿಗೆ ಮತ ಹಾಕಬೇಡಿ ಎಂದು ಇದೇ ವೇಳೆ ಯೋಗಿ ಆದಿತ್ಯನಾಥ ಮನವಿ ಮಾಡಿದರು.
ಉತ್ತರ ಪ್ರದೇಶದಲ್ಲಿ ಏಳು ಹಂತದ ಅಸೆಂಬ್ಲಿ ಚುನಾವಣೆ ಫೆಬ್ರವರಿ 10ರಂದು ಪ್ರಾರಂಭವಾಗಿದೆ. ರಾಜ್ಯ ವಿಧಾನಸಭೆಗೆ 2ನೇ ಹಂತದ ಮತದಾನ ಫೆಬ್ರವರಿ 14ರಂದು ನಿಗದಿಯಾಗಿದೆ. ಒಟ್ಟಾರೆ 55 ವಿಧಾನಸಭಾ ಕ್ಷೇತ್ರಗಳಿಗೆ 2ನೇ ಹಂತದಲ್ಲಿ ಸಹರಾನ್‌ಪುರ, ಬಿಜ್ನೋರ್, ಅಮ್ರೋಹಾ ಒಂಬತ್ತು ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ.
ಓದಿ: ಯುಪಿ ಚುನಾವಣೆ : 586 ಅಭ್ಯರ್ಥಿಗಳಲ್ಲಿ ಶೇ.25ರಷ್ಟು ಮಂದಿ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿ - ಎಡಿಆರ್